MAP

ಸಾರ್ವಜನಿಕ ಭೇಟಿಯಲ್ಲಿ ಪೋಪ್ ದೇವರು ಆಲಿಸದೆ ಇರುವಂತಹ ಭಿನ್ನಹ ಯಾವುದೂ ಇಲ್ಲ

ಪೋಪ್ ಹದಿನಾಲ್ಕನೇ ಲಿಯೋ ಅವರು ತಮ್ಮ ವಾರದ ಸಾರ್ವಜನಿಕ ಭೇಟಿಯನ್ನು ಹಮ್ಮಿಕೊಂಡಿದ್ದು, ಇಂದಿನ ಶುಭಸಂದೇಶದಲ್ಲಿ ಯೇಸು ಕ್ರಿಸ್ತರು ತಮ್ಮನ್ನು ಗಟ್ಟಿಯಾಗಿ ಕೂಗಿ ಕರೆದ ಅಂಧನಿಗೆ ದೃಷ್ಟಿದಾನ ಮಾಡಿದ್ದನ್ನೂ ಹಾಗೂ ತದ ನಂತರ ಆತ ಅವರನ್ನು ಹಿಂಬಾಲಿಸಿದರ ಕುರಿತು ಚಿಂತನೆಯನ್ನು ವ್ಯಕ್ತಪಡಿಸಿದ್ದಾರೆ.

ವರದಿ: ಕ್ರಿಸ್ಟೋಫರ್ ವೆಲ್ಸ್

ಪೋಪ್ ಹದಿನಾಲ್ಕನೇ ಲಿಯೋ ಅವರು ತಮ್ಮ ವಾರದ ಸಾರ್ವಜನಿಕ ಭೇಟಿಯನ್ನು ಹಮ್ಮಿಕೊಂಡಿದ್ದು, ಇಂದಿನ ಶುಭಸಂದೇಶದಲ್ಲಿ ಯೇಸು ಕ್ರಿಸ್ತರು ತಮ್ಮನ್ನು ಗಟ್ಟಿಯಾಗಿ ಕೂಗಿ ಕರೆದ ಅಂಧನಿಗೆ ದೃಷ್ಟಿದಾನ ಮಾಡಿದ್ದನ್ನೂ ಹಾಗೂ ತದ ನಂತರ ಆತ ಅವರನ್ನು ಹಿಂಬಾಲಿಸಿದರ ಕುರಿತು ಚಿಂತನೆಯನ್ನು ವ್ಯಕ್ತಪಡಿಸಿದ್ದಾರೆ.

"ಕ್ರಿಸ್ತರು ಜೆರುಸಲೇಮಿಗೆ ಹೋಗುವ ಹಾದಿಯಲ್ಲಿ ಜೆರಿಕೋ ಪಟ್ಟಣವನ್ನು ಹಾದುಹೋಗುವಾಗ ಅಲ್ಲಿದ್ದ ಕುರುಡನಾದ ತಿಮಾಯನ ಮಗ ಬಾರ್ ತಿಮಾಯನು ಯೇಸುಕ್ರಿಸ್ತರು ಬರುತ್ತಿದ್ದದ್ದನ್ನು ಅರಿತೊಡನೆ ಜೋರಾಗಿ ತನ್ನ ಮೇಲೆ ಕರುಣೆ ತೋರುವಂತೆ ಕೂಗಿಕೊಳ್ಳುತ್ತಾನೆ" ಈ ಘಟನೆಯ ಕುರಿತು ಪೋಪ್ ಹದಿನಾಲ್ಕನೇ ಲಿಯೋ ಅವರು ಚಿಂತನೆಯನ್ನು ವ್ಯಕ್ತಪಡಿಸಿದ್ದಾರೆ.

ಅವರಿಬ್ಬರ ಭೇಟಿಯ ಪ್ರಾಮುಖ್ಯತೆಯ ಕುರಿತು ಮಾತನಾಡಿದ ಪೋಪರು "ಇದು ಬಹುಮುಖ್ಯ ಭೇಟಿಯಾಗಿದೆ ಏಕೆಂದರೆ ಕ್ರಿಸ್ತರು ಜೆರುಸಲೇಮಿಗೆ ಹೋಗುವ ಹಾದಿಯಲ್ಲಿ ಸಮುದ್ರ ಮಟ್ಟಿಕ್ಕಿಂತ ಕೆಳಗಿದ್ದ ಜೆರಿಕೋ ಪಟ್ಟಣದಲ್ಲಿ ಹಾದುಹೋಗುತ್ತಿದ್ದರು. ಜೆರುಸಲೇಮ್ ಸಮುದ್ರ ಮಟ್ಟಕ್ಕಿಂತ ಮೇಲೆ ಇತ್ತು. ಇದು ಸೂಚ್ಯವಾಗಿ ಅವರು ಪಾತಾಳಕ್ಕೆ ಇಳಿದು ಮೂರನೇಯ ದಿನ ಜೀವಂತರಾಗಿ ಸ್ವರ್ಗಕ್ಕೆ ಏರುವುದರ ಸಂಕೇತವಾಗಿದೆ" ಎಂದು ಹೇಳಿದರು.

"ಈ ದಿಶೆಯಲ್ಲಿ ಬಾರ್ ತಿಮಾಯನ ಹೆಸರೂ ಸಹ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ ಏಕೆಂದರೆ ಈ ಹೆಸರಿನ ಅರ್ಥ "ಗೌರವ ಅಥವಾ ಮನ್ನಣೆಯ ಮಗ" ಎಂಬುದಾಗಿದೆ. ಆದರೆ, ಈ ಹೆಸರನ್ನು ಹೊತ್ತ ಬಾರ್ ತಿಮಾಯನು ಕುರುಡನಾಗಿ ರಸ್ತೆ ಬದಿಗಳಲ್ಲಿ ಭಿಕ್ಷೆಯನ್ನು ಬೇಡುತ್ತಿರುತ್ತಾನೆ. ಕ್ರಿಸ್ತರು ಅವನಿಗೆ ಅವನದ್ದೇ ಆದ ಘನತೆಯನ್ನು ನೀಡುವುದರ ಮೂಲಕ ಅವನನ್ನು ಮೇಲೆತ್ತುತ್ತಾರೆ' ಎಂದು ಪೋಪ್ ಸಿಂಹನಾಥರು (ಲಿಯೋ) ಹೇಳಿದರು.

ಮುಂದುವರೆದು ಮಾತನಾಡಿದ ಅವರು "ಬಾರ್ ತಿಮಾಯನು ಯೇಸುವನ್ನು ಗಟ್ಟಿಯಾಗಿ ಕೂಗುತ್ತಾನೆ. ಆತನೊಂದಿಗಿದ್ದವರು ಆತನನ್ನು ಸುಮ್ಮನಿರಿಸಲು ಪ್ರಯತ್ನಿಸಿದರೂ ಸಹ ಅವರು ಸುಮ್ಮನಾಗದೆ ಮತ್ತಷ್ಟು ಜೋರಾಗಿ ಕ್ರಿಸ್ತರನ್ನು ಕೂಗಿ ಕರೆಯುತ್ತಾನೆ. ಕ್ರಿಸ್ತರೂ ಸಹ ಆತನ ಧ್ವನಿಗೆ ಕಿವಿಗೊಟ್ಟರು ಏಕೆಂದರೆ ಅವರಿಗೆ ಕೇಳಿಸದ ಭಿನ್ನಹವು ಯಾವುದೂ ಇಲ್ಲ" ಎಂದು ಪೋಪ್ ಲಿಯೋ ಅವರು ನುಡಿದರು.

"ಕ್ರಿಸ್ತರು ಆತನಿಗೆ ನನ್ನಿಂದ ನಿನಗೇನಾಗಬೇಕು ಎಂದು ಕೇಳಿದಾಗ ಆತ ನನಗೆ ದೃಷ್ಟಿಯನ್ನು ನೀಡಿ ಎಂದು ಬೇಡಿಕೊಳ್ಳುತ್ತಾನೆ. ಆಗ ಕ್ರಿಸ್ತರು ಆತನಿಗೆ ಮೇಲೆ ನೋಡು ಎಂದು ಹೇಳುತ್ತಾರೆ. ಅಂದರೆ ಅವನಿಗೆ ದೃಷ್ಟಿಯನ್ನು ನೀಡುವುದು ಮಾತ್ರವಲ್ಲದೆ ಕ್ರಿಸ್ತರು ಅವನ ಘನತೆಯನ್ನೂ ಸಹ ಮೇಲೆ ಎತ್ತುತ್ತಾರೆ" ಎಂದು ಪೋಪ್ ವಿವರಿಸಿದರು.

ಅಂತಿಮವಾಗಿ ಪೋಪ್ ಲಿಯೋ ಅವರು "ಬಾರ್ ತಿಮಾಯನಂತೆ ನಾವೂ ಸಹ ನಮ್ಮ ಭಿನ್ನಹಗಳನ್ನು, ಕೋರಿಕೆ-ಬೇಡಿಕೆಗನ್ನು ಕ್ರಿಸ್ತರ ಮುಂದಿಡೋಣ. ಖಂಡಿತ ಅವರು ಕೇಳಿಸಿಕೊಳ್ಳುತ್ತಾರೆ" ಎಂದು ಹೇಳಿದರು.

11 ಜೂನ್ 2025, 16:12

ಇತ್ತೀಚಿನ ಭೇಟಿಗಳು

ಎಲ್ಲಾ ಓದಿ >