MAP

ಕಾಸ್ಟೆಲ್ ಗಂಡೋಲ್ಫೋದ ಬಲಿಪೂಜೆಯಲ್ಲಿ ಪೋಪ್: ಕ್ರಿಸ್ತರನ್ನು ಅನುಸರಿಸೋಣ

ಕಾಸ್ಟೆಲ್ ಗಂಡೋಲ್ಫೋ ಪ್ರದೇಶದಲ್ಲಿರುವ ಸಂತ ಥಾಮಸ್ ಆಫ್ ವಿಲ್ಲನೋವ ಧರ್ಮಕೇಂದ್ರದಲ್ಲಿ ಪೋಪ್ ಹದಿನಾಲ್ಕನೇ ಲಿಯೋ ಅವರು ಇಂದು ಬಲಿಪೂಜೆಯನ್ನು ಅರ್ಪಿಸಿದ್ದಾರೆ. ಎಲ್ಲಾ ಸಂದರ್ಭದಲ್ಲಿಯೂ ಪರಮ ಸದಯ ಸಮಾರಿತರಾಗಿರುವ ಕ್ರಿಸ್ತರ ನೆರವಿಗೆ ನಾವು ಸದಾ ಹಾತೊರೆಯಬೇಕು ಎಂದು ಹೇಳಿದ್ದಾರೆ. ದೇವರ ಪ್ರೀತಿ ಹಾಗೂ ಸೌಖ್ಯವನ್ನು ನಾವು ಅನುಭವಿಸಿದರೆ, ಅದನ್ನು ನಾವು ಮತ್ತೊಬ್ಬರಿಗೆ ನೀಡಲು ಸಾಧ್ಯವಾಗುತ್ತದೆ ಎಂದು ಅವರು ಈ ಬಲಿಪೂಜೆಯಲ್ಲಿ ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪ್ರಸ್ತುತ ಪೋಪ್ ಹದಿನಾಲ್ಕನೇ ಲಿಯೋ ಅವರು ಕಾಸ್ಟೆಲ್ ಗಂಡೋಲ್ಫೋದಲ್ಲಿ ರಜೆ ದಿನಗಳನ್ನು ಕಳೆಯುತ್ತಿದ್ದಾರೆ. ಬಲಿಪೂಜೆಯನ್ನು ಆರಂಭಿಸುವುದಕ್ಕೂ ಮುಂಚಿತವಾಗಿ ಪೋಪ್ ಲಿಯೋ ಅವರು ಈ ಬಲಿಪೂಜೆಯನ್ನು ನಿಮ್ಮೊಂದಿಗೆ ಅರ್ಪಿಸುತ್ತಿರುವುದಕ್ಕೆ ನನಗೆ ಬಹಳ ಸಂತೋಷವಾಗಿದೆ ಎಂದು ಭಕ್ತಾಧಿಗಳಿಗೆ ಹೇಳಿದರು.

ಇಂದಿನ ಶುಭಸಂದೇಶದ ಸಾಮತಿಯ ಮೇಲೆ ಚಿಂತನೆಯನ್ನು ಕೇಂದ್ರೀಕರಿಸಿದ ಪೋಪ್ ಲಿಯೋ ಅವರು "ಇಂದಿನ ಶುಭಸಂದೇಶದಲ್ಲಿ ನಾವು ಕ್ರಿಸ್ತರ ಬಹಳ ಸುಂದರ ಸಾಮತಿಗಳಲ್ಲೊಂದಾದ ಸದಯ ಸಮಾರಿತನ ಸಾಮತಿಯನ್ನು ಕೇಳುತ್ತೇವೆ. ಈ ಸಾಮತಿಯು ನಾವು ಸದಾ ನಮ್ಮ ಬದುಕಿನ ಬಗ್ಗೆ ಚಿಂತಿಸುತ್ತಾ, ಬದುಕಿನಲ್ಲಿ ಬರುವ ಸಂಕಷ್ಟಗಳು ಹಾಗೂ ಸವಾಲುಗಳ ಕುರಿತಂತೆ ಚಿಂತಿಸಲು ನಮ್ಮನ್ನು ಪ್ರೇರೇಪಿಸುತ್ತದೆ. ಕೆಲವೊಮ್ಮೆ ನಾವು ಬಾಹ್ಯ ಆಚರಣೆಗಳಿಂದ ತೋರಿಕೆ ಎಂಬ ಮೋಹಕ್ಕೆ ಬಲಿಯಾಗಿ ದೇವರ ದಯೆಯನ್ನು ಹಾಗೂ ಅನುಕಂಪವನ್ನು ಮರೆತುಬಿಡುತ್ತೇವೆ" ಎಂದು ಪೋಪ್ ಲಿಯೋ ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

"ನಾವು ಇತರರನ್ನು ನೋಡುವ ಬಗೆ ಬದಲಾಗಬೇಕು. ಕ್ರಿಸ್ತರು ಅವರನ್ನು ನೋಡಿದಂತೆ ಕರುಣೆಯಿಂದ ನೋಡಬೇಕು. ಅವರ ಗಾಯಗಳನ್ನು ಗುಣಪಡಿಸಲು ನಾವು ಸದಾ ಪ್ರಯತ್ನಿಸಬೇಕು. ಕ್ರಿಸ್ತರಂತೆ ನಾವು ಇತರರ ನೋವಿಗೆ ಸ್ಪಂದಿಸುವಂತವರಾಗಬೇಕೆ ವಿನಃ ದಾರಿಹೋಕರಂತೆ ರಸ್ತೆ ಬದಿಯಲ್ಲಿ ನಿಂತು ನೋಡುವಂತವರಾಗಬೇಕು" ಎಂದು ಪೋಪ್ ಲಿಯೋ ಅವರು ಹೇಳಿದರು.

13 ಜುಲೈ 2025, 16:59