MAP

ಆರ್ಥಡಾಕ್ಸ್ ಧರ್ಮಸಭೆಯೊಂದಿಗೆ ಸಹಯೋಗದ ಕುರಿತು ಮತ್ತೆ ಪುನರುಚ್ಛರಿಸಿದ ಪೋಪ್

ಇಂದು ಸಂತರುಗಳಾದ ಸಂತ ಪೇತ್ರ ಮತ್ತು ಪೌಲರ ಹಬ್ಬದ ಹಿನ್ನೆಲೆ, ಎಕ್ಯುಮೆನಿಕಲ್ (ಕ್ರಿಸ್ತೀಯ ಪಂಗಡಗಳ ಐಕ್ಯತೆ) ಪೇಟ್ರಿಯಾರ್ಕೇಟ್ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಹದಿನಾಲ್ಕನೇ ಲಿಯೋ ಅವರು ಆರ್ಥಡಾಕ್ಸ್ ಧರ್ಮಸಭೆಯೊಂದಿಗೆ ಕಥೋಲಿಕ ಧರ್ಮಸಭೆಯು ಸದಾ ಸಹಯೋಗದಲ್ಲಿರುತ್ತದ ಎಂಬ ಮಾತುಗಳನ್ನು ಮತ್ತೆ ಪುನರುಚ್ಛರಿಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಇಂದು ಸಂತರುಗಳಾದ ಸಂತ ಪೇತ್ರ ಮತ್ತು ಪೌಲರ ಹಬ್ಬದ ಹಿನ್ನೆಲೆ, ಎಕ್ಯುಮೆನಿಕಲ್ (ಕ್ರಿಸ್ತೀಯ ಪಂಗಡಗಳ ಐಕ್ಯತೆ) ಪೇಟ್ರಿಯಾರ್ಕೇಟ್ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಹದಿನಾಲ್ಕನೇ ಲಿಯೋ ಅವರು ಆರ್ಥಡಾಕ್ಸ್ ಧರ್ಮಸಭೆಯೊಂದಿಗೆ ಕಥೋಲಿಕ ಧರ್ಮಸಭೆಯು ಸದಾ ಸಹಯೋಗದಲ್ಲಿರುತ್ತದ ಎಂಬ ಮಾತುಗಳನ್ನು ಮತ್ತೆ ಪುನರುಚ್ಛರಿಸಿದ್ದಾರೆ.

ಎಕ್ಯುಮೆನಿಕಲ್ ಪೇಟ್ರಿಯಾರ್ಕೇಟ್ ಆಫ್ ಕಾನ್ಸ್ಟಾಂಟಿನೋಪಲ್ ನಿಯೋಗವನ್ನು ಪೋಪ್ ಲಿಯೋ ಅವರು ಇಂದು ವ್ಯಾಟಿಕನ್ನಿನಲ್ಲಿ ಭೇಟಿಯಾಗಿದ್ದಾರೆ ಹಾಗೂ ಈ ಸಂದರ್ಭದಲ್ಲಿ ಕ್ರೈಸ್ತ ಪಂಗಡಗಳ ಐಕ್ಯತೆ ಹಾಗೂ ಸಹಕಾರದ ಕುರಿತು ಮಾತನಾಡಿದ್ದಾರೆ.

ತಾವು ವಿಶ್ವಗುರುವಾಗಿ ಆಯ್ಕೆಯಾದ ಸಂದರ್ಭದಿಂದ ಈವರೆಗೂ ಈಗಾಗಲೇ ವಿವಿಧ ಕ್ರಿಸ್ತೀಯ ಪಂಗಡಗಳು ಕಥೋಲಿಕ ಧರ್ಮಸಭೆಯೊಂದಿಗೆ ಹತ್ತಿರವಾಗಿವೆ ಎಂದು ಪೋಪ್ ಲಿಯೋ ಅವರು ಈ ಪ್ರತಿನಿಧಿಗಳ ನಿಯೋಗವನ್ನು ಉದ್ದೇಶಿಸುತ್ತಾ ನುಡಿದರು. ಸಂತರುಗಳಾದ ಪೇತ್ರ ಮತ್ತು ಅಂದ್ರೇಯ ಅವರ ಹಬ್ಬದಂದು ವಿವಿಧ ಕ್ರೈಸ್ತ ಪಂಗಡಗಳು ಸಾಂಪ್ರದಾಯಿಕವಾಗಿ ಪ್ರತಿನಿಧಿತ್ವಗಳನ್ನು ಬದಲಾಯಿಸಿಕೊಳ್ಳುವುದು ಈಗಾಗಲೇ ಈರ್ವರ ನಡುವೆ ಇರುವ ಉತ್ತಮ ಸಂಬಂಧಕ್ಕೆ ಸಾಕ್ಷಿ ಎಂದು ಪೋಪ್ ಅವರು ಅಭಿಪ್ರಾಯ ಪಟ್ಟಿದ್ದಾರೆ.

"ನಮ್ಮ ಧರ್ಮಸಭೆಗಳ ನಡುವೆ ಸಂಪೂರ್ಣ ಸಹಯೋಗವನ್ನು ಹೊಂದಲು ನಾನು ಸದಾ ಬಯಸುತ್ತೇನೆ ಎಂಬುದನ್ನು ನಿಮಗೆ ಮತ್ತೆ ತಿಳಿಸುತ್ತಿದ್ದೇನೆ" ಎಂದು ಹೇಳಿರುವ ಪೋಪ್ ಲಿಯೋ ಅವರು ನಮ್ಮೊಳಗಿನ ಐಕ್ಯತೆಯು ದೇವರ ನೆರವವಿನಿಂದ ಮಾತ್ರ ಬರುವಂತದ್ದಾಗಿದೆ ಹಾಗೂ ಪರಸ್ಪರ ಗೌರವ ಹಾಗೂ ಪ್ರೀತಿಯಿಂದ ಆಲಿಸಿದಾಗ ಮಾತ್ರ ಇದು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಕ್ರೈಸ್ತ ಪಂಗಡಗಳ ಐಕ್ಯತೆ ಹಾಗೂ ಸಂಪೂರ್ಣ ಸಹಯೋಗಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ನಾನು ನೀವು ನೀಡುವ ಯಾವುದೇ ಸಲಹೆಗಳಿಗೆ ಮುಕ್ತನಾಗಿದ್ದೇನೆ. ನೀವು ಯಾವುದೇ ರೀತಿಯ ಸಲಹೆಯನ್ನು ನನಗೆ ನೀಡಬಹುದು. ಕ್ರೈಸ್ತರು ಐಕ್ಯತೆಯಿಂದಿರುವುದೇ ನಮ್ಮ ಗುರಿ" ಎಂದು ಪೋಪ್ ಹದಿನಾಲ್ಕನೇ ಲಿಯೋ ಅವರು ಈ ನಿಯೋಗವನ್ನು ಉದ್ದೇಶಿಸಿ ಮಾತನಾಡಿದರು ಹಾಗೂ ಅವರಿಗೆ ಕೊನೆಯಲ್ಲಿ ಧನ್ಯವಾದಗಳನ್ನು ತಿಳಿಸಿದರು.

28 ಜೂನ್ 2025, 17:14