MAP

ಇಟಲಿಯ ಅಧ್ಯಕ್ಷ ಮತರೆಲ್ಲಾ ಅವರನ್ನು ಭೇಟಿ ಮಾಡಿದ ಪೋಪ್ ಲಿಯೋ

ಪೋಪ್ ಹದಿನಾಲ್ಕನೇ ಲಿಯೋ ಅವರು ಇಟಲಿಯ ಅಧ್ಯಕ್ಷ ಸರ್ಜಿಯೋ ಮತರೆಲ್ಲಾ ಅವರನ್ನು ವ್ಯಾಟಿಕನ್ನಿನಲ್ಲಿ ಖಾಸಗಿಯಾಗಿ ಭೇಟಿ ಮಾಡಿದ್ದಾರೆ. ಈ ವೇಳೆ ಸರ್ಜಿಯೋ ಮತರೆಲ್ಲಾ ಅವರು ತಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳೊಂದಿಗೆ ಪೋಪರನ್ನು ಭೇಟಿ ಮಾಡಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಹದಿನಾಲ್ಕನೇ ಲಿಯೋ ಅವರು ಇಟಲಿಯ ಅಧ್ಯಕ್ಷ ಸರ್ಜಿಯೋ ಮತರೆಲ್ಲಾ ಅವರನ್ನು ವ್ಯಾಟಿಕನ್ನಿನಲ್ಲಿ ಖಾಸಗಿಯಾಗಿ ಭೇಟಿ ಮಾಡಿದ್ದಾರೆ. ಈ ವೇಳೆ ಸರ್ಜಿಯೋ ಮತರೆಲ್ಲಾ ಅವರು ತಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳೊಂದಿಗೆ ಪೋಪರನ್ನು ಭೇಟಿ ಮಾಡಿದ್ದಾರೆ.

ಪೋಪ್ ಅವರನ್ನು ಭೇಟಿ ಮಾಡಿದ ಬಳಿಕ ಇಟಲಿಯ ಅಧ್ಯಕ್ಷ ಸರ್ಜಿಯೋ ಮತರೆಲ್ಲಾ ಅವರು ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರನ್ನು ಹಾಗೂ ವ್ಯಾಟಿಕನ್ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧೀನ ಕಾರ್ಯದರ್ಶಿಯಾಗಿರುವ ಮೊನ್ಸಿಜ್ಞೊರ್ ಮಿರೋಸ್ಲಾವ್ ವಾಚೋವ್ಸ್ಕಿ ಅವರನ್ನು ಭೇಟಿ ಮಾಡಿದರು.

ಪತ್ರಿಕಾ ಹೇಳಿಕೆಯ ಪ್ರಕಾರ ಸೌಹಾರ್ದ ಮಾತುಕತೆಯ ವೇಳೆ ಉಭಯ ಸಂಬಂಧಗಳ ಕುರಿತು ಚರ್ಚಿಸಲಾಯಿತು. ಇದೇ ವೇಳೆ ಅಂತರಾಷ್ಟ್ರೀಯ ವಿದ್ಯಾಮಾನಗಳು ವಿಶೇಷವಾಗಿ ಉಕ್ರೇನ್ ಹಾಗೂ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಘಟನೆಗಳ ಕುರಿತು ಮಾತುಕತೆಗಳು ನಡೆದಿವೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.

ಉಭಯ ನಾಯಕರು ವಿವಿಧ ಸಾಮಾಜಿಕ ಸಮಸ್ಯೆಗಳ ಕುರಿತೂ ಸಹ ಚರ್ಚಿಸಿದರು ಮಾತ್ರವಲ್ಲದೆ, ದೇಶಕ್ಕೆ ಹಾಗೂ ಪ್ರಪಂಚಕ್ಕೆ ಧರ್ಮಸಭೆಯ ಕೊಡುಗೆಯ ಕುರಿತೂ ಸಹ ಚರ್ಚಿಸಲಾಯಿತು.

06 ಜೂನ್ 2025, 17:03