ಅಮೇರಿಕದಲ್ಲಿರುವ ಬೈಝಂಟೈನ್ ಕಥೋಲಿಕರಿಗೆ ಸಂದೇಶ ಕಳುಹಿಸಿದ ಪೋಪ್ ಲಿಯೋ XIV
ವರದಿ: ವ್ಯಾಟಿಕನ್ ನ್ಯೂಸ್
ಅಮೇರಿಕಾದ ಪಿಟ್ಸ್'ಬರ್ಗ್'ನ ಬೈಝಂಟೈನ್ ಆರ್ಚ್'ಎಪಾರ್ಕಿ ಕಥೋಲಿಕರಿಗೆ ಅವರು ಸಭೆಯನ್ನು ಹಮ್ಮಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪೋಪ್ ಹದಿನಾಲ್ಕನೇ ಲಿಯೋ ಅವರು ಸಂದೇಶವನ್ನು ಕಳುಹಿಸಿದ್ದಾರೆ. ಅವರ ಸಭೆ ಧರ್ಮಸಭೆಯಲ್ಲಿನ ಸಹಯೋಗ ಮತ್ತು ಸಹಭಾಗಿತ್ವದ ಸಂಕೇತ ಎಂದು ಹೇಳಿದ್ದಾರೆ.
ಐಕ್ಯತೆ, ಚಿಂತನೆ ಹಾಗೂ ಆಧ್ಯಾತ್ಮಿಕ ನವೀಕರಣ ಮೂಲೆಗಲ್ಲಾಗಿ ಈ ಸಮ್ಮೇಳನದ ಶೀರ್ಷಿಕೆಯು ಕಾರ್ಯನಿರ್ವಹಿಸಬೇಕು. ತಮ್ಮ ಸಂದೇಶದಲ್ಲಿ ಪೋಪ್ ಲಿಯೋ ಅವರು ಸಮ್ಮೇಳನದ ಶೀರ್ಷಿಕೆಯ ಕುರಿತು ಮಾತನಾಡಿದ್ದಾರೆ. ಇದು ಕ್ರಿಸ್ತಲ್ಲಿ ಒಂದಾಗಿ ಹಾಗೂ ನಿಕಟವಾಗಿ ಬೆಳೆಯಲು ನಮಗೆ ನೆರವಾಗುತ್ತದೆ ಎಂದು ಹೇಳಿದರು.
ಈ ಸಮ್ಮೇಳನದ ಪೂಜಾವಿಧಿ ಆಚರಣೆಗಳು, ಪ್ರಾರ್ಥನೆಗಳು ಹಾಗೂ ಚಿಂತನೆಯಿಂದ ಕ್ರಿಸ್ತರಿಗೆ ಹಾಗೂ ಅವರ ಶುಭಸಂದೇಶಕ್ಕೆ ಸಾಕ್ಷಿಗಳಾಗುವುದೇ ನಮ್ಮ ಕರೆಯಾಗಿದೆ. ಈ ನಮ್ಮ ಸಹೋದರರು ಮಾಡುತ್ತಿರುವ ಸಮ್ಮೇಳನವು ಧರ್ಮಸಭೆಯಲ್ಲಿನ ಸಹಯೋಗ ಮತ್ತು ಸಹಭಾಗಿತ್ವದ ಸಂಕೇತ ಎಂದು ಹೇಳಿದ್ದಾರೆ.
ತಮ್ಮ ಸಂದೇಶವನ್ನು ಮುಕ್ತಾಯಗೊಳಿಸುತ್ತಾ, ಪೋಪ್ ಲಿಯೋ ಅವರು ಅಮೇರಿಕಾದಲ್ಲಿರುವ ಬೈಜಾಂಟೈನ್ ಸಮುದಾಯಕ್ಕೆ ತಮ್ಮ ಆಧ್ಯಾತ್ಮಿಕ ನಿಕಟತೆಯನ್ನು ಒತ್ತಿ ಹೇಳಿದರು ಮತ್ತು ಈ ಸಮ್ಮೇಳನವನ್ನು ಮಾತೆ ಮರಿಯಮ್ಮನವರ ಮಧ್ಯಸ್ಥಿಕೆಗೆ ವಹಿಸಿಕೊಟ್ಟಿದ್ದಾರೆ.