ಕಾರ್ಡಿನಲ್ ಫೆರ್ನಾಂಡಿಸ್: ಪೋಪ್ ಫ್ರಾನ್ಸಿಸ್ ದಣಿವರಿಯದ ಕಾರ್ಮಿಕರಾಗಿದ್ದರು
ವಿಶ್ವದಾದ್ಯಂತದ ಅನೇಕ ದೇಶಗಳಲ್ಲಿರುವಂತೆ ವ್ಯಾಟಿಕನ್‌ನಲ್ಲಿ ಸಾರ್ವಜನಿಕ ರಜಾದಿನವಾಗಿರುವ ಮೇ 1 ರ ಗುರುವಾರ, ಕಾರ್ಡಿನಲ್ಸ್ ಸಮಾವೇಶಕ್ಕೆ ಸಿದ್ಧತೆ ನಡೆಸಲು ಸಾರ್ವರ್ಥಿಕ ಸಭೆಯನ್ನು ನಡೆಸಲಿಲ್ಲ.
ಆದಾಗ್ಯೂ, ಅನೇಕ ಸದಸ್ಯರು ಸೇಂಟ್ ಪೀಟರ್ಸ್ ಬೆಸಿಲಿಕಾದಲ್ಲಿ ನವಮಿಡಿಯಲ್ಸ್‌ನ ಆರನೇ ಸಾಮೂಹಿಕ ಪ್ರಾರ್ಥನೆಗಾಗಿ ಒಟ್ಟುಗೂಡಿದರು. ಈ ಆಚರಣೆಯ ಅಧ್ಯಕ್ಷತೆಯನ್ನು ಕಾರ್ಡಿನಲ್ ವಿಕ್ಟರ್ ಮ್ಯಾನುಯೆಲ್ ಫೆರ್ನಾಂಡಿಸ್ ವಹಿಸಿದ್ದರು, ದಿವಂಗತ ಜಗದ್ಗುರುಗಳ ಉತ್ತಮ ಸ್ನೇಹಿತರಾಗಿದ್ದರು ಮತ್ತು ವಿಶ್ವಾಸದ ಡಿಕಾಸ್ಟರಿಯ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದರು.
ಪೋಪ್ ಫ್ರಾನ್ಸಿಸ್ 'ಕ್ರಿಸ್ತನೊಂದಿಗೆ ಸಂಪೂರ್ಣವಾಗಿ ಐಕ್ಯರಾಗಿದ್ದಾರೆ' ಎಂದು ಹೇಳುವ ಮೂಲಕ ಕಾರ್ಡಿನಲ್ ಫೆರ್ನಾಂಡಿಸ್ ರವರು ತಮ್ಮ ಪ್ರಬೋದನೆಯನ್ನು ಪ್ರಾರಂಭಿಸಿದರು.
ಕೆಲಸದ ಮೂಲಕ ಘನತೆ
ಮೇ 1 ಅಂತರರಾಷ್ಟ್ರೀಯ ಕಾರ್ಮಿಕರ ದಿನವಾಗಿದ್ದು ದಿವಂಗತ ಜಗದ್ಗುರುಗಳ ಪ್ರಕಾರ "ಕೆಲಸವು ಮಾನವನ ಘನತೆಯನ್ನು ವ್ಯಕ್ತಪಡಿಸುತ್ತದೆ ಮತ್ತು ಪೋಷಿಸುತ್ತದೆ". ಎಂದು ಒತ್ತಿ ಹೇಳಿದರು,
"ನಮ್ಮ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ನಮಗೆ ಅನುವು ಮಾಡಿಕೊಡುತ್ತದೆ, ನಮ್ಮ ಸಂಬಂಧಗಳಲ್ಲಿ ಬೆಳೆಯಲು ನಮಗೆ ಸಹಾಯ ಮಾಡುತ್ತದೆ, ಈ ಜಗತ್ತನ್ನು ನೋಡಿಕೊಳ್ಳುವಲ್ಲಿ ಮತ್ತು ಸುಧಾರಿಸುವಲ್ಲಿ ನಾವು ದೇವರ ಸಹಭಾಗಿಗಳಾಗಲು ಅನುವು ಮಾಡಿಕೊಡುತ್ತದೆ" ಎಂದು ಕಾರ್ಡಿನಲ್ ಫೆರ್ನಾಂಡಿಸ್ ಹೇಳಿದರು.
ಮಾನವ ಘನತೆಯನ್ನು ಉತ್ತೇಜಿಸುವುದು ಎಂದರೆ ಜನರು "ತಮ್ಮಲ್ಲಿರುವ ಎಲ್ಲಾ ಒಳ್ಳೆಯದನ್ನು ಅಭಿವೃದ್ಧಿಪಡಿಸಲು, ದೇವರು ಅವರಿಗೆ ನೀಡಿರುವ ಉಡುಗೊರೆಗಳೊಂದಿಗೆ ತಮ್ಮ ಜೀವನವನ್ನು ಸಂಪಾದಿಸಲು, ಅವರ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು" ಅನುವು ಮಾಡಿಕೊಡುವುದು ಎಂದು ಅವರು ಹೇಳಿದರು.
ಪೋಪ್ ಫ್ರಾನ್ಸಿಸ್, ದಣಿವರಿಯದ ಕೆಲಸಗಾರ
ಕಾರ್ಡಿನಲ್ ಫೆರ್ನಾಂಡಿಸ್ ಅವರು ಪೋಪ್ ಫ್ರಾನ್ಸಿಸ್ ದಣಿವರಿಯದ ಕೆಲಸಗಾರ ಎಂಬುದನ್ನ ಉದಾಹರಣೆಯ ಮೂಲಕ ತಿಳಿಸಿದರು. "ಅವರು ಬೆಳಿಗ್ಗೆಯಲ್ಲಿ, ನಿರಂತರ ಸಭೆಗಳಲ್ಲಿ , ಜನರನ್ನ ಸಂದಿಸುವಿಕೆಯಲ್ಲಿ, ಆಚರಣೆ ಮತ್ತು ಕೂಟಗಳೊಂದಿಗೆ ಮಾತ್ರವಲ್ಲದೆ, ಮಧ್ಯಾಹ್ನದಾದ್ಯಂತ ಕೆಲಸ ಮಾಡುತ್ತಿದ್ದರು" ಎಂದು ಅವರು ನೆನಪಿಸಿಕೊಂಡರು, ಅವರ ಸಾವಿಗೆ ಕೇವಲ ನಾಲ್ಕು ದಿನಗಳ ಮೊದಲು, ತುಂಬಾ ಅನಾರೋಗ್ಯದಲ್ಲಿದ್ದರೋ ಸಹ, ಅವರು ಜೈಲಿಗೆ ಭೇಟಿ ನೀಡಬೇಕೆಂದು ಒತ್ತಾಯಿಸಿದರು.
ಜಗದ್ಗುರುಗಳು ತುಂಬಾ ವಿರಳವಾಗಿ ರಜೆ ತೆಗೆದುಕೊಳ್ಳುತ್ತಿದ್ದರು. ಬ್ಯೂನಸ್ ಐರಿಸ್‌ನಲ್ಲಿ ಅವರಿಗೆ ಈಗಾಗಲೇ ಇದ್ದ ಅಭ್ಯಾಸವನ್ನು ಕಾರ್ಡಿನಲ್ ಫೆರ್ನಾಂಡಿಸ್ ನೆನಪಿಸಿಕೊಂಡರು: “ಅವರು ಎಂದಿಗೂ ರೆಸ್ಟೋರೆಂಟ್‌ಗಳಿಗೆ, ರಂಗಮಂದಿರಕ್ಕೆ, ನಡಿಗೆಗೆ ಅಥವಾ ಚಲನಚಿತ್ರ ನೋಡಲು ಹೋಗಲಿಲ್ಲ, ಅವರು ಪೂರ್ಣ ದಿನ ರಜೆ ತೆಗೆದುಕೊಂಡಿಲ್ಲ”.
ಫೆರ್ನಾಂಡಿಸ್ ಮುಂದುವರಿಸುತ್ತಾ, “ಪೋಪ್ ಫ್ರಾನ್ಸಿಸ್ ರವರಿಗೆ, ಅವರ ದೈನಂದಿನ ಕೆಲಸವು ದೇವರ ಪ್ರೀತಿಗೆ ಅವರ ಪ್ರತಿಕ್ರಿಯೆಯಾಗಿತ್ತು”.
ಪೋಪ್ ಅವರನ್ನು ಸಂತ ಜೋಸೆಫ್ ರವರಿಗೆ ಒಪ್ಪಿಸಿಕೊಡುವುದು
ಕ್ಯೂರಿಯಾದ ಸದಸ್ಯರು ಸಹ ಕಾರ್ಮಿಕರು, ಫೆರ್ನಾಂಡಿಸ್ ಈ ರೀತಿ ನುಡಿದರು: “ಕೆಲಸವು ಕ್ರೈಸ್ತರಾಗಿ ಪಕ್ವತೆ ಮತ್ತು ನೆರವೇರಿಕೆಯ ಮಾರ್ಗವಾಗಿದೆ”.
ಕೊನೆಯಲ್ಲಿ, ಪೋಪ್ ಫ್ರಾನ್ಸಿಸ್ ಚಿಂತಾಕ್ರಾಂತರಾದಾಗಲೆಲ್ಲಾ, “ಅವರು ಸಂತ ಜೋಸೆಫ್ ರವರ ಪ್ರತಿಮೆಯ ಅಡಿಯಲ್ಲಿ ಪ್ರಾರ್ಥನೆಯೊಂದಿಗಿನ ಕಾಗದವನ್ನು ಇಡುತ್ತಿದ್ದರು” ಎಂದು ಅರ್ಜೆಂಟೀನಾದ ಕಾರ್ಡಿನಲ್ ನೆನಪಿಸಿಕೊಂಡರು.
ಮಾತೆ ಮೇರಿ ಮತ್ತು ಯೇಸುವನ್ನು ನೋಡಿಕೊಳ್ಳಲು ತುಂಬಾ ಶ್ರಮಿಸಿದ ಸಂತರಿಗೆ, ನಾವು ಈಗ ಪ್ರಾರ್ಥಿಸೋಣ: “ನಮ್ಮ ಪ್ರೀತಿಯ ಪೋಪ್ ಫ್ರಾನ್ಸಿಸ್ ರವರನ್ನು ಸ್ವರ್ಗದಲ್ಲಿ ಅಪ್ಪಿಕೊಳ್ಳಲು ಅವರನ್ನು ಕೇಳೋಣ”. ಎಂಬುದಾಗಿ ಕಾರ್ಡಿನಲ್ ಫೆರ್ನಾಂಡಿಸ್ ಹೇಳಿದರು.