MAP

ಕಾರ್ಡಿನಲ್ ಡ್ರಿ ನಿಧನಕ್ಕೆ ಸಂತಾಪ ಸೂಚಿಸಿದ ಪೋಪ್ ಲಿಯೋ XIV

ಪೋಪ್ ಹದಿನಾಲ್ಕನೇ ಲಿಯೋ ಅವರು ಕಾರ್ಡಿನಲ್ ಲೂಯಿಸ್ ಪಾಸ್ಕುವಲ್ ಡ್ರೀ ಓ.ಎಫ್.ಎಂ. ಕಪುಚಿನ್ ಅವರ ನಿಧನದ ಹಿನ್ನೆಲೆ ಸಂತಾಪ ಸಂದೇಶವನ್ನು ಕಳುಹಿಸಿದ್ದಾರೆ. ಕಾರ್ಡಿನಲ್ ಡ್ರೀ ಅವರು ಪಾಪನಿವೇದನೆ ಸಂಸ್ಕಾರದ ಸೇವೆಯಿಂದ ಪ್ರಸಿದ್ಧರಾಗಿದ್ದರು.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಹದಿನಾಲ್ಕನೇ ಲಿಯೋ ಅವರು ಕಾರ್ಡಿನಲ್ ಲೂಯಿಸ್ ಪಾಸ್ಕುವಲ್ ಡ್ರೀ ಓ.ಎಫ್.ಎಂ. ಕಪುಚಿನ್ ಅವರ ನಿಧನದ ಹಿನ್ನೆಲೆ ಸಂತಾಪ ಸಂದೇಶವನ್ನು ಕಳುಹಿಸಿದ್ದಾರೆ. ಕಾರ್ಡಿನಲ್ ಡ್ರೀ ಅವರು ಪಾಪನಿವೇದನೆ ಸಂಸ್ಕಾರದ ಸೇವೆಯಿಂದ ಪ್ರಸಿದ್ಧರಾಗಿದ್ದರು.

ಕಾರ್ಡಿನಲ್ ಡ್ರೀ ಅವರು ಜೂನ್ 30 ರಂದು ಅರ್ಜೆಂಟೀನಾದ ರಾಜಧಾನಿ ಬ್ಯೂನಸ್ ಏರೀಸ್ ನಗರದಲ್ಲಿ ತಮ್ಮ 98ನೇ ವಯಸ್ಸಿನಲ್ಲಿ ನಿಧನರಾದರು.

2023 ರಲ್ಲಿ ದಿವಂಗತ ಪೋಪ್ ಫ್ರಾನ್ಸಿಸ್ ಅವರು ಇವರನ್ನು ಕಾರ್ಡಿನಲ್ ಪದವಿಗೇರಿಸಿದ್ದರು.

ಪೋಪ್ ಲಿಯೋ ಅವರ ಟೆಲಿಗ್ರಾಂ ಸಂದೇಶಕ್ಕೆ ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಪಿಯೆತ್ರೋ ಪರೋಲಿನ್ ಅವರು ಸಹಿ ಹಾಕಿದ್ದು, ಈ ಸಂದೇಶವನ್ನು ಬ್ಯೂನಸ್ ಏರಿಸ್ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರಿಗೆ ಕಳುಹಿಸಲಾಗಿದೆ ಎಂದು ವ್ಯಾಟಿಕನ್ ಮಾಧ್ಯಮ ಪೀಠವು ತಿಳಿಸಿದೆ.

ಧರ್ಮಸಭೆಗೆ ಕಾರ್ಡಿನಲ್ ಡ್ರೀ ಅವರ ಕೊಡುಗೆಗಳನ್ನು ಸ್ಮರಿಸಿದ ಪೋಪ್ ಲಿಯೋ ಅವರು "ಕಾರ್ಡಿನಲ್ ಡ್ರೀ ಅವರು ಪಾಪನಿವೇದನೆ ಸಂಸ್ಕಾರಕ್ಕೆ ನೀಡಿರುವ ಸೇವೆ ಅನನ್ಯ" ಎಂದು ಹೇಳಿದ್ದಾರೆ. 

02 ಜುಲೈ 2025, 17:32