ಸನ್ಯಾಸಿಗಳಿಗೆ ಪೋಪ್: ಕ್ರೈಸ್ತ ಬದುಕನ್ನು ಸುಧಾರಿಸಿ, ಪರಿಷ್ಕರಿಸಿ ಮತ್ತು ಸರಳಗೊಳಿಸಿ
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಹದಿನಾಲ್ಕನೇ ಲಿಯೋ ಅವರು ವಲುಂಬ್ರೋಸಿಯನ್ ಆರ್ಡರ್ ಆಫ್ ಸೇಂಟ್ ಬೆನೆಡಿಕ್ಟ್ ಧಾರ್ಮಿಕ ಸಭೆಯ ಸನ್ಯಾಸಿಗಳನ್ನು ಇಂದು ವ್ಯಾಟಿಕನ್ನಿನಲ್ಲಿ ಭೇಟಿ ಮಾಡಿದ್ದು, ಕ್ರೈಸ್ತ ಬದುಕನ್ನು ಸುಧಾರಿಸಿ, ಪರಿಷ್ಕರಿಸಿ ಮತ್ತು ಸರಳಗೊಳಿಸಿ ಎಂದು ಅವರಿಗೆ ಕರೆ ನೀಡಿದ್ದಾರೆ.
"ದ್ವಿತೀಯ ವ್ಯಾಟಿಕನ್ ಸಮ್ಮೇಳನವು ಆರಂಭಿಸಿದ ಧರ್ಮಸಭೆಯ ನವೀಕರಣವನ್ನು ಮುಂದುವರೆಸಿರಿ" ಎಂದು ಪೋಪ್ ಹದಿನಾಲ್ಕನೇ ಲಿಯೋ ಅವರು ವಲುಂಬ್ರೋಸನ್ ಆರ್ಡರ್ ಆಫ್ ಸೇಂಟ್ ಬೆನೆಡಿಕ್ಟ್ ಸಭೆಯ ಸದಸ್ಯರಿಗೆ ಕಿವಿಮಾತನ್ನು ಹೇಳಿದ್ದಾರೆ.
ಸನ್ಯಾಸಿ ಜೀವನದ ಮಹತ್ವದ ಕುರಿತು ಮಾತನಾಡಿದ ಪೋಪ್ ಲಿಯೋ ಅವರು ದೇವರು ನಮ್ಮ ಸಂತೋಷದ ಬುಗ್ಗೆಯಾಗಿದ್ದಾರೆ ಹಾಗೂ ವೈಯಕ್ತಿಕ ಹಾಗೂ ಸಾಮಾಜಿಕ ಪರಿವರ್ತನೆಯ ಬೇರಾಗಿದ್ದಾರೆ.
ಈ ಸಭೆಯ ಸ್ಥಾಪಕರಾದ ಸಂತ ಜಾನ್ ಗುವಾಲ್ಬರ್ಟ್ ಅವರನ್ನು ನೆನಪಿಸಿಕೊಂಡ ಪೋಪ್ ಲಿಯೋ ಅವರು "ಸಂತ ಜಾನ್ ಗುವಾಲ್ಬರ್ಟ್ ಅವರು ತಮ್ಮ ಕಾಲಘಟ್ಟದ ಸವಾಲುಗಳ ನಡುವೆಯೂ ಸಮಾಜಕ್ಕೆ ಹಾಗೂ ದೇವರ ಸೇವೆಗೆ ಬೇಕಾದ ಒಂದು ಸಮುದಾಯವನ್ನು ಕಟ್ಟಲು ಹಾತೊರೆದರು" ಎಂದು ಹೇಳಿದರು.
"ಬದುಕನ್ನು ಸುಧಾರಿಸಿ, ಪರಿಷ್ಕರಿಸಿ ಮತ್ತು ಸರಳಗೊಳಿಸಿ. ದ್ವಿತೀಯ ವ್ಯಾಟಿಕನ್ ಸಮ್ಮೇಳನವು ಆರಂಭಿಸಿದ ಧರ್ಮಸಭೆಯ ನವೀಕರಣವನ್ನು ಮುಂದುವರೆಸಿರಿ" ಎಂದು ಅವರು ಈ ಧಾರ್ಮಿಕ ಸಭೆಯ ಸದಸ್ಯರಿಗೆ ಹೇಳಿದರು.