MAP

ಪೋಪ್: ಅಮೆರಿಕಕ್ಕೆ ವಲಸೆ ಹೋದ ಇಟಲಿಯ ವಲಸಿಗರ ಗುರುತು ಕಥೋಲಿಕತೆ ಆಗಿದೆ

ನ್ಯಾಷನಲ್ ಇಟ್ಯಾಲಿಯನ್ ಅಮೇರಿಕನ್ ಫೌಂಡೇಶನ್ ಸದಸ್ಯರನ್ನು ಪೋಪ್ ಫ್ರಾನ್ಸಿಸ್ ಅವರು ವ್ಯಾಟಿಕನ್ನಿಗೆ ಸ್ವಾಗತಿಸಿದ್ದಾರೆ. ಇವರನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಹದಿನಾಲ್ಕನೇ ಲಿಯೋ ಅವರು ಅಮೇರಿಕಾಕ್ಕೆ ವಲಸೆ ಹೋದ ಇಟಾಲಿಯನ್ನರ ಗುರುತು ಅವರ ಕಥೋಲಿಕ ವಿಶ್ವಾಸವಾಗಿದೆ. ಸಂಕಷ್ಟದ ಸಮಯದಲ್ಲಿ ಅವರನ್ನು ಪೊರೆದದ್ದು ಇದೇ ವಿಶ್ವಾಸ ಎಂದು ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಈ ಮಾತುಗಳೊಂದಿಗೆ ಬುಧವಾರ ಪೋಪ್ ಲಿಯೋ ಅವರು ಸಾಮಾನ್ಯ ಭೇಟಿಗೂ ಮುಂಚಿತವಾಗಿ ಈ ಪ್ರತಿಷ್ಟಾನದ ಸದಸ್ಯರನ್ನು ಬರಮಾಡಿಕೊಂಡಿದ್ದಾರೆ. "ನಿಮಗೀಗಾಲೇ ತಿಳಿದಿರುವಂತೆ ಲಕ್ಷಾಂತರ ಅಮೇರಿಕನ್ನರು ಅತ್ಯಂತ ಹೆಮ್ಮೆಯಿಂದ ತಮ್ಮ ಇಟಾಲಿಯನ್ ಮೂಲವನ್ನು ನೆನಪಿಸಿಕೊಳ್ಳುತ್ತಾರೆ" ಎಂದು ಪೋಪ್ ಪಿಯೋ ಅವರು ಈ ಸಂದರ್ಭದಲ್ಲಿ ಹೇಳಿದರು.

ಇಟಾಲಿಯನ್ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಯುವಜನರಿಗೆ ಶಿಕ್ಷಣ ನೀಡುವ ಜೊತೆಗೆ ಎರಡೂ ದೇಶಗಳಲ್ಲಿ ವಿದ್ಯಾರ್ಥಿವೇತನಗಳು ಮತ್ತು ಇತರ ದತ್ತಿ ಸಹಾಯಗಳನ್ನು ಒದಗಿಸುವ ಅವರ ಕಾರ್ಯಕ್ಕಾಗಿ ಪೋಪ್ ಲಿಯೋ ಅವರಿಗೆ ಧನ್ಯವಾದ ಅರ್ಪಿಸಿದರು, ಇದು "ಎರಡೂ ರಾಷ್ಟ್ರಗಳ ನಡುವೆ ಪರಸ್ಪರ ಪ್ರಯೋಜನಕಾರಿ ಮತ್ತು ಗಟ್ಟಿಯಾದ ಸಂಪರ್ಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ" ಎಂದು ಅವರು ಹೇಳಿದರು.

ಭರವಸೆಯ ಜುಬಿಲಿ ವರ್ಷದಲ್ಲಿ ವ್ಯಾಟಿಕನ್‌ಗೆ ಈ ಪ್ರತಿಷ್ಟಾನದ ಭೇಟಿಯನ್ನು ಪೋಪ್ ಗಮನಿಸುತ್ತಾ, ರೋಮ್‌ನ ಆಧ್ಯಾತ್ಮಿಕ ಸಂಪತ್ತನ್ನು ಆನಂದಿಸಲು ಅವರನ್ನು ಆಹ್ವಾನಿಸಿದರು, ಇದು "ಅಪೊಸ್ತಲರಾದ ಪೇತ್ರ ಮತ್ತು ಪೌಲರ ಸಮಾಧಿಗಳು ಹಾಗೂ ಇತಿಹಾಸದ ಕಠಿಣ ಅವಧಿಗಳಲ್ಲಿ ಧರ್ಮಸಭೆಯನ್ನು ಬಲಪಡಿಸಿದ ಅನೇಕ ಸಂತರಿಂದ ಗುರುತಿಸಲ್ಪಟ್ಟಿದೆ." ಎಂದು ಹೇಳಿದರು.

"ಅನೇಕ ಸವಾಲುಗಳಿಂದ ತುಂಬಿರುವ ಈ ಯುಗದಲ್ಲಿ, ಇದು ನಿಮ್ಮ ಭವಿಷ್ಯದ ಭರವಸೆ ಮತ್ತು ವಿಶ್ವಾಸವನ್ನು ನವೀಕರಿಸಲಿ" ಎಂದು ಪವಿತ್ರ ತಂದೆ ಹೇಳಿದರು.

04 ಜೂನ್ 2025, 17:41