ಸಾರ್ವಜನಿಕ ಭೇಟಿಯಲ್ಲಿ ಪೋಪ್: ನಾವು ಹತಾಶೆಗೆ ಒಳಗಾಗದಿರೋಣ
ವರದಿ: ಕೀಲ್ಷೆ ಗುಸ್ಸಿ
ವಾರದ ಸಾರ್ವಜನಿಕ ಭೇಟಿಯಲ್ಲಿ, ಪೋಪ್ ಲಿಯೋ ಅವರು ಬೆಥ್ಸದಾ ಕೊಳದ ಬಳಿ ಇದ್ದ ಪಾರ್ಶ್ವವಾಯು ರೋಗಿಯ ಕುರಿತು ಚಿಂತನೆಯನ್ನು ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ನಾವು ಆಧ್ಯಾತ್ಮಿಕ ನಿರಾಸಕ್ತಿಗೆ ಒಳಗಾಗುವ ಅಪಾಯವಿದೆ ಎಂದು ಹೇಳಿ, ಆ ಕುರಿತು ಎಚ್ಚರಿಸಿದ್ದಾರೆ.
ಮುಂದುವರೆದು ಮಾತನಾಡಿದ ಅವರು "ಯೇಸು ಕ್ರಿಸ್ತರು ನಮ್ಮ ಭರವಸೆ" ಎಂಬ ಜ್ಯುಬಿಲಿ ಶಿರ್ಷಿಕೆಯ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಜನರನ್ನು ಉದ್ದೇಶಿಸಿ, ಕೆಲವೊಮ್ಮೆ ನಾವು ಎಲ್ಲವೂ ಮುಗಿಯಿತು ಎಂದುಕೊಂಡು ಹತಾಶರಾಗುತ್ತೇವೆ. ಆದರೆ, ಅಂತಹ ಸಂದರ್ಭಗಳಲ್ಲಿ ನಾವು ಶುಭ ಸಂದೇಶವನ್ನು ನೆನಪಿಸಿಕೊಂಡು ಭರವಸೆಯನ್ನು ಹೊಂದಬೇಕು" ಎಂದು ಹೇಳಿದರು.
"ಯೇಸು ಕ್ರಿಸ್ತರು ಪಾರ್ಶ್ವವಾಯು ರೋಗಿಯನ್ನು ಗುಣಪಡಿಸುವಂತೆ ನಮ್ಮನ್ನೂ ಸಹ ಅವರು ಆದರಿಸುತ್ತಾರೆ" ಎಂದು ಹೇಳಿದ್ದಾರೆ. 38 ವರ್ಷಗಳಿಂದ ಪಾರ್ಶ್ವವಾಯುವಿಗೆ ಒಳಗಾಗಿ ತನ್ನ ಅದೃಷ್ಟಕ್ಕೆ ಶರಣಾಗಿದ್ದ ವ್ಯಕ್ತಿಯನ್ನು ಯೇಸು ಭೇಟಿಯಾದರು. ಈ ನಿರಾಶೆಯೇ ನಮ್ಮನ್ನು ಪಾರ್ಶ್ವವಾಯುವಿಗೆ ತಳ್ಳುತ್ತದೆ ಎಂದು ಪೋಪ್ ಹೇಳಿದರು, ಏಕೆಂದರೆ ನಾವು "ನಿರುತ್ಸಾಹಗೊಳ್ಳಬಹುದು ಮತ್ತು ಆಧ್ಯಾತ್ಮಿಕ ನಿರಾಸಕ್ತಿಗೆ ಬೀಳುವ ಅಪಾಯವಿದೆ." ಎಂದು ಅವರು ಹೇಳಿದರು.
ಪಾರ್ಶ್ವವಾಯು ಪೀಡಿತ ಮನುಷ್ಯನು ಯೇಸುವಿಗೆ ನೀಡಿದ ಪ್ರತಿಕ್ರಿಯೆಯು ಆ ಮನುಷ್ಯನು ಜೀವನವನ್ನು ಹೇಗೆ ನೋಡಲು ಆರಿಸಿಕೊಳ್ಳುತ್ತಾನೆ ಎಂಬುದನ್ನು ತೋರಿಸುತ್ತದೆ. ಕೊಳಕ್ಕೆ ಇಳಿಯಲು ಅವನಿಗೆ ಸಹಾಯ ಮಾಡಲು ಯಾರೂ ಇಲ್ಲ ಎಂದು ಅವನು ವಾದಿಸುತ್ತಾನೆ, "ಆದ್ದರಿಂದ ಆಪಾದನೆಯು ಅವನ ಮೇಲೆ ಅಲ್ಲ, ಆದರೆ ಅವನಿಗೆ ಸಹಾಯ ಮಾಡದ ಇತರರ ಮೇಲೆ ಹೊರಿಸಲ್ಪಟ್ಟಿದೆ." ಎಂಬ ಕುರಿತು ಪೋಪ್ ಅವರು ಪ್ರಶ್ನೆಯನ್ನು ಎತ್ತುತ್ತಾರೆ.
ಅಂತಿಮವಾಗಿ ಅವರು ನಾವು ಎಲ್ಲಿ ಬಿದ್ದಿದ್ದೇವೆ ಎಂಬುದನ್ನು ದೇವರು ನಮಗೆ ತೋರಿಸಿ, ಅವರ ವರದಾನಗಳಿಂದ ನಮ್ಮನ್ನು ಮುನ್ನಡೆಸಲಿ ಎಂದು ಹೇಳಿದರು.