ಬಲಿಪೂಜೆಯಲ್ಲಿ ವಿಶ್ವಗುರು: ಯಾಜಕರ ಬದುಕು ಪಾರದರ್ಶಕ ಮತ್ತು ನಂಬಲರ್ಹವಾಗಿರಬೇಕು
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ 14ನೇ ಲಿಯೋ ಅವರು ಸಂತ ಪೇತ್ರರ ಮಹಾ ದೇವಾಲಯದಲ್ಲಿ ಯಾಜಕ ದೀಕ್ಷೆಯ ಬಲಿ ಪೂಜೆಯನ್ನು ಅರ್ಪಿಸುತ್ತಾ ಮಾತನಾಡಿದ್ದಾರೆ. ಜನತೆಯ ನಡುವೆ ಇರಲು ಹಾಗೂ ನಂಬಿಕೆಗೆ ಅರ್ಹವಾಗಿರುವ ಸಾಕ್ಷಿಗಳಾಗಿ ಅವರಿಗೆ ಸೇವೆಯನ್ನು ಸಲ್ಲಿಸಲು ದೇವರ ವರದಾನವನ್ನು ಸ್ವಾಗತಿಸುವಂತೆ ಯಾಜಕರಿಗೆ ಹೇಳಿದ್ದಾರೆ.
ಶನಿವಾರ ಸಂತ ಪೇತ್ರದ ಮಹಾ ದೇವಾಲಯದಲ್ಲಿ ವಿಶ್ವಗುರು 14ನೇ ಲಿಯೋ ಅವರು ಹಲವು ಸೇವಾ ದರ್ಶಿಗಳನ್ನು ಯಾಜಕರಾಗಿ ಅಭ್ಯಂಗಿಸಿದರು. ತಮ್ಮ ಪ್ರಬೋಧನೆಯಲ್ಲಿ ಮಾತನಾಡಿದ ಅವರು ದೈವ ಜನರ ಹಾಗೂ ಯಾಜಕ ಗುರುತಿನ ನಡುವೆ ಇರುವ ಸಂಬಂಧದ ಕುರಿತು ಬೆಳಕನ್ನು ಚೆಲ್ಲಿದರು.
ಯಾಜಕರು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕಾದುದು ಏನೆಂದರೆ , ಅವರ ಗುರುತು ಕ್ರಿಸ್ತರಲ್ಲಿ ನೆಲೆಗೊಂಡಿದೆ. ಕ್ರಿಸ್ತರು ಮುಖ್ಯ ಯಾಜಕರಾಗಿದ್ದಾರೆ ಎಂದು ವಿಶ್ವಗುರು ಲಿಯೋ ಅವರು ನೂತನ ಯಾಜಕರಿಗೆ ಕಿವಿ ಮಾತನ್ನು ಹೇಳಿದರು.
ಯಾಜಕ ದೀಕ್ಷೆ ಎಂಬುದು ದೇವರು ತಮ್ಮ ಜನರನ್ನು ಎಂದೂ ಮರೆತಿಲ್ಲ ಎಂಬುದರ ಸಂಕೇತವಾಗಿದೆ ಎಂದು ಹೇಳಿದ ಅವರು ದೇವರ ಸಂತೋಷ ಎಂಬುದು ದೊಡ್ಡದಾಗಿ ಶಬ್ದವನ್ನು ಮಾಡುವುದಿಲ್ಲ ಆದರೆ ಅದು ನಿಜವಾಗಿಯೂ ಇತಿಹಾಸವನ್ನು ಬದಲಾಯಿಸುತ್ತದೆ ಹಾಗೂ ನಮ್ಮನ್ನು ಪರಸ್ಪರ ಹತ್ತಿರ ಬರುವಂತೆ ಮಾಡುತ್ತದೆ ಎಂದು ಹೇಳಿದರು.
ಎಲ್ಲಾ ಯಾಜಕರು ಏಸುಕ್ರಿಸ್ತರಂತೆ ಮಾದರಿ ಜೀವನವನ್ನು ಅನುಸರಿಸಲು ಸದಾ ಸಿದ್ಧರಿರಬೇಕು ಎಂದು ಅವರು ಹೇಳಿದರು. ಯಾಜಕರ ಬದುಕು ಸದಾ ಪಾರದರ್ಶಕವಾಗಿರಬೇಕು, ಸ್ಪಷ್ಟತೆಯಿಂದ ಕೂಡಿದ್ದು ಗೋಚರಿಸುವಂತಿರಬೇಕು ಹಾಗೂ ನಂಬಿಕೆಗೆ ಅರ್ಹವಾಗಿರುವಂತೆ ಇರಬೇಕು ಎಂದು ವಿಶ್ವಗುರು ಲಿಯೋ ಅವರು ಹೇಳಿದರು. ಪ್ರಭು ಕ್ರಿಸ್ತನ ಪ್ರೀತಿಯೆಂಬುದು ಬಿಡುಗಡೆಯ ಅಸ್ತ್ರವಾಗಿದೆ ಏಕೆಂದರೆ ಕ್ರಿಸ್ತರ ಪ್ರೀತಿ ನಾವು ಯಾವುದನ್ನು ಹಿಡಿದಿಟ್ಟುಕೊಳ್ಳದಂತೆ ನಮ್ಮನ್ನು ತಡೆಯುತ್ತದೆ. ಅದರ ಉದ್ದೇಶವೇ ಬಿಡುಗಡೆ ಮಾಡುವುದಾಗಿದೆ ಎಂದು ಹೇಳಿದರು.
ಈ ಬಲಿ ಪೂಜೆಯಲ್ಲಿ ಸುಮಾರು 55000 ಜನ ಭಾಗವಹಿಸಿದ್ದರು. ನಾವೆಲ್ಲರೂ ಒಂದಾಗಿ ಸ್ವರ್ಗ ಮತ್ತು ಭುವಿಯನ್ನು ಒಂದು ಮಾಡುತ್ತೇವೆ. ಧರ್ಮಸಭೆಯ ಮಾತೆ ಯಾಗಿರುವ ಮರಿಯಳಲ್ಲಿ ಈ ಸಾಮಾನ್ಯ ಯಾಜಕತ್ವ ಹೊಳೆಯುತ್ತದೆ ಎಂದು ಹೇಳಿದರು.