MAP

ವಿಶ್ವಗುರುಗಳ ಬೇಸಿಗೆ ನಿವಾಸದ ಕುರಿತ ಸಂಕ್ಷಿಪ್ತ ಇತಿಹಾಸ

ಸುಮಾರು 16ನೇ ಶತಮಾನದಿಂದ ಇಲ್ಲಿಯವರೆಗೂ ಕಥೋಲಿಕ ಧರ್ಮಸಭೆಯ ವಿಶ್ವಗುರುಗಳು ಬೇಸಿಗೆಯ ಸಂದರ್ಭದಲ್ಲಿ ತಮ್ಮ ಬೇಸಿಗೆ ರಜೆಯನ್ನು ಕಳೆಯಲು ರೂಮ್ ನಗರದಿಂದ 13 ಮೈಲಿಗಳಷ್ಟು ದೂರವಿರುವ ಕ್ಯಾಸ್ಟಲ್ ಗಂಡೋಲ್ಫೋ ನಿವಾಸಕ್ಕೆ ತೆರಳಿ ಅಲ್ಲಿಗೆ ತಮ್ಮ ಬೇಸಿಗೆ ರಜೆಯನ್ನು ಕಳೆಯುವುದು ವಾಡಿಕೆಯಾಗಿದೆ.

ವರದಿ: ವ್ಯಾಟಿಕನ್ ನ್ಯೂಸ್

ಕ್ರಿಸ್ತಶಕ 10626ರಲ್ಲಿ ಪ್ರಪ್ರಥಮ ಬಾರಿಗೆ ವಿಶ್ವಗುರು ಎಂಟನೇ ಉರ್ಬನ್ ಅವರು ಮೊಟ್ಟಮೊದಲ ಬಾರಿಗೆ ಈ ಬೇಸಿಗೆ ನಿವಾಸದಲ್ಲಿ ತಮ್ಮ ರಜೆಯನ್ನು ಕಳೆಯಲು ಆರಂಭಿಸಿದರು. ಅಲ್ಲಿಂದ ಈವರೆಗೂ ವಿಶ್ವಗುರುಗಳು ತಮ್ಮ ಬೇಸಿಗೆ ರಜೆಯನ್ನು ಇದೇ ನಿವಾಸದಲ್ಲಿ ಕಳೆಯುತ್ತಾರೆ.

ಪ್ರಾಚೀನ ರೋಮನ್ ಚಕ್ರವರ್ತಿ ಡೊಮಿಷನ್ ಎಂಬಾತ ಈ ನಿವಾಸವನ್ನು ಕಟ್ಟಿಸಿದ ಎಂಬ ಇತಿಹಾಸವಿದೆ. ಯುದ್ಧಗಳ ಸಂದರ್ಭದಲ್ಲಿ ಚಕ್ರವರ್ತಿ ಡೊಮಿಷನ್ ಅರಮನೆಯು ನೆಲಸಮವಾಗಿ, ಪಾಳು ಬಿದ್ದಾಗ, ಈ ಜಾಗದಲ್ಲಿ ಗಂಡೋಲ್ಫೋ ಕುಟುಂಬವು ತಮಗಾಗಿ ಒಂದು ಬಂಗಲೆಯನ್ನು ನಿರ್ಮಿಸುತ್ತಾರೆ. ತದನಂತರ ಈ ಗಂಡೋಲ್ಫೋ ಕುಟುಂಬದಿಂದ ಸೆವಲ್ಲಿ ಕುಟುಂಬಕ್ಕೆ ಹಸ್ತಾಂತರವಾಗುತ್ತದೆ. ಆದರೆ, ಹಲವು ಹಣಕಾಸಿನ ವಿಷಯಗಳು ಸೇರಿದಂತೆ ಉಂಟಾದ ಆರ್ಥಿಕ ಸಮಸ್ಯೆಗಳಿಂದಾಗಿ ಈ ಬಂಗಲೆಯ ಮಾಲೀಕತ್ವವು ಪವಿತ್ರ ಪೀಠದ ಪಾಲಾಗುತ್ತದೆ. ಅಂದಿನಿಂದ ಈವರೆಗೂ ಸಹ ಇದು ಪವಿತ್ರ ಪೀಠದ ಆಸ್ತಿಯಾಗಿದೆ. ಬೇಸಿಗೆಯಲ್ಲಿ ವಿಶ್ವಗುರುಗಳು ಸಮಯವನ್ನು ಕಳೆಯಲು ಈ ಅರಮನೆಯನ್ನು ವಿಶೇಷವಾಗಿ ನಿರ್ಮಿಸಲಾಗಿದೆ.

ಪವಿತ್ರ ಪೀಠ ಮತ್ತು ಇಟಲಿ ನಡುವೆ 1929 ರ ಲ್ಯಾಟರನ್ ಒಪ್ಪಂದಗಳಿಗೆ ಸಹಿ ಹಾಕಿದ ನಂತರ, ಕ್ಯಾಸ್ಟೆಲ್ ಗ್ಯಾಂಡೋಲ್ಫೊ ಪಾಪಲ್ ಬೇಸಿಗೆ ನಿವಾಸವಾಗಿ ತನ್ನ ಕಾರ್ಯವನ್ನು ಪುನರಾರಂಭಿಸಿತು. ಪ್ರಮುಖ ಪುನಃಸ್ಥಾಪನೆ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು ಮತ್ತು ಮೂರು ಪ್ರಮುಖ ಉದ್ಯಾನಗಳ ನಡುವೆ ಸಂಪರ್ಕಗಳನ್ನು ಸ್ಥಾಪಿಸಲಾಯಿತು: “ಗಿಯಾರ್ಡಿನೊ ಡೆಲ್ ಮೊರೊ” (“ದಿ ಮೂರ್ಸ್ ಗಾರ್ಡನ್”), ವಿಲ್ಲಾ ಸೈಬೋ ಮತ್ತು ವಿಲ್ಲಾ ಬಾರ್ಬೆರಿನಿ."

ಪೋಪ್ ಹದಿನಾಲ್ಕನೇ ಬೆನೆಡಿಕ್ಟ್ ಅವರು ಇಲ್ಲಿ ಬೇಸಿಗೆ ರಜೆಯನ್ನು ಕಳೆದ ಕೊನೆಯ ಪೋಪ್ ಆಗಿದ್ದಾರೆ. ಪೋಪ್ ಫ್ರಾನ್ಸಿಸ್ ಅವರು ಇಲ್ಲಿಗೆ ಮೂರು ಬಾರಿ ಭೇಟಿ ಮಾಡಿದ್ದರಾದರೂ ಸಹ ಇಲ್ಲಿ ಅವರು ತಂಗಲಿಲ್ಲ. ಇದೀಗ ಪೋಪ್ ಹದಿನಾಲ್ಕನೇ ಲಿಯೋ ಅವರು ತಮ್ಮ ಬೇಸಿಗೆ ರಜೆಯನ್ನು ಇಲ್ಲಿ ಕಳೆಯಲಿದ್ದಾರೆ.

07 ಜುಲೈ 2025, 19:01