ಕಾಂಗೋ ಮೇಲೆ ದಾಳಿ; ಹಿಂಸಿಸಲ್ಪಟ್ಟ ಕ್ರೈಸ್ತರಿಗಾಗಿ ಪ್ರಾರ್ಥಿಸುವಂತೆ ಪೋಪ್ ಕರೆ
ವರದಿ: ವ್ಯಾಟಿಕನ್ ನ್ಯೂಸ್
ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ ಚರ್ಚ್ ಮೇಲೆ ನಡೆದ ಮಾರಕ ದಾಳಿಯ ನಂತರ, ಪೋಪ್ ಲಿಯೋ XIV ಅವರು ಅಂತಹ ದುರಂತಗಳನ್ನು ತಡೆಗಟ್ಟಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕೆಂದು ಉತ್ಸಾಹಭರಿತ ಮನವಿಯನ್ನು ಮಾಡುತ್ತಾರೆ ಮತ್ತು ಹಿಂಸೆ ಮತ್ತು ಕಿರುಕುಳದಿಂದ ಬಳಲುತ್ತಿರುವ ಎಲ್ಲಾ ಕ್ರೈಸ್ತರಿಗಾಗಿ ತಾವು ಪ್ರಾರ್ಥಿಸುತ್ತಿರುವುದಾಗಿ ಭರವಸೆ ನೀಡುತ್ತಾರೆ.
ಪೋಪ್ ಲಿಯೋ XIV ಅವರು ತಮ್ಮ ಬೇಸಿಗೆ ರಜೆಯ ನಂತರ ಪೋಪ್ ಅವರ ಮೊದಲ ಸಾರ್ವಜನಿಕ ಭೇಟಿಯ ಹಿನ್ನೆಲೆ ಸೇಂಟ್ ಪೀಟರ್ಸ್ ಚೌಕದಲ್ಲಿ ಬುಧವಾರದ ಸಾರ್ವಜನಿಕ ಭೇಟಿಯ ಸಂದರ್ಭದಲ್ಲಿ ಈ ಹೇಳಿಕೆಗಳನ್ನು ನೀಡಿದರು. ದೇಶದ ಇಟುರಿ ಪ್ರಾಂತ್ಯದ ಕೊಮಂಡಾದಲ್ಲಿರುವ ಪೂಜ್ಯ ಅನುರೈಟ್ ಧರ್ಮಕೇಂದ್ರದ ಮೇಲೆ ನಡೆದ ಮಾರಕ ದಾಳಿಯನ್ನು ಅವರು ತಮ್ಮ ಮನವಿಯಲ್ಲಿ ಖಂಡಿಸಿದರು.
ಪೂರ್ವ ಕಾಂಗೋದ ಇಟುರಿ ಪ್ರಾಂತ್ಯದಲ್ಲಿ ಭಾನುವಾರ ಬಂಡುಕೋರರು ಕಥೋಲಿಕ ಚರ್ಚ್‌ಗೆ ನುಗ್ಗಿ ಭಕ್ತರ ಮೇಲೆ ಗುಂಡು ಹಾರಿಸಿದಾಗ 40 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 38 ಜನರು ಚರ್ಚ್‌ನಲ್ಲಿ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ. ಅದೇ ರೀತಿ ಹತ್ತಿರದ ಹಳ್ಳಿಯಲ್ಲಿ ಹಲವಾರು ಜನರು ಸಾವನ್ನಪ್ಪಿದ್ದಾರೆ.
"ಗಾಯಗೊಂಡವರಿಗಾಗಿ ಮತ್ತು ಪ್ರಪಂಚದಾದ್ಯಂತ ಹಿಂಸೆ ಮತ್ತು ಕಿರುಕುಳವನ್ನು ಅನುಭವಿಸುತ್ತಿರುವ ಎಲ್ಲಾ ಕ್ರೈಸ್ತರಿಗಾಗಿ ನಾನು ಪ್ರಾರ್ಥಿಸುತ್ತೇನೆ" ಎಂದು ಪೋಪ್ ಹದಿನಾಲ್ಕನೇ ಲಿಯೋ ಅವರು ಹೇಳಿದರು.