ಬೇಸಿಗೆ ರಜೆಗೂ ಮುಂಚೆ ಕಾಸ್ಟೆಲ್ ಗೊಂಡಾಲ್ಫೋಗೆ ಭೇಟಿ ನೀಡಿದ ಪೋಪ್
ವರದಿ: ವ್ಯಾಟಿಕನ್ ನ್ಯೂಸ್
ಕಾಸ್ಟೆಲ್ ಗೊಂಡಾಲ್ಫೋದ ಪೋಪರ ಬೇಸಿಗೆ ನಿವಾಸದಲ್ಲಿ ರಿಪೇರಿ ಕಾರ್ಯಗಳನ್ನು ಪರಿಶೀಲಿಸಲು ಪೋಪ್ ಹದಿನಾಲ್ಕನೇ ಲಿಯೋ ಅವರು ಇಂದು ಅಲ್ಲಿಗೆ ಭೇಟಿ ನೀಡಿದ್ದಾರೆ. ಜುಲೈ 6 ರಿಂದ ಅವರು ತಮ್ಮ ಬೇಸಿಗೆ ರಜೆಯನ್ನು ಇಲ್ಲಿ ಕಳೆಯಲಿದ್ದಾರೆ.
ಜುಲೈ 3 ರಂದು ಮಧ್ಯಾಹ್ನ ಪೋಪ್ ಹದಿನಾಲ್ಕನೇ ಲಿಯೋ ಅವರು ಕಾಸ್ಟೆಲ್ ಗೊಂಡಾಲ್ಫೋದ ಪೋಪರ ಬೇಸಿಗೆ ನಿವಾಸದಲ್ಲಿ ರಿಪೇರಿ ಕಾರ್ಯಗಳನ್ನು ಪರಿಶೀಲಿಸಲು ಭೇಟಿ ನೀಡಿದರು. ಜುಲೈ 20 ರವರೆಗೆ ಪೋಪ್ ಅವರು ಇಲ್ಲಿ ತಮ್ಮ ಬೇಸಿಗೆ ರಜೆಯನ್ನು ಕಳೆಯದಲಿದ್ದಾರೆ ಎಂದು ವರದಿಯಾಗಿದೆ.
ಈ ಹದಿನಾಲ್ಕು ದಿನಗಳ ಅವಧಿಯಲ್ಲಿ ಪೋಪ್ ಲಿಯೋ ಅವರು ಇಲ್ಲಿನ ಪೊಂಟಿಫಿಕಲ್ ಧರ್ಮಕೇಂದ್ರ ವಿಲ್ಲನೋವಾದ ಸಂತ ತೋಮಾಸರ ದೇವಾಲಯದಲ್ಲಿ ಭಾನುವಾರದಂದು ಬಲಿಪೂಜೆಯನ್ನು ಅರ್ಪಿಸಲಿದ್ದಾರೆ. ಪ್ರೇಷಿತ ಅರಮನೆಯ ಬಳಿ ಇರುವ ಸ್ವಾತಂತ್ರ್ಯ ಚೌಕದಿಂದ ಅವರು ಭಾನುವಾರ ತ್ರಿಕಾಲ ಪ್ರಾರ್ಥನೆಯನ್ನು ನಡೆಸಲಿದ್ದಾರೆ.
ಜುಲೈ 20 ರಂದು ಪೋಪ್ ಲಿಯೋ ಅವರು ಮತ್ತೆ ಇಲ್ಲಿನ ಸಂತ ಅಲ್ಬಾನೋ ಪ್ರಧಾನಾಲಯದಲ್ಲಿ ಬಲಿಪೂಜೆಯನ್ನು ಅರ್ಪಿಸಲಿದ್ದಾರೆ. ಪೋಪ್ ಆಗಿ ಚುನಾಯಿತರಾಗುವುದಕ್ಕೂ ಮುಂಚೆ ಅಂಧಿನ ಕಾರ್ಡಿನಲ್ ರಾಬರ್ಟ್ ಫ್ರಾನ್ಸಿಸ್ ಪ್ರೆವೋಸ್ಟ್ ಅವರು ಅಲ್ಬಾನೋ ಧರ್ಮಕ್ಷೇತ್ರದ ನಾಮಾಂಕಿತ ಧರ್ಮಾಧ್ಯಕ್ಷರಾಗಿದ್ದರು.
ಜುಲೈ ತಿಂಗಳಾದ್ಯಂತ ಎಲ್ಲಾ ಖಾಸಗಿ ಹಾಗೂ ಸಾರ್ವಜನಿಕ ಭೇಟಿಗಳನ್ನು ರದ್ದುಮಾಡಲಾಗಿದೆ. ಜುಲೈ 30 ರಿಂದ ಸಾರ್ವಜನಿಕ ಭೇಟಿ ಕಾರ್ಯಕ್ರಮಗಳು ಮತ್ತೆ ಆರಂಭವಾಗಲಿವೆ.