MAP

ಸಂತ ಪೇತ್ರರ ಉತ್ತರಾಧಿಕಾರಿಗಳ ಹೆಸರುಗಳ ಇತಿಹಾಸ

ಪೋಪ್ ಆಗಿ ಚುನಾಯಿತರಾದ ತಕ್ಷಣ ಪೋಪರು ತಮ್ಮ ದೀಕ್ಷಾಸ್ನಾನದ ಹೆಸರುಗಳನ್ನು ತೊರೆದು ಹೊಸ ಹೆಸರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇತಿಹಾಸವನ್ನು ನೋಡುವುದಾದರೆ ಎಲ್ಲಾ ಪೋಪ್ಗಳು ತಮ್ಮ ಹೆಸರುಗಳನ್ನು ಬದಲಾಯಿಸಿಕೊಂಡಿಲ್ಲ. ಆದರೆ ಹಲವು ಶತಮಾನಗಳಿಂದ ವಿಶ್ವಗುರುಗಳು ತಮ್ಮ ಪೂರ್ವಧಿಕಾರಿಗಳಿಗೆ ಗೌರವ ನೀಡಲು, ಮುಂದುವರೆದ ಸಂಸ್ಕೃತಿಯ ಭಾಗವಾಗಿ ಅಥವಾ ನೂತನ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ತಮ್ಮ ಹೆಸರುಗಳನ್ನು ಬದಲಿಸಿಕೊಂಡಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಆಗಿ ಚುನಾಯಿತರಾದ ತಕ್ಷಣ ಪೋಪರು ತಮ್ಮ ದೀಕ್ಷಾಸ್ನಾನದ ಹೆಸರುಗಳನ್ನು ತೊರೆದು ಹೊಸ ಹೆಸರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇತಿಹಾಸವನ್ನು ನೋಡುವುದಾದರೆ ಎಲ್ಲಾ ಪೋಪ್ಗಳು ತಮ್ಮ ಹೆಸರುಗಳನ್ನು ಬದಲಾಯಿಸಿಕೊಂಡಿಲ್ಲ. ಆದರೆ ಹಲವು ಶತಮಾನಗಳಿಂದ ವಿಶ್ವಗುರುಗಳು ತಮ್ಮ ಪೂರ್ವಧಿಕಾರಿಗಳಿಗೆ ಗೌರವ ನೀಡಲು, ಮುಂದುವರೆದ ಸಂಸ್ಕೃತಿಯ ಭಾಗವಾಗಿ ಅಥವಾ ನೂತನ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ತಮ್ಮ ಹೆಸರುಗಳನ್ನು ಬದಲಿಸಿಕೊಂಡಿದ್ದಾರೆ.

ಸಿಸ್ಟನ್ ಚಾಪೆಲ್'ನಲ್ಲಿ ಮತದಾನ ನಡೆದು ಅದರಲ್ಲಿ ಆಯ್ಕೆಯಾಗುವ ನೂತನ ಪೋಪ್ ಮೊಟ್ಟ ಮೊದಲಿಗೆ ಮಾಡಬೇಕಾಗಿರುವುದು ಹೊಸ ಹೆಸರನ್ನು ತೆಗೆದುಕೊಳ್ಳುವುದು. ತದನಂತರ ಮೊದಲ ಬಾರಿಗೆ ಜನರನ್ನು ಉದ್ದೇಶಿಸಿ ಮಾತನಾಡಲು ಬರುವಾಗ ಕಾರ್ಡಿನಲ್ ಪ್ರೋಟೋಡಿಕನ್ ಅವರು ಪ್ರಸಿದ್ಧ "ಹಬೆಮಸ್ ಪಾಪಮ್" (ನಮಗೆ ವಿಶ್ವಗುರು ಇದ್ದಾರೆ) ಎಂಬ ಸಾಲುಗಳನ್ನು ಹೇಳಿದ ನಂತರ, ನೂತನ ವಿಶ್ವಗುರುಗಳ ದೀಕ್ಷಾಸ್ನಾನದ ಹೆಸರನ್ನು ತದನಂತರ ಅವರು ಆರಿಸಿಕೊಂಡಿರುವ ಹೆಸರನ್ನು ಘೋಷಿಸುತ್ತಾರೆ.

ಸಂಪ್ರದಾಯಿಗಳ ಪ್ರಕಾರ ನೂತನ ವಿಶ್ವಗುರುಗಳು ಆರಿಸಿಕೊಳ್ಳುವ ಹೆಸರು ತಮ್ಮ ದೀಕ್ಷಾಸ್ನಾನದ ಹೆಸರಿಗಿಂತ ಭಿನ್ನವಾಗಿರುತ್ತದೆ. ಏಕೆಂದರೆ ಹುಟ್ಟಿನಿಂದ ಸೀಮೋನನಾಗಿದ್ದ ಸಂತ ಪೇತ್ರರು ತದನಂತರ ಪೇತ್ರರಾದ ಹಿನ್ನೆಲೆಯಲ್ಲಿ, ಇದೇ ಆಚರಣೆಯನ್ನು ಮುಂದುವರಿಸುತ್ತಾ ನೂತನ ವಿಶ್ವಗುರುಗಳು ಹೊಸ ಹೆಸರನ್ನು ಆರಿಸಿಕೊಳ್ಳುತ್ತಾರೆ. ಆರಂಭಿಕ ಶತಮಾನಗಳಲ್ಲಿ ವಿಶ್ವಗುರುಗಳು ತಮ್ಮ ಹೆಸರುಗಳನ್ನು ಬದಲಾಯಿಸಲು ಕಾರಣ ತಮ್ಮ ಹುಟ್ಟಿನ ಹೆಸರುಗಳು ಅನ್ಯ ಮತದ ಹೆಸರುಗಳಾಗಿದ್ದ ಕಾರಣ ಅವುಗಳನ್ನು ಬದಲಾಯಿಸಿಕೊಳ್ಳುತ್ತಿದ್ದರು.

ಅದಾಗಿಯೂ, ಎಲ್ಲಾ ವಿಶ್ವಗುರುಗಳು ನೂತನ ಹೆಸರುಗಳನ್ನು ಆರಿಸಿಕೊಳ್ಳಲಿಲ್ಲ. ಈವರೆಗೂ ಇದ್ದ 266 ವಿಶ್ವಗುರುಗಳಲ್ಲಿ ಕೇವಲ 129 ವಿಶ್ವಗುರುಗಳು ಮಾತ್ರ ಹೊಸ ಹೆಸರನ್ನು ಆರಿಸಿಕೊಂಡಿದ್ದಾರೆ. ವಿಶ್ವಗುರು ಆದ ನಂತರ ಹೊಸ ಹೆಸರನ್ನು ಆರಿಸಿಕೊಳ್ಳುವ ಸಂಪ್ರದಾಯ ಕ್ರಿಸ್ತಶಕ 955ರಲ್ಲಿ ವಿಶ್ವಗುರು 12ನೇ ಜಾನ್ ಅವರಿಂದ ಆರಂಭವಾಯಿತು. ಇದರ ಮಧ್ಯೆ 1552 ರಲ್ಲಿ ವಿಶ್ವಗುರುವಾಗಿದ್ದ ಆರನೇ ಏಡ್ರಿಯನ್ ಹಾಗೂ 1555ರಲ್ಲಿ ವಿಶ್ವಗುರು ಆಗಿದ್ದ ಎರಡನೇಮಾರ್ಸೆಲುಸ್ ಅವರು ನೂತನ ಹೆಸರನ್ನು ಆರಿಸಿಕೊಳ್ಳಲಿಲ್ಲ.

ಹಲವು ಶತಮಾನಗಳಿಂದ ವಿಶ್ವಗುರುಗಳು ತಮ್ಮ ಪೂರ್ವಧಿಕಾರಿಗಳಿಗೆ ಗೌರವ ನೀಡಲು, ಮುಂದುವರೆದ ಸಂಸ್ಕೃತಿಯ ಭಾಗವಾಗಿ ಅಥವಾ ನೂತನ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ತಮ್ಮ ಹೆಸರುಗಳನ್ನು ಬದಲಿಸಿಕೊಂಡಿದ್ದಾರೆ.

ಈವರೆಗೂ ವಿಶ್ವಗುರುಗಳಾಗಿದ್ದವರಲ್ಲಿ ಬಹಳ ಸಾಮಾನ್ಯ ಹೆಸರುಗಳೆಂದರೆ ಜಾನ್, ಗ್ರೇಗೋರಿ, ಬೆನೆಡಿಕ್ಟ್ ಮತ್ತು ಪಿಯೂಸ್.
ಇವುಗಳಲ್ಲಿ ಜಾನ್ ಎಂಬ ಹೆಸರನ್ನು 23 ವಿಶ್ವಗುರುಗಳು ಆರಿಸಿಕೊಂಡಿದ್ದಾರೆ. 16 ಬಾರಿ ಗ್ರೆಗರಿ ಎಂಬ ಹೆಸರನ್ನು ವಿಶ್ವಗುರುಗಳು ಆರಿಸಿಕೊಂಡಿದ್ದಾರೆ. 16 ಬಾರಿ ಬೆನೆಟಿಕ್ ಎಂಬ ಹೆಸರು ವಿಶ್ವಗುರುಗಳಿಂದ ಆರಿಸಲ್ಪಟ್ಟಿದೆ. 12 ಬಾರಿ ಪಿಯೂಸ್ ಎಂಬ ಹೆಸರನ್ನು ವಿವಿಧ ವಿಶ್ವಗುರುಗಳು ತೆಗೆದುಕೊಂಡಿದ್ದಾರೆ.

ಪ್ರೇಷಿತ ಪೌಲರ ಹೆಸರನ್ನು ಆರು ವಿಶ್ವಗುರುಗಳು ಆರಿಸಿಕೊಂಡಿದ್ದಾರೆ. ಇವರ ಪೈಕಿ ವಿಶ್ವಗುರು ಆರನೇ ಪೌಲರು ಭಾರತಕ್ಕೆ ಭೇಟಿ ನೀಡಿದ್ದರು.

ಇತಿಹಾಸವನ್ನು ನೋಡುವುದಾದರೆ ಎರಡು ಹೆಸರುಗಳನ್ನು ಹೊಂದಿದ್ದ ಇಬ್ಬರು ವಿಶ್ವ ಗುರುಗಳು ನಮಗೆ ಕಾಣಿಸಿಕೊಳ್ಳುತ್ತಾರೆ. 1978 ವಿಶ್ವಗುರುವಾಗಿ ಆಯ್ಕೆಯಾದ ಕಾರ್ಡಿನಲ್ ಅಲ್ಬಿನೋ ಲೂಸಿಯಾನಿ ಅವರು ಮೊಟ್ಟ ಮೊದಲ ಬಾರಿಗೆ ಜಾನ್ ಪೌಲ್ ಎಂಬ ಎರಡು ಸಂತರ ಹೆಸರುಗಳನ್ನು ಆರಿಸಿಕೊಂಡರು. ಅವರ ಉತ್ತರಾಧಿಕಾರಿಯಾದ ಕಾರ್ಡಿನಲ್ ಕರೋಲ್ ವೊಯ್ತೀವ ಅವರು ದ್ವಿತೀಯ ಜಾನ್ ಪೌಲ್ ಎಂಬ ಹೆಸರನ್ನು ಆರಿಸಿಕೊಂಡರು.

ಇದುವರೆಗೂ ಯಾವ ವಿಶ್ವಗುರುಗಳು ಸಹ ಜೋಸೆಫ್, ಲೂಕ, ಅಂದ್ರೇಯ, ಜೇಮ್ಸ್ ಎಂಬ ಹೆಸರುಗಳನ್ನು ಆರಿಸಿಕೊಂಡಿಲ್ಲ.

07 ಮೇ 2025, 14:11