MAP

ಪೀಟರ್ಸ್ ಪೆನ್ಸ್ ಕಾಣಿಕೆ ಸಂಗ್ರಹಕ್ಕೆ ನೀಡಿದ ಬೆಂಬಲಕ್ಕಾಗಿ ಧನ್ಯವಾದ ತಿಳಿಸಿದ ಪೋಪ್ ಲಿಯೋ XIV

ಪೋಪ್ ಹದಿನಾಲ್ಕನೇ ಲಿಯೋ ಅವರು ಇಂದಿನ ತ್ರಿಕಾಲ ಪ್ರಾರ್ಥನೆಗೂ ಮುಂಚಿತವಾಗಿ ಭಕ್ತಾಧಿಗಳನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಅವರು ಪೀಟರ್ಸ್ ಪೆನ್ಸ್ ಕಾಣಿಕೆ ಸಂಗ್ರಹಕ್ಕೆ ಭಕ್ತಾಧಿಗಳು ನೀಡಿದ ಬೆಂಬಲಕ್ಕಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಇದೇ ವೇಳೆ ಅವರು ಪೀಟರ್ಸ್ ಪೆನ್ಸ್ ಪ್ರಾಮುಖ್ಯತೆಯನ್ನು ಕುರಿತೂ ಸಹ ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಬಾಂಗುಯಿ ಶಾಲೆ ದುರಂತಕ್ಕೆ ಮಿಡಿದ ಪೋಪ್

ಸೆಂಟ್ರಲ್ ಆಫ್ರಿಕನ್ ಶಾಲೆಯ ಕಾಲ್ತುಳಿತ ದುರಂತದ ಕುರಿತು ಮಾತನಾಡಿರುವ ಅವರು ಇದರಿಂದ ನೊಂದ ಎಲ್ಲರಿಗಾಗಿ ಪ್ರಾರ್ಥಿಸಿದ್ದಾರೆ. ಇದೇ ಸಂದರ್ಭದಲ್ಲಿ ಜಗತ್ತನ್ನು ಬಾಧಿಸುತ್ತಿರುವ ಯುದ್ಧವು ನಿಲ್ಲಲು ಎಲ್ಲರೂ ಸಹ ರಾಜತಾಂತ್ರಿಕ ಪರಿಹಾರಗಳನ್ನು ಕಂಡುಕೊಳ್ಳಬೇಕು ಎಂದು ಹೇಳಿದರು.

"ವಿದ್ಯಾರ್ಥಿಗಳಲ್ಲಿ ಹಲವಾರು ಸಾವುಗಳು ಮತ್ತು ಗಾಯಗಳಿಗೆ ಕಾರಣವಾದ ದುರಂತ ಅಪಘಾತದ ಶೋಕದಲ್ಲಿ, ಬಂಗುಯಿಯಲ್ಲಿರುವ ಬಾರ್ತೆಲೆಮಿ ಬೊಗಾಂಡಾ ಪ್ರೌಢಶಾಲೆಯ ಸಮುದಾಯಕ್ಕಾಗಿ ನಾನು ನನ್ನ ಪ್ರಾರ್ಥನೆಗಳನ್ನು ಭರವಸೆ ನೀಡುತ್ತೇನೆ" ಎಂದು ಪೋಪ್ ಹದಿನಾಲ್ಕನೇ ಲಿಯೋ ಅವರು ತ್ರಿಕಾಲ ಪ್ರಾರ್ಥನೆಯ ಸಂದರ್ಭದಲ್ಲಿ ಹೇಳಿದ್ದಾರೆ.

ಯುದ್ಧದಿಂದ ಶಾಂತಿಗಾಗಿ ಮನವಿ

ಪೋಪ್ ತಮ್ಮ ಮಾತುಗಳನ್ನು ಮುಗಿಸುವುದಕ್ಕೆ ಮುಂಚಿತವಾಗಿ, ಜಗತ್ತಿನಲ್ಲಿ ಯುದ್ಧದಿಂದ ಬಳಲುತ್ತಿರುವ ಜನರ ಕಡೆಗೆ ಗಮನವನ್ನು ಹರಿಸಿದರು. ಯುದ್ಧವು ಕೊನೆಗೊಂಡು ಜಗತ್ತಿನಲ್ಲಿ ಶಾಂತಿ ನೆಲೆಗೊಳ್ಳಲು ರಾಜತಾಂತ್ರಿಕ ಸಂವಾದವೇ ಪರಿಹಾರ ಎಂದು ಹೇಳಿದರು.

29 ಜೂನ್ 2025, 17:25