MAP

ಉಕ್ರೇನಿಯನ್ ಗ್ರೀಕ್ ಕಥೋಲಿಕ ಧರ್ಮಸಭೆಯ ಮುಖ್ಯಸ್ಥರನ್ನು ಪೋಪ್ ಲಿಯೋ XIV ಭೇಟಿಯಾದರು

ಕೀವ್‌ನ ಮಹಾಧರ್ಮಾಧ್ಯಕ್ಷರು ಗುರುವಾರ ಬೆಳಿಗ್ಗೆ ಪೋಪ್ ಲಿಯೋ XIV ಅವರನ್ನು ಸಾವರ್ಥಿಕ ಸಭೆಯಲ್ಲಿ ಭೇಟಿಯಾಗಿ ಧನ್ಯವಾದ ಹೇಳಿದರು. ಉಕ್ರೇನ್ ಜನರ ನೋವನ್ನು ಚಿತ್ರಿಸುವ “ರೆಕ್ವಿಯೆಂ ಪ್ರಾರ್ಥನೆ” ಎಂಬ ಚಿತ್ರವನ್ನು ಧರ್ಮಾಧ್ಯಕ್ಷರು ಅವರಿಗೆ ಉಡುಗೊರೆಯಾಗಿ ನೀಡಿದರು.

ವ್ಯಾಟಿಕನ್ ವರದಿ

ಮೇ 15, ಗುರುವಾರದ ಬೆಳಿಗ್ಗೆ ಪೋಪ್ ಲಿಯೋ XIV ಅವರು ಕೀವ್‌ನ ಮಹಾಧರ್ಮಾಧ್ಯಕ್ಷ ಪರಮ ಪೂಜ್ಯ ಸ್ವಿಯಾತೋಸ್ಲಾವ್ ಶೆವ್ಚುಕ್ ಅವರನ್ನು ಸ್ವೀಕರಿಸಿದರು. ಜಗದ್ಗುರುಗಳ ಅರಮನೆಯ ಗ್ರಂಥಾಲಯದಲ್ಲಿ ನಡೆದ ಈ ಭೇಟಿಯಲ್ಲಿ, ಮೇ 11, ಭಾನುವಾರದಂದು ರೆಜಿನಾ ಚೆಲಿ ಪ್ರಾರ್ಥನೆಯ ಸಂದರ್ಭದಲ್ಲಿ ಜಗದ್ಗುರುಗಳು 'ಉಕ್ರೇನ್ ಜನರ ಸಂಕಷ್ಟದ' ಕುರಿತು ಉಲ್ಲೇಖಿಸಿದ್ದಕ್ಕಾಗಿ ಉಕ್ರೇನ್ ನ ಗ್ರೀಕ್ ಕಥೋಲಿಕ  ಧರ್ಮಸಭೆಯ ಮುಖ್ಯಸ್ಥರು ಧನ್ಯವಾದವನ್ನು ಸಲ್ಲಿಸಿದರು. ಜಗದ್ಗುರುಗಳು “ನಿಜವಾದ, ನ್ಯಾಯಯುತ ಮತ್ತು ಶಾಶ್ವತವಾದ ಶಾಂತಿ”ಗಾಗಿ ಕರೆ ನೀಡಿ, ಎಲ್ಲಾ ಕೈದಿಗಳನ್ನು ಬಿಡುಗಡೆ ಮಾಡಲು ಮತ್ತು ಮಕ್ಕಳನ್ನು ಮನೆಗೆ ಮರಳಿಸಲು ಕೇಳಿಕೊಂಡಿದ್ದರು.

ಗ್ರೀಕ್ ಕಥೋಲಿಕ ಕಾರ್ಯಾಲಯದ ಪ್ರಕಾರ, ಪೋಪ್ ಅವರ ಮಾತುಗಳು “ಉಕ್ರೇನ್ ಜನರ ಗಾಯಗೊಂಡ ಆತ್ಮಕ್ಕೆ ನಿಜವಾದ ಆಧ್ಯಾತ್ಮಿಕ ತೈಲವಾಗಿದೆ” ಎಂದರು.

ಜನರ ಭೇಟಿಯ ಅಂತ್ಯದಲ್ಲಿ, ಮಹಾಧರ್ಮಾಧ್ಯಕ್ಷರು ಶೆವ್ಚುಕ್ ಜಗದ್ಗುರುಗಳಿಗೆ "ರೆಕ್ವಿಯೆಂ ಪ್ರಾರ್ಥನೆ" ಎಂಬ ಶೀರ್ಷಿಕೆಯಿರುವ ಒಂದು ಪ್ರಾತಿನಿಧಿಕ ಚಿತ್ರವನ್ನು ಉಡುಗೊರೆಯಾಗಿ ನೀಡಿದರು, ಇದು ಉಕ್ರೇನ್ ಜನರ ಸಂಕಷ್ಟವನ್ನು ಚಿತ್ರಿಸುತ್ತದೆ. ಈ ಚಿತ್ರವನ್ನು ಬೊಹ್ದಾನ್ ಪಿಲಿಪಿವ್ ಎಂಬ ಕಲಾವಿದ ಚಿತ್ರಿಸಿದ್ದಾರೆ, ಇವರು ಸಂಘರ್ಷದಲ್ಲಿ ಸಾವಿಗೊಳಗಾದ ಯೋಧನ ತಂದೆಯಾಗಿದ್ದಾರೆ.

16 ಮೇ 2025, 13:24