MAP

Leone a Piazza San Pietro in papamobile, saluta i fedeli

ಕ್ರೀಡಾ ಜ್ಯೂಬಿಲಿಗೆ ಅಥ್ಲೀಟ್'ಗಳನ್ನು ಸ್ವಾಗತಿಸಿದ ಪೋಪ್ ಲಿಯೋ

ಪೋಪ್ ಹದಿನಾಲ್ಕನೇ ಲಿಯೋ ಅವರು ಪೋಪ್ ಫ್ರಾನ್ಸಿಸ್ ಅವರು ಆರಂಭಿಸಿದ ಶನಿವಾರದ ಜ್ಯೂಬಿಲಿ ಭೇಟಿಗಳನ್ನು ಮುಂದುವರೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಕ್ರೀಡಾ ಜ್ಯೂಬಿಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಕ್ರೀಡಾಸ್ಪರ್ದಿಗಳನ್ನು ವ್ಯಾಟಿಕನ್ನಿಗೆ ಸ್ವಾಗತಿಸಿದ್ದಾರೆ.

ವರದಿ: ಕ್ರಿಸ್ಟೋಫರ್ ವೆಲ್ಸ್

ಪೋಪ್ ಹದಿನಾಲ್ಕನೇ ಲಿಯೋ ಅವರು ಪೋಪ್ ಫ್ರಾನ್ಸಿಸ್ ಅವರು ಆರಂಭಿಸಿದ ಶನಿವಾರದ ಜ್ಯೂಬಿಲಿ ಭೇಟಿಗಳನ್ನು ಮುಂದುವರೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಕ್ರೀಡಾ ಜ್ಯೂಬಿಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಕ್ರೀಡಾಸ್ಪರ್ದಿಗಳನ್ನು ವ್ಯಾಟಿಕನ್ನಿಗೆ ಸ್ವಾಗತಿಸಿದ್ದಾರೆ.

ಈ ವೇಳೆ ನೆರೆದಿದ್ದ ಎಲ್ಲರನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಲಿಯೋ ಅವರು "ಈ ಸಂದರ್ಭದಲ್ಲಿ ಬಿಷಪ್ ಸಂತ ಇರೇನಿಯಸ್ ಅವರನ್ನು ನೆನಪಿಸಿಕೊಳ್ಳುವುದು ಬಹಳ ಸೂಕ್ತವಾಗಿದೆ. ಏಕೆಂದರೆ ಅವರು ಏಷ್ಯಾ ಮೈನರ್ ಖಂಡದವರು. ಪ್ರೇಷಿತರಿಂದ ನೇರವಾಗಿ ವಿಶ್ವಾಸವನ್ನು ಪಡೆದ ನಂತರ ಅವರು ಯೂರೋಪ್ ದೇಶಕ್ಕೆ ಬಂದರು. ಅಂದರೆ, ನಮಗೆ ಶುಭಸಂದೇಶ ಹೊರಗಿನಿಂದ ಬಂದಿದೆ. ಅದೇ ರೀತಿ ಅದನ್ನು ನಾವು ಇಂದಿನ ವಲಸಿಗ ಸಮುದಾಯಗಳಲ್ಲಿ ಹಾಗೂ ಬುಡಕಟ್ಟುಗಳಲ್ಲಿ ಕಾಣಬಹುದಾಗಿದೆ" ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಅವರು "ಇವುಗಳ ಹೊರತಾಗಿಯೂ ಸಂತ ಇರೇನಿಯಸ್ ಅವರು ನಮಗೆ ಕಲಿಸುವ ಪಾಠವೆಂದರೆ ಯೇಸುವಿನ ಮೇಲೆ ನಾವು ನಮ್ಮ ಗಮನವನ್ನು ಕೇಂದ್ರೀಕರಿಸುವ ಮೂಲಕ ಹೇಗೆ ನಾವು ನಮ್ಮ ಸಂಕಷ್ಟಗಳಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು ಎಂಬುದಾಗಿದೆ. ಯೇಸು ಕ್ರಿಸ್ತರು ನಮ್ಮನ್ನು ಬೇರ್ಪಡಿಸುವ ಗೋಡೆಯಲ್ಲ ಬದಲಿಗೆ ನಮ್ಮೆಲ್ಲರನ್ನು ಒಗ್ಗೂಡಿಸುವ ಬಾಗಿಲಾಗಿದ್ದಾರೆ" ಎಂದು ಪೋಪ್ ಲಿಯೋ ನುಡಿದಿದ್ದಾರೆ. 

"ಇಂದಿನ ಕಾಲಘಟ್ಟದಲ್ಲಿ ಕೆಲವು ವಿಚಾರಗಳು ನಮ್ಮನ್ನು ಹುಚ್ಚರನ್ನಾಗಿಸಿ, ಪರಸ್ಪರ ಕೊಲ್ಲುವಂತೆ ಪ್ರೇರೇಪಿಸಬಹುದು. ಆದುದರಿಂದ ಕ್ರಿಸ್ತರ ಶರೀರವನ್ನು ನಮ್ಮೊಳಗೆ ಹಾಗೂ ನಮ್ಮ ಸಹೋದರ- ಸಹೋದರಿಯರ ನಡುವೆ ಮುಕ್ತವಾಗಿ ಸ್ವಾಗತಿಸಿಕೊಳ್ಳಬೇಕು" ಎಂದು ಹೇಳಿದ್ದಾರೆ. ಮುಂದುವರೆದು ಸಂತ ಇರೇನಿಯಸರ ಕುರಿತು ಮಾತನಾಡಿದ ಪೋಪ್ ಲಿಯೋ ಅವರು "ಸಂತ ಇರೇನಿಯಸರು ನಮಗೆ ಒಗ್ಗಟ್ಟನ್ನು ಕಲಿಸುವ ತಂದೆಯಾಗಿದ್ದಾರೆ. ಬೇರ್ಪಡಿಸಲು ಅಲ್ಲ ಬದಲಿಗೆ ಸಂಪರ್ಕವನ್ನು ಸಾಧಿಸುವುದನ್ನು ಅವರು ನಮಗೆ ಕಲಿಸುತ್ತಾರೆ" ಎಂದು ಹೇಳಿದರು.

"ನಾವೆಲ್ಲರೂ ಭರವಸೆಯ ಯಾತ್ರಿಕರಾಗಿದ್ದೇವೆ. ಇಂತಿರುವಾಗ ನಾವು ಸ್ನೇಹ ಬಂಧದ ಸೇತುವೆಗಳನ್ನು ನಿರ್ಮಿಸಬೇಕು; ಗೋಡೆಗಳನ್ನಲ್ಲ" ಎಂದು ಪೋಪ್ ಲಿಯೋ ಅವರು ನೆರೆದಿದ್ದವರಿಗೆ ಕರೆಯನ್ನು ನೀಡಿದ್ದಾರೆ. ಇದೇ ವೇಳೆ ಅಲ್ಲಿ ನೆರೆದಿದ್ದ ಎಲ್ಲರಿಗೂ ಪೋಪ್ ಲಿಯೋ ಅವರು ಭರವಸೆಯ ಸುವಾರ್ತಾ ಪ್ರಸಾರಕರಾಗಬೇಕು ಎಂದು ಪ್ರೋತ್ಸಾಹಿಸಿದ್ದಾರೆ.

14 ಜೂನ್ 2025, 17:56