ಪೋಪ್ ಲಿಯೋ XIV: ಕೂರಿಯಾ ಅಧಿಕಾರಿಗಳ ಪರಿಶುದ್ಧತೆ ಪವಿತ್ರ ಪೀಠವನ್ನು ಪೋಷಿಸಬೇಕು
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಹದಿನಾಲ್ಕನೇ ಲಿಯೋ ಅವರು ಕೂರಿಯಾ ಅಧಿಕಾರಿಗಳಿಗೆ ಪವಿತ್ರ ಪೀಠದ ಜ್ಯೂಬಿಲಿ ಹಿನ್ನೆಲೆ ಬಲಿಪೂಜೆಯನ್ನು ಅರ್ಪಿಸಿದ್ದಾರೆ. ಪ್ರೇಷಿತ ಪೀಠವು ತನ್ನ ಫಲಪ್ರಧಾಯಕತೆಯನ್ನು ಯೇಸು ಕ್ರಿಸ್ತರಿಂದ ಹಾಗೂ ಮಾತೆ ಮರಿಯಮ್ಮನವರ ಮಾದರಿಯ ಮೂಲಕ ಪಡೆಯುತ್ತದೆ ಎಂದು ಪೋಪ್ ಹದಿನಾಲ್ಕನೇ ಲಿಯೋ ಅವರು ಹೇಳಿದರು.
ಧರ್ಮಸಭೆಯು ಪವಿತ್ರ ಪೀಠದ ಜ್ಯೂಬಿಲಿಯನ್ನು ಆಚರಿಸುತ್ತಿರುವ ಹೊತ್ತಿನಲ್ಲಿ ಪೋಪ್ ಹದಿನಾಲ್ಕನೇ ಲಿಯೋ ಅವರು ವ್ಯಾಟಿಕನ್ನಿನ ನೌಕರರು ಹಾಗೂ ಕೂರಿಯಾ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.
ಸಿಸ್ಟರ್ ಮರಿಯ ಗ್ಲೋರಿಯಾ ರೀವಾ ಅವರ ಚಿಂತನೆಯ ಮೂಲಕ ಜ್ಯೂಬಿಲಿ ಆರಂಭವಾಯಿತು. ನಂತರ ಪೋಪರು ಜ್ಯೂಬಿಲಿ ಶಿಲುಬೆಯನ್ನು ಎತ್ತಿಕೊಂಡು, ಮೆರವಣಿಗೆಯ ಮೂಲಕ ಸಂತ ಪೇತ್ರರ ಮಹಾದೇವಾಲಯದ ಜ್ಯೂಬಿಲಿ ದ್ವಾರವನ್ನು ಎಲ್ಲರೊಂದಿಗೆ ಹಾದು ಹೋದರು. ಮೆರವಣಿಗೆಯ ನಂತರ ಬಲಿಪೂಜೆಯನ್ನು ಅರ್ಪಿಸಿ, ಪೋಪ್ ಲಿಯೋ ಅವರು ಪ್ರಬೋಧನೆಯ ಮೂಲಕ ತಮ್ಮ ಚಿಂತನೆಯನ್ನು ಹಂಚಿಕೊಂಡರು.
"ಪವಿತ್ರ ಪೀಠವು ಎರಡು ಸಮ-ಸಮ ಅಂಶಗಳ ಆಧಾರದ ಮೇಲೆ ಅಂದರೆ ಮಾತೆ ಮರಿಯಮ್ಮನವರ ಹಾಗೂ ಸಂತ ಪೇತ್ರರ ಇರುವಿಕೆಯಂತೆ ಕಾರ್ಯನಿರ್ವಹಿಸುತ್ತದೆ. ತಾಯ್ತನದ ಮೂಲಕ ಪೇತ್ರಾಂಶದ ಪರಿಶುದ್ಧತೆಗೆ ಇಂಬನ್ನು ನೀಡುವುದು ಇದೇ ಮಾತೆ ಮರಿಯಮ್ಮನವರ ಅಂಶ" ಎಂದು ಪೋಪ್ ಲಿಯೋ ಅವರು ಹೇಳಿದರು.
"ಪವಿತ್ರ ಪೀಠದ ಜ್ಯೂಬಿಲಿಯು ಧರ್ಮಸಭೆಯ ತಾಯಿ ಮರಿಯ ಎಂಬ ಹಬ್ಬದ ದಿನ ನಡೆಯುತ್ತಿದೆ ಎಂಬುದನ್ನು ಪೋಪ್ ಲಿಯೋ ಅವರು ಗಮನಿಸಿದರು.
ಮುಂದುವರೆದು ಪೋಪ್ ಲಿಯೋ ಅವರು ಮಾತೆ ಮರಿಯಮ್ಮನವರ ತಾಯ್ತನದ ಕುರಿತು ಚಿಂತನೆಯನ್ನು ವ್ಯಕ್ತ ಪಡಿಸಿದರು. ಮಾತೆ ಮರಿಯಮ್ಮನವರ ಫಲಪ್ರದಾಯಕತೆ ಹಾಗೂ ಧರ್ಮಸಭೆಯ ಫಲಪ್ರದಾಯಕತೆಗೆ ಉಲ್ಲೇಖವನ್ನು ಮಾಡುತ್ತಾ ಮಾತನಾಡಿದ ಅವರು, ಇವೆರಡು ಅಂತರ್ಸಬಂಧವನ್ನು ಹೊಂದಿದ್ದು, ಧರ್ಮಸಭೆಯ ಬದುಕಿಗೆ ಹೊಸ ಚೈತನ್ಯವನ್ನು ನೀಡುತ್ತವೆ ಎಂದು ಹೇಳಿದ್ದಾರೆ. ಮಾತೆ ಮರಿಯಮ್ಮನವರು ಈ ಜಗತ್ತಿಗೆ ಕ್ರಿಸ್ತರನ್ನು ನೀಡಿದರು. ಕ್ರಿಸ್ತರೇ ನಮ್ಮ ಬದುಕಿನ ಜೀವನಾಡಿ ಹಾಗೂ ರಕ್ಷಕರು ಆಗಿರುವಾಗ, ಅವರ ರಕ್ಷಣಾ ಕಾರ್ಯದಲ್ಲಿ ಮಾತೆಯು ಸಹ-ರಕ್ಷಕಿಯಾಗಿದ್ದಾರೆ ಎಂದು ಹೇಳಿದರು.
ಅಂತಿಮವಾಗಿ ನೆರೆದಿದ್ದ ಎಲ್ಲರಿಗೂ ಪೋಪ್ ಲಿಯೋ ಅವರು "ಈ ಜಗಕೆ ಜ್ಯೋತಿಯಾಗಿರಿ" ಎಂದು ಕರೆ ನೀಡುವ ಮೂಲಕ ತಮ್ಮ ಮಾತುಗಳನ್ನು ಮುಗಿಸಿದರು.