MAP

MAP Leo XIV meets Bishops of Madagascar MAP Leo XIV meets Bishops of Madagascar  (ANSA)

ಪೋಪ್ ಲಿಯೋ XIV: ಬಿಷಪ್'ಗಳು ಬಡವರ ಮೇಲಿನ ದೃಷ್ಠಿಯನ್ನು ತೆಗೆಯಬಾರದು

ಮಡಗಾಸ್ಕರ್ ದೇಶದ ಧರ್ಮಾಧ್ಯಕ್ಷರುಗಳು ರೋಮ್ ನಗರಕ್ಕೆ ಜ್ಯೂಬಿಲಿ ಯಾತ್ರೆಯನ್ನು ಕೈಗೊಂಡಿರುವ ಹೊತ್ತಿನಲ್ಲಿ, ಪೋಪ್ ಹದಿನಾಲ್ಕನೇ ಲಿಯೋ ಅವರು ಅವರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಬಡವರನ್ನು ಶುಭಸಂದೇಶದ ಕೇಂದ್ರಬಿಂದುವನ್ನಾಗಿಸಬೇಕು ಎಂದು ಅವರಿಗೆ ಕರೆ ನೀಡಿದ್ದಾರೆ.

ವರದಿ: ಡೆವಿನ್ ವಾಟ್ಕಿನ್ಸ್

ಮಡಗಾಸ್ಕರ್ ದೇಶದ ಧರ್ಮಾಧ್ಯಕ್ಷರುಗಳು ರೋಮ್ ನಗರಕ್ಕೆ ಜ್ಯೂಬಿಲಿ ಯಾತ್ರೆಯನ್ನು ಕೈಗೊಂಡಿರುವ ಹೊತ್ತಿನಲ್ಲಿ, ಪೋಪ್ ಹದಿನಾಲ್ಕನೇ ಲಿಯೋ ಅವರು ಅವರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಬಡವರನ್ನು ಶುಭಸಂದೇಶದ ಕೇಂದ್ರಬಿಂದುವನ್ನಾಗಿಸಬೇಕು ಎಂದು ಅವರಿಗೆ ಕರೆ ನೀಡಿದ್ದಾರೆ.

ವ್ಯಾಟಿಕನ್ನಿನಲ್ಲಿ ಪೋಪ್ ಹದಿನಾಲ್ಕನೇ ಲಿಯೋ ಅವರು ಸೋಮವಾರ ಬೆಳಿಗ್ಗೆ ಮಡಗಾಸ್ಕರ್ ದೇಶದ ಧರ್ಮಾಧ್ಯಕ್ಷರನ್ನು ಭೇಟಿ ಮಾಡಿದ್ದು,, ಅವರನ್ನು ಉದ್ದೇಶಿಸಿ ಮಾತನಾಡಿದ್ದಾರೆ. "ನೀವೆಲ್ಲರೂ ರೋಮ್ ನಗರಕ್ಕೆ ಸಂತ ಪೇತ್ರರ ಸಮಾಧಿಯ ಬಳಿ ಪ್ರಾರ್ಥಿಸಲು ಒಂದಾಗಿ ಇನ್ನಿತರ ಸಾವಿರಾರು ಭಕ್ತಾಧಿಗಳಂತೆ ಯಾತ್ರೆಯನ್ನು ಕೈಗೊಂಡಿದ್ದೀರಿ. ಇದಕ್ಕೆ ನಾನು ನಿಮಗೆ ಕೃತಜ್ಞತೆಗಳನ್ನು ತಿಳಿಸುತ್ತೇನೆ." ಎಂದರು.

ಮುಂದುವರೆದು ಮಾತನಾಡಿದ ಅವರು "ಧರ್ಮಾಧ್ಯಕ್ಷರೂ ಸಹ ಭರವಸೆಯ ಯಾತ್ರಿಕರಾಗಲು ಕರೆಯನ್ನು ಹೊಂದಿದ್ದಾರೆ. ಮಡಗಾಸ್ಕರ್ ದೇಶದ ಜನತೆಯನ್ನು ಯೇಸುಕ್ರಿಸ್ತರೆಡೆಗೆ ಸೆಳೆಯುವಲ್ಲಿ ನೀವು ದೇವರ ವರದಾನಗಳನ್ನು ಪಡೆದುಕೊಂಡಿದ್ದೀರಿ" ಎಂದು ಪೋಪ್ ಹದಿನಾಲ್ಕನೇ ಲಿಯೋ ಅವರು ಹೇಳಿದರು.

ಮಡಗಾಸ್ಕರ್ ದೇಶದ ಧರ್ಮಾಧ್ಯಕ್ಷರುಗಳು ತಮ್ಮ ಪಾಲನಾ ಸೇವೆಯ ಸಂತೋಷ ಹಾಗೂ ಸವಾಲುಗಳ ಕುರಿತು ಪೋಪ್ ಅವರಲ್ಲಿ ಹಂಚಿಕೊಂಡಾಗ ಅವರು ಎದೆಗುಂದಂದೆ ವಿಶ್ವಾಸದಲ್ಲಿ, ಪ್ರಭುವಿನಲ್ಲಿ ಭರವಸೆಯಿಡುತ್ತಾ ಮುಂದುವರೆಯುವಂತೆ ಹೇಳಿದ್ದಾರೆ.

ಬಡವರ ಕುರಿತು ಮಾತನಾಡಿದ ಪೋಪ್ ಲಿಯೋ ಅವರು "ಧರ್ಮಾಧ್ಯಕ್ಷರು ಬಡವರ ಮೇಲಿನ ದೃಷ್ಠಿಯನ್ನು ಎಂದೂ ಸಹ ತೆಗೆಯಬಾರದು. ಬಡವರನ್ನು ಶುಭಸಂದೇಶದ ಕೇಂದ್ರಬಿಂದುವನ್ನಾಗಿಸಬೇಕು" ಎಂದು ಮಡಗಾಸ್ಕರ್ ಧರ್ಮಾಧ್ಯಕ್ಷರಿಗೆ ಕಿವಿಮಾತನ್ನು ಹೇಳಿದ್ದಾರೆ. ಬಡವರಲ್ಲಿ ಕ್ರಿಸ್ತರನ್ನು ಕಾಣಬೇಕು ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಸೃಷ್ಠಿಯ ಕುರಿತು ಮಾತನಾಡಿದ ಅವರು "ದೇವರು ನಮಗೆ ನೀಡಿರುವ ಸೃಷ್ಠಿಯನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕು" ಎಂದು ಹೇಳಿದ್ದಾರೆ.

16 ಜೂನ್ 2025, 16:36