ಅಗಸ್ಟೀನರ ಸಭೆಯ ಮುಖ್ಯಾಧಿಕಾರಿಗಳ ಹುಟ್ಟುಹಬ್ಬದ ಭೋಜನದಲ್ಲಿ ಪಾಲ್ಗೊಂಡ ಪೋಪ್
ಕುಟುಂಬಗಳ ಜ್ಯುಬಿಲಿ ಬಲಿಪೂಜೆ ಮುಗಿದ ನಂತರ ಪೋಪ್ ಹದಿನಾಲ್ಕನೇ ಲಿಯೋ ಅವರು ವ್ಯಾಟಿಕನ್ ನಗರಕ್ಕೆ ಹತ್ತಿರವಿರುವ ಸೆಂಟ್ ಮೋನಿಕಾ ಇಂಟರ್ನ್ಯಾಷನಲ್ ಕಾಲೇಜ್'ಗೆ ಇಂದು ಸಂತ ಅಗಸ್ಟೀನ್ ಸಭೆಯ ಮುಖ್ಯಾಧಿಕಾರಿ ಫಾದರ್ ಅಲೆಹಾಂದ್ರೊ ಮೊರಾಲ್ ಅವರು 70ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ನಿಟ್ಟಿನಲ್ಲಿ ಅಲ್ಲಿಗೆ ಭೇಟಿಯನ್ನು ನೀಡಿದರು. ಫಾದರ್ ಅಲೆಹಾಂದ್ರೊ ಮೊರಾಲ್ ಅವರು ಪೋಪ್ ಲಿಯೋ ಅವರ ಧೀರ್ಘ ಕಾಲದ ಒಡನಾಡಿಯಾಗಿದ್ದಾರೆ.
01 ಜೂನ್ 2025, 17:27