ಪೋಪ್ ಲಿಯೋ ಅವರ ಜುಲೈ ತಿಂಗಳ ಪ್ರಾರ್ಥನಾ ಉದ್ದೇಶ: ಧಾರ್ಮಿಕ ತರಭೇತಿಯಲ್ಲಿ ವಿವೇಚನೆ
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಲಿಯೋ ಅವರು ಜುಲೈ ತಿಂಗಳ ತಮ್ಮ ಪ್ರಾರ್ಥನಾ ಉದ್ದೇಶದ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋ ಸಂದೇಶದಲ್ಲಿ ಬದುಕಿನಲ್ಲಿ ನಾವು ಸರಿಯಾದ ನಿರ್ಧಾರಗಳನ್ನು ಹಾಗೂ ಸರಿಯಾದ ಹಾದಿಯನ್ನು ಆರಿಸಿಕೊಳ್ಳಲು ವಿವೇಚನೆಯನ್ನು ದೇವರು ನೀಡುವಂತೆ ಪ್ರಾರ್ಥಿಸಬೇಕೆಂದು ಕರೆ ನೀಡಿದರು.
ಕ್ರಿಸ್ತರಿಂದ ನಮ್ಮನ್ನು ಬೇರ್ಪಡಿಸುವ ಎಲ್ಲಾ ಹಾದಿಗಳಿಂದ ನಾವು ದೂರವಾಗಿ ಬದುಕಿನಲ್ಲಿ ನಾವು ಸರಿಯಾದ ನಿರ್ಧಾರಗಳನ್ನು ಹಾಗೂ ಸರಿಯಾದ ಹಾದಿಯನ್ನು ಆರಿಸಿಕೊಳ್ಳಲು ವಿವೇಚನೆಯನ್ನು ದೇವರು ನೀಡುವಂತೆ ಪ್ರಾರ್ಥಿಸಬೇಕೆಂದು ಪೋಪ್ ಹದಿನಾಲ್ಕನೇ ಲಿಯೋ ಅವರು ಕರೆ ನೀಡಿದರು.
ನಾವು ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳನ್ನು ಪವಿತ್ರಾತ್ಮರು ಪ್ರೇರೇಪಿಸಲಿ ಎಂದು ಪೋಪ್ ಲಿಯೋ ಅವರು ತಮ್ಮ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.
ನಮ್ಮೆಲ್ಲಾ ಆಯ್ಕೆಗಳು ಹಾಗೂ ನಿರ್ಧಾರಗಳು ಶುಭಸಂದೇಶದ ಹರ್ಷಕ್ಕೆ ಕಾರಣವಾಗಬೇಕು ಎಂದು ಹೇಳಿರುವ ಪೋಪ್ ಲಿಯೋ ಅವರು ಸದಾ ನಿಮ್ಮ ಹಾದಿಯನ್ನು ಹಿಂಬಾಲಿಸಲು ನನಗೆ ಬೇಕಾದ ವಿವೇಚನೆಯನ್ನು ನೀಡು ಎಂದು ಪ್ರಭುವಿನಲ್ಲಿ ಪ್ರಾರ್ಥಿಸಿದ್ದಾರೆ.
"ನಮ್ಮನ್ನು ಯಾವುದು ಪ್ರೇರೇಪಿಸುತ್ತದೆ ಎಂದು ತಿಳಿದುಕೊಳ್ಳುವ ಜ್ಞಾನವನ್ನು ನನಗೆ ನೀಡಿರಿ ಏಕೆಂದರೆ ನಿಮ್ಮಿಂದ ಬೇರ್ಪಡಿಸುವ ಎಲ್ಲವುಗಳಿಂದ ನಾನು ಮುಕ್ತನಾಗಿ ನಿಮ್ಮ ಹಾದಿಗೆ ಮರಳುವಂತಾಗಲಿ" ಎಂದು ಅಂತಿಮವಾಗಿ ಪೋಪ್ ಲಿಯೋ ಅವರು ಪ್ರಾರ್ಥಿಸಿದ್ದಾರೆ.