ಪೋಪ್ ಲಿಯೋ ಅವರ ಆಯ್ಕೆಯನ್ನು ಸಂಭ್ರಮಿಸಲು ಸಜ್ಜಾದ ಚಿಕಾಗೋ
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಹದಿನಾಲ್ಕನೇ ಲಿಯೋ ಅವರ ತವರು ಚಿಕಾಗೋ ಮಹಾಧರ್ಮಕ್ಷೇತ್ರವು ಪೋಪರ ನೆಚ್ಚಿನ ಬೇಸ್'ಬಾಲ್ ತಂಡವಾಗಿರುವ ವೈಟ್ ಸಾಕ್ಸ್ ಇರುವ ರೇಟ್ ಫೀಲ್ಡ್'ನಲ್ಲಿ ಅವರ ಆಯ್ಕೆಯನ್ನು ಸಂಭ್ರಮಿಸಲು ಸಜ್ಜಾಗಿದೆ. ಆ ಮೂಲಕ "ಮಣ್ಣಿನ ಮಗ" ವಿಶ್ವಗುರು ಆಗಿ ಆಯ್ಕೆಯಾಗಿರುವುದನ್ನು ಚಿಕಾಗೋ ಜನತೆ ಸಂಭ್ರಮಿಸಲಿದ್ದಾರೆ.
ಈ ಕಾರ್ಯಕ್ರಮವು ನಡೆಯಲಿರುವ ರೇಟ್ ಫೀಲ್ಡ್ ಪ್ರದೇಶವವನ್ನು ಚಿಕಾಗೋ ಮಹಾಧರ್ಮಕ್ಷೇತ್ರವು ವಿಶ್ವಾಸ, ಐಕ್ಯತೆ ಹಾಗೂ ಸಮುದಾಯ ಸ್ಪೂರ್ತಿಯ ಕೇಂದ್ರವಾಗಿದೆ ಎಂದು ಹೇಳಿದೆ.
ಈ ಕಾರ್ಯಕ್ರಮದ ಕುರಿತು ಚಿಕಾಗೋ ಮಹಾಧರ್ಮಕ್ಷೇತ್ರವು ಎಕ್ಸ್ ಜಾಲತಾಣದಲ್ಲಿ ಮಾಹಿತಿಯನ್ನು ನೀಡಿದ್ದು, ಜೀವಮಾನ ಕಾಲದಲ್ಲಿ ಒಮ್ಮೆ ಮಾತ್ರ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಭಾಗಿಯಾಗಿ ಎಂದು ಹೇಳಿದೆ.
ರೇಟ್ ಫೀಲ್ಡ್ ನಗರದ ಬೇಸ್‌ಬಾಲ್ ಕ್ರೀಡಾಂಗಣವಾಗಿದ್ದು, ಮೇಜರ್ ಲೀಗ್ ಬೇಸ್‌ಬಾಲ್‌ನ ಚಿಕಾಗೋ ವೈಟ್ ಸಾಕ್ಸ್‌ನ ತವರು ಬಾಲ್ ಪಾರ್ಕ್ ಆಗಿದೆ.
ಜೂನ್ 14 ರ ಶನಿವಾರ ಮಧ್ಯಾಹ್ನ 12:30 ಕ್ಕೆ ಗೇಟ್ಸ್ ತೆರೆಯಲಿದ್ದು, ಕಾರ್ಯಕ್ರಮವು ಮಧ್ಯಾಹ್ನ 2:30 ಕ್ಕೆ ಪ್ರಾರಂಭವಾಗಿ, ಸ್ಥಳೀಯ ಸಮಯ ಸಂಜೆ 4:00 ಗಂಟೆಗೆ ಚಿಕಾಗೋದ ಆರ್ಚ್‌ಬಿಷಪ್ ಕಾರ್ಡಿನಲ್ ಬ್ಲೇಸ್ ಕ್ಯುಪಿಚ್ ಅವರ ಅಧ್ಯಕ್ಷತೆಯಲ್ಲಿ ಪವಿತ್ರ ಬಲಿಪೂಜೆಯೊಂದಿಗೆ ಕೊನೆಗೊಳ್ಳುತ್ತದೆ.
ಈ ಕಾರ್ಯಕ್ರಮವನ್ನು ಮೊದಲು ಘೋಷಿಸಿದಾಗ ಕಾರ್ಡಿನಲ್ ಬ್ಲೇಸ್ ಕ್ಯುಪಿಚ್ ಒಂದು ಸಣ್ಣ ವೀಡಿಯೊ ಸಂದೇಶವನ್ನು ಬಿಡುಗಡೆ ಮಾಡಿ, ಎಲ್ಲರೂ ಭಾಗವಹಿಸಲು ಆಹ್ವಾನಿಸಿದರು.
ಪೋಪ್ ಲಿಯೋ XIV ಅವರು ಈ ಕಾರ್ಯಕ್ರಮಕ್ಕೆ ಚಿಕಾಗೋದಲ್ಲಿ ಉಪಸ್ಥಿತರಿಲ್ಲದಿದ್ದರೂ, ಅವರು ರೋಮ್‌ನಿಂದ ದೂರದಿಂದಲೇ ಭಾಗವಹಿಸುವುದಾಗಿ ಘೋಷಿಸಿದ್ದಾರೆ, ಸಭೆಯಲ್ಲಿ ವೀಡಿಯೊ ಸಂದೇಶವನ್ನು ಪ್ರಸಾರ ಮಾಡಲಾಗುವುದು.