ಪೋಪ್" ಧಾರ್ಮಿಕ ಸಭೆಗಳು ಧರ್ಮಸಭೆಯ ವೈವಿಧ್ಯಮಯ ಸೇವಾಯೋಜನೆಯನ್ನು ಬಿಂಬಿಸುತ್ತವೆ
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಹದಿನಾಲ್ಕನೇ ಲಿಯೋ ಅವರು ವ್ಯಾಟಿಕನ್ನಿನಲ್ಲಿ ಮೂರು ಧಾರ್ಮಿಕ ಸಭೆಗಳ ಸದಸ್ಯರನ್ನು ಭೇಟಿ ಮಾಡಿದ್ದು, ಧಾರ್ಮಿಕ ಸಭೆಗಳು ಧರ್ಮಸಭೆಯ ವೈವಿಧ್ಯಮಯ ಸೇವಾಯೋಜನೆಯನ್ನು ಬಿಂಬಿಸುತ್ತವೆ. ಇದೇ ಧರ್ಮಸಭೆಯ ಸೌಂದರ್ಯ ಎಂದು ಹೇಳಿದ್ದಾರೆ.
ಸೊಸೈಟಿ ಆಫ್ ಆಫ್ರಿಕನ್ ಮಿಷನ್ಸ್, ಥರ್ಡ್ ಆರ್ಡರ್ ರೆಗ್ಯುಲರ್ ಆಫ್ ಸೇಂಟ್ ಫ್ರಾನ್ಸಿಸ್ ಹಾಗೂ ಕಾಂಗ್ರಿಗೇಷನ್ ಆಫ್ ದ ಸರ್ವೆಂಟ್ಸ್ ಆಫ್ ಪ್ಯಾರಕ್ಲೀಟ್ ಸಭೆಗಳ ಸದಸ್ಯರನ್ನು ಪೋಪ್ ಹದಿನಾಲ್ಕನೇ ಲಿಯೋ ಅವರು ವ್ಯಾಟಿಕನ್ನಿನಲ್ಲಿ ಭೇಟಿ ಮಾಡಿದ್ದಾರೆ.
ಈ ಭೇಟಿಯಲ್ಲಿ ಪೋಪ್ ಲಿಯೋ ಅವರು ಈ ಸಭೆಗಳ ಸದಸ್ಯರಿಗಾಗಿ ಪ್ರಾರ್ಥಿಸಿದರು. ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಲಿ ಸರ್ವದಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಪೋಪ್ ಅವರಿಗೆ ಕರೆ ನೀಡಿದರು.
"ಸೇವಾಕಾರ್ಯಕ್ಕಾಗಿ ನೀವು ನೀಡಿರುವ ನಿಮ್ಮ ಬದ್ಧತೆ ಹಾಗೂ ಶ್ರಮವು ನೀವು ಯಾವುದೇ ಆಂತರಿಕ ಅಥವಾ ಬಾಹ್ಯ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಅದರಿಂದ ಹೊರಬರಲು ಸಾಧ್ಯವಾಗಿದೆ. ನೀವು ವಿಶ್ವಾಸದಲ್ಲಿ ಬೆಳೆಯಲು ಅದು ನಿಮಗೆ ಪ್ರೇರಣೆಯಾಗಿದ್ದು, ಮತ್ತೊಮ್ಮೆ ಆಫ್ರಿಕಾ ಹಾಗೂ ಜಗತ್ತಿನ ಮೂಲೆ ಮೂಲೆಗಳಲ್ಲಿ ಸೇವಾಕಾರ್ಯವನ್ನು ಹುಮ್ಮಸ್ಸಿನಿಂದ ಮುಂದುವರೆಸಲು ಸಹಾಯಕವಾಗಿದೆ" ಎಂದು ಅವರು ಪೋಪ್ ಹದಿನಾಲ್ಕನೆ ಲಿಯೋ ಅವರು ಹೇಳಿದರು.
ಮುಂದುವರೆದು ಮಾತನಾಡಿದ ಪೋಪ್ ಲಿಯೋ ಅವರು "ಕ್ರಿಸ್ತರ ಶಿಲುಬೆಯನ್ನು ಅಪ್ಪಿಕೊಳ್ಳುವಂತೆ ಹಾಗೂ ಆ ಮೂಲಕ ಧೈರ್ಯದಿಂದ ಮುನ್ನಗುವಂತೆ" ಹೇಳಿದರು.
"ನಿಮ್ಮ ಧಾರ್ಮಿಕ ಸಭೆಗಳು ಹೊಂದಿರುವ ವಿವಿಧ ಸೇವಾಯೋಜನೆಯ ಧ್ಯೇಯಗಳು ಧರ್ಮಸಭೆಯು ಹೇಗೆ ವೈವಿಧ್ಯತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಅದೇ ತಾಳ್ಮೆ ಹಾಗೂ ಬದ್ಧತೆಯಿಂದ ಸೇವಯನ್ನು ಮುಂದುವರೆಸಬೇಕೆಂದು" ಎಲ್ಲಾ ಮೂರು ಧಾರ್ಮಿಕ ಸಭೆಗಳಿಗೆ ಪೋಪ್ ಹದಿನಾಲ್ಕನೇ ಲಿಯೋ ಅವರು ಕರೆ ನೀಡಿದರು.