MAP

ವ್ಯಾಟಿಕನ್ ಆರೋಗ್ಯ ಸೇವೆಗಳ ನಿರ್ದೇಶಕರನ್ನಾಗಿ ಡಾ. ಕಾರ್ಬೊನ್ ಅವರನ್ನು ನೇಮಿಸಿದ ಪೋಪ್

ಪೋಪ್ ಹದಿನಾಲ್ಕನೇ ಲಿಯೋ ಅವರು ಡಾ.ಲುಯಿಜಿ ಕಾರ್ಬೊನ್ ಅವರನ್ನು ವ್ಯಾಟಿಕನ್ ಆರೋಗ್ಯ ಮತ್ತು ನೈರ್ಮಲ್ಯ ಸೇವೆಗಳ ಪ್ರಾಧಿಕಾರದ ಮುಖ್ಯಸ್ಥರನ್ನಾಗಿ ನೇಮಿಸಿದ್ದಾರೆ. ಡಾ. ಕಾರ್ಬೊನ್ ಅವರು ಸುಮಾರು ವರ್ಷಗಳ ಕಾಲ ಇದೇ ಇಲಾಖೆಯ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ವ್ಯಾಟಿಕನ್ ಪರಿಧಿಯಲ್ಲಿನ ಆರೋಗ್ಯ ಮತ್ತು ನೈರ್ಮಲ್ಯ ಸೇವೆಗಳ ಹೊಣೆಗಾರಿಕೆ ಇವರದ್ದಾಗಿದೆ.

ವರದಿ: ವ್ಯಾಟಿಕನ್ ನ್ಯೂಸ್

ಡಾ. ಕಾರ್ಬೋನ್ ಇಲ್ಲಿಯವರೆಗೆ ಅದೇ ನಿರ್ದೇಶನಾಲಯದ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ದಿವಂಗತ ವಿಶ್ವಗುರು ಫ್ರಾನ್ಸಿಸ್ ಅನಾರೋಗ್ಯದ ಸಮಯದಲ್ಲಿ ಅವರ ಜೊತೆಗಿದ್ದರು ಹಾಗೂ ಇವರು ಪೋಪ್ ಫ್ರಾನ್ಸಿಸ್ ಅವರ ವೈಯಕ್ತಿಕ ವೈದ್ಯರಾಗಿದ್ದರು.

ಹೊಸದಾಗಿ ನೇಮಕಗೊಂಡಿರುವ ನಿರ್ದೇಶಕರು ಆಗಸ್ಟ್ 1 ರಂದು ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

ಆಗಸ್ಟ್ 1, 2020 ರಿಂದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಪ್ರೊಫೆಸರ್ ಆಂಡ್ರಿಯಾ ಅರ್ಕಾಂಜೆಲಿ ಅವರ ಉತ್ತರಾಧಿಕಾರಿಯಾಗಿ ಡಾ. ಕಾರ್ಬೋನ್ ನೇಮಕಗೊಂಡಿದ್ದಾರೆ ಮತ್ತು ಈ ತಿಂಗಳು 70ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.

02 ಜೂನ್ 2025, 17:18