ಈಕ್ವೆಟೋರಿಯಲ್ ಗೀನಿ ದೇಶದ ಅಧ್ಯಕ್ಷರನ್ನು ಭೇಟಿ ಮಾಡಿದ ಪೋಪ್ ಲಿಯೋ
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಹದಿನಾಲ್ಕನೇ ಲಿಯೋ ಅವರು ಶನಿವಾರ ರಿಪಬ್ಲಿಕ್ ಆಫ್ ಈಕ್ವೆಟೋರಿಯಲ್ ಗೀನಿ ದೇಶದ ಅಧ್ಯಕ್ಷ ಟಿಯೊದೊರೊ ಒಬಿಯಾಂಗ್ ಉಂಗ್ವೆಮ ಉಂಬಸೊಗೊ ಅವರನ್ನು ವ್ಯಾಟಿಕನ್ನಿನಲ್ಲಿ ಭೇಟಿ ಮಾಡಿದ್ದಾರೆ. ತದನಂತರ ಅಧ್ಯಕ್ಷ ಟಿಯೊದೊರೊ ಒಬಿಯಾಂಗ್ ಉಂಗ್ವೆಮ ಉಂಬಸೊಗೊ ಅವರು ವ್ಯಾಟಿಕನ್ ರಾಜ್ಯ ವಿದೇಶಾಂಗ ಸಂಪರ್ಕಗಳ ಕಾರ್ಯದರ್ಶಿ ಆರ್ಚ್'ಬಿಷಪ್ ಪೌಲ್ ರಿಚರ್ಡ್ ಗ್ಯಾಲಘರ್ ಅವರನ್ನು ಭೇಟಿ ಮಾಡಿ ಮಾತುಕತೆಯನ್ನು ನಡೆಸಿದ್ದಾರೆ.
ವ್ಯಾಟಿಕನ್ ಮಾಧ್ಯಮ ಕಚೇರಿಯ ಪತ್ರಿಕಾ ಹೇಳಿಕೆಯ ಪ್ರಕಾರ ಅಧ್ಯಕ್ಷ ಟಿಯೊದೊರೊ ಒಬಿಯಾಂಗ್ ಉಂಗ್ವೆಮ ಉಂಬಸೊಗೊ ಅವರು ವ್ಯಾಟಿಕನ್ ವಿದೇಶಾಂಗ ಸಂಪರ್ಕಗಳ ಕಾರ್ಯದರ್ಶಿ ಆರ್ಚ್'ಬಿಷಪ್ ಪೌಲ್ ರಿಚರ್ಡ್ ಗ್ಯಾಲಘರ್ ಅವರನ್ನು ಭೇಟಿ ಮಾಡಿ ಮಾತುಕತೆಯನ್ನು ನಡೆಸಿದ್ದಾರೆ.
ವ್ಯಾಟಿಕನ್ ಪತ್ರಿಕಾ ಹೇಳಿಕೆಯ ಪ್ರಕಾರ ಉಭಯ ಪಕ್ಷಗಳ ಮಾತುಕತೆಗಳು ಸೌಹಾರ್ದಯುತವಾಗಿದ್ದು, ಫಲಪ್ರದಾಯಕವಾಗಿದ್ದವು. ವ್ಯಾಟಿಕನ್ ಹಾಗೂ ಗೀನಿ ನಡುವಿನ ಉತ್ತಮ ಸಂಬಂಧದ ಕುರಿತು ಚರ್ಚೆಗಳು ನಡೆದು, ಆ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು ಎಂಬ ಅನಿಸಿಕೆ ಉಭಯ ನಾಯಕರು ವ್ಯಕ್ತಪಡಿಸಿದರು.
ಗೀನಿ ದೇಶದಲ್ಲಿ ಕಥೋಲಿಕ ಧರ್ಮಸಭೆಯು ಅಲ್ಲಿನ ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಸೇವಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳ ಕುರಿತೂ ಸಹ ಚರ್ಚಿಸಲಾಯಿತು ಎಂದು ವ್ಯಾಟಿಕನ್ ಮಾಧ್ಯಮ ಹೇಳಿಕೆಯು ವರದಿ ಮಾಡಿದೆ.