ಪೋಲ್ಯಾಂಡ್ ಗಣರಾಜ್ಯದ ಅಧ್ಯಕ್ಷರನ್ನು ವ್ಯಾಟಿಕನ್ನಿಗೆ ಸ್ವಾಗತಿಸಿದ ಪೋಪ್
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಹದಿನಾಲ್ಕನೇ ಲಿಯೋ ಅವರು ಪೋಲ್ಯಾಂಡ್ ಗಣರಾಜ್ಯದ ಅಧ್ಯಕ್ಷರಾದ ಆಂದ್ರೇಜ್ ಡುಡಾ ಅವರನ್ನು ವ್ಯಾಟಿಕನ್ನಿಗೆ ಸ್ವಾಗತಿಸಿದ್ದಾರೆ. ಈ ಭೇಟಿಯ ವೇಳೆ ಉಭಯ ನಾಯಕರು ಉಕ್ರೇನ್ ಯುದ್ಧದ ಕುರಿತು ಮಾತನಾಡಿದ್ದಾರೆ.
ಡುಡಾ ಅವರು ಆಗಸ್ಟ್ 2025 ರಲ್ಲಿ ಅಧ್ಯಕ್ಷ ಹುದ್ದೆಯಿಂದ ಅವರ ಅವಧಿ ಪೂರ್ಣಗೊಳ್ಳುವ ಕಾರಣ ನಿರ್ಗಮಿಸಲಿದ್ದಾರೆ. ಇವರು 2015 ರಲ್ಲಿ ಹಾಗೂ 2020 ರಲ್ಲಿ ಪೋಲ್ಯಾಂಡ್ ದೇಶದ ಅಧ್ಯಕ್ಷರಾಗಿ ಎರಡು ಅವಧಿಗೆ ಸೇವೆ ಸಲ್ಲಿಸಿದ್ದಾರೆ. ಪೋಲ್ಯಾಂಡ್ ಸಂವಿಧಾನದ ಪ್ರಕಾರ ಒಬ್ಬರು ಎರಡು ಅವಧಿಗೆ ಮಾತ್ರ ಅಧ್ಯಕ್ಷರಾಗಿ ಸೇವೆ ಸಲ್ಲಿಸಬಹುದಾಗಿದೆ.
ವ್ಯಾಟಿಕನ್ ಮಾಧ್ಯಮ ಕಚೇರಿಯ ಪತ್ರಿಕಾ ಹೇಳಿಕೆಯ ಪ್ರಕಾರ ಅಧ್ಯಕ್ಷ ಕಾರ್ಲೋಸ್ ಮ್ಯಾನುಯೇಲ್ ವಿಲ ನೋವ ಅವರು ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೋ ಪರೋಲಿನ್ ಹಾಗೂ ವ್ಯಾಟಿಕನ್ ವಿದೇಶಾಂಗ ಸಂಪರ್ಕಗಳ ಕಾರ್ಯದರ್ಶಿ ಆರ್ಚ್'ಬಿಷಪ್ ಪೌಲ್ ರಿಚರ್ಡ್ ಗ್ಯಾಲಘರ್ ಅವರನ್ನು ಭೇಟಿ ಮಾಡಿ ಮಾತುಕತೆಯನ್ನು ನಡೆಸಿದ್ದಾರೆ.
ವ್ಯಾಟಿಕನ್ ಪತ್ರಿಕಾ ಹೇಳಿಕೆಯ ಪ್ರಕಾರ ಉಭಯ ಪಕ್ಷಗಳ ಮಾತುಕತೆಗಳು ಸೌಹಾರ್ದಯುತವಾಗಿದ್ದು, ಫಲಪ್ರದಾಯಕವಾಗಿದ್ದವು. ವ್ಯಾಟಿಕನ್ ಹಾಗೂ ಪೋಲ್ಯಾಂಡ್ ದೇಶದ ನಡುವಿನ ಉತ್ತಮ ಸಂಬಂಧದ ಕುರಿತು ಚರ್ಚೆಗಳು ನಡೆದು, ಆ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು ಎಂಬ ಅನಿಸಿಕೆ ಉಭಯ ನಾಯಕರು ವ್ಯಕ್ತಪಡಿಸಿದರು.