ಯುದ್ಧ ಎಂದಿಗೂ ಸೋಲಾಗಿದೆ: ಪೋಪ್ ಫ್ರಾನ್ಸಿಸರ ಮಾತುಗಳನ್ನು ಪ್ರತಿಧ್ವನಿಸಿದ ಪೋಪ್ ಲಿಯೋ
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಹದಿನಾಲ್ಕನೇ ಲಿಯೋ ಅವರು ಇಂದು ಬುಧವಾರದ ಸಾರ್ವಜನಿಕ ಭೇಟಿಯಲ್ಲಿ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಯುದ್ಧದ ಕುರಿತು ಮಾತನಾಡಿರುವ ಅವರು ಯುದ್ಧ ಎಂದಿಗೂ ಸೋಲಾಗಿದೆ ಎಂಬ ಅವರ ಪೂರ್ವವರ್ತಿ ಪೋಪ್ ಫ್ರಾನ್ಸಿಸ್ ಅವರ ಮಾತುಗಳನ್ನು ಪ್ರತಿಧ್ವನಿಸಿದ್ದಾರೆ.
2024ರ ಏಪ್ರಿಲ್‌ನಲ್ಲಿ ಇಸ್ರೇಲ್ ದಮಾಸ್ಕಸ್‌ನಲ್ಲಿರುವ ಇರಾನ್ ದೂತಾವಾಸದ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿರಿಯ ಇರಾನ್ ಸೇನಾ ಅಧಿಕಾರಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ, ಇರಾನ್ ಇಸ್ರೇಲ್ ವಿರುದ್ಧ ಭಾರೀ ಪ್ರಮಾಣದ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಇಸ್ರೇಲ್ ಇರಾನ್‌ನ ವಿವಿಧ ತಾಣಗಳನ್ನು, ವಿಶೇಷವಾಗಿ ಸೇನಾ ಮತ್ತು ಅಣುಶಕ್ತಿಯ ತಾಣಗಳನ್ನು ಗುರಿಯಾಗಿಸಿಕೊಂಡು ಪ್ರತಿದಾಳಿ ಆರಂಭಿಸಿತು.
ರಷ್ಯಾ ಮತ್ತು ಉಕ್ರೆನ್ ನಡುವಿನ ಯುದ್ಧವು 2022ರ ಫೆಬ್ರವರಿ 24ರಂದು ಆರಂಭವಾಯಿತು. ಈ ಯುದ್ಧಕ್ಕೆ ಕಾರಣವಾದ ಪ್ರಮುಖ ವಿಷಯವೆಂದರೆ ಉಕ್ರೆನ್ ನಾಟೋ (NATO) ಸೇರ್ಪಡೆಯು ಮತ್ತು ರಷ್ಯಾದ ಭೌಗೋಳಿಕ ಭದ್ರತೆಗೆ ಉಂಟಾಗುವ ಭೀತಿ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉಕ್ರೆನ್‌ನ ಡೊನೆಸ್ಕ್ ಮತ್ತು ಲುಹಾಂಸ್ಕ್ ಪ್ರದೇಶಗಳನ್ನು ಪ್ರತ್ಯೇಕ ಪ್ರಜಾಸತ್ತಾತ್ಮಕ ಗಣರಾಜ್ಯಗಳೆಂದು ಘೋಷಿಸಿ ಆ ಪ್ರದೇಶಗಳನ್ನು ರಕ್ಷಣೆಯ ಹೆಸರಿನಲ್ಲಿ ಯುದ್ಧ ಪ್ರಾರಂಭಿಸಿದರು. ಈ ಕ್ರಮವನ್ನು ಜಾಗತಿಕ ಸಮುದಾಯ ಬಹುತೆಕವಾಗಿ ಉಕ್ರೆನ್ ಮೇಲಿನ ಆಕ್ರಮಣವೆಂದು ಆರೋಪಿಸಿದೆ.
ಪ್ರಸ್ತುತ ಸ್ಥಿತಿ ಮತ್ತು ಪರಿಣಾಮಗಳು:
ಈ ಯುದ್ಧವು ಸಾವಿರಾರು ಜನರ ಸಾವಿಗೆ, ಲಕ್ಷಾಂತರ ಜನರ ಸ್ಥಳಾಂತರಕ್ಕೆ ಕಾರಣವಾಗಿದ್ದು, ಉಕ್ರೆನ್‌ನ ಮೂಲಸೌಕರ್ಯಗಳಿಗೆ ಭಾರಿ ನಷ್ಟ ಉಂಟುಮಾಡಿದೆ. ಹಲವಾರು ಪಶ್ಚಿಮ ರಾಷ್ಟ್ರಗಳು ಉಕ್ರೆನ್‌ಗೆ ಶಸ್ತ್ರಾಸ್ತ್ರ ಸಹಾಯ ನೀಡುತ್ತಿರುವುದು ಯುದ್ಧವನ್ನು ಮತ್ತಷ್ಟು ಗಂಭೀರವಾಗಿಸಿದೆ. ಇತರ ರಾಜ್ಯಗಳು ರಷ್ಯಾ ವಿರುದ್ಧ ಆರ್ಥಿಕ ನಿರ್ಬಂಧಗಳನ್ನು ಹೇರಿವೆ. ಆದರೆ ರಷ್ಯಾ ತನ್ನ ಕಾರ್ಯಚಟುವಟಿಕೆಗಳನ್ನು ಮುಂದುವರೆಸುತ್ತಿದೆ. ಈ ಯುದ್ಧವು ಇಡೀ ಜಾಗತಿಕ ಆರ್ಥಿಕತೆಯ ಮೇಲೆಯೂ ಪರಿಣಾಮ ಬೀರಿದ್ದು, ಇಂಧನ ಮತ್ತು ಆಹಾರ ಬೆಲೆ ಏರಿಕೆ ಉಂಟಾಗಿದೆ. ಅಂತರ್ಜಾತೀಯ ರಾಜಕೀಯದಲ್ಲಿ ನೈತಿಕತೆ, ಶಕ್ತಿ ರಾಜಕೀಯ ಮತ್ತು ಪ್ರಾದೇಶಿಕ ಶಮನದ ಪ್ರಶ್ನೆಗಳು ಮರುಮಾತೆಗೊಳ್ಳುತ್ತಿವೆ.
ಎಲ್ಲಾ ಸಂದರ್ಭಗಳಲ್ಲಿಯೂ ಶಾಂತಿಯಿಂದ ಇರುವಂತೆ ಹಾಗೂ ಸಂವಾದವನ್ನು ಹಾಗೂ ಸಂಭಾಷಣೆಯನ್ನು ಸಮಸ್ಯೆಗಳ ಪರಿಹಾರಕ್ಕೆ ಬಳಸಿಕೊಳ್ಳಬೇಕು ಎಂದು ಪೋಪ್ ಲಿಯೋ ಅವರು ಹೇಳಿದ್ದಾರೆ.