ಪೋಪ್ ಲಿಯೋ XIV: ಯುದ್ಧದಿಂದ ಬಳಲುತ್ತಿರುವವರನ್ನು ನಮ್ಮ ಪ್ರಾರ್ಥನೆ ಅಪ್ಪಿಕೊಳ್ಳುತ್ತದೆ
ವರದಿ: ವ್ಯಾಟಿಕನ್ ನ್ಯೂಸ್
ರೆಜೀನಾ ಚೇಲಿ ಪ್ರಾರ್ಥನೆಯ ನಂತರ ಪೋಪ್ ಹದಿನಾಲ್ಕನೇ ಲಿಯೋ ಅವರು ಶನಿವಾರ ಪುನೀತ ಪದವಿಗೇರಿಸಲಾದ ಸ್ಟ್ಯಾನಿಸ್ಲಾಸ್ ಸ್ಟ್ರೈಕ್ ಅವರನ್ನು ಹಾಗೂ ಚೀನಾದಲ್ಲಿನ ಧರ್ಮಸಭೆಗಾಗಿ ಪ್ರಾರ್ಥನೆಯ ದಿನವನ್ನು ನೆನಪಿಸಿಕೊಂಡರು. 'ಲೌದಾತೋ ಸೀ' ಗೆ ಹತ್ತು ವರ್ಷಗಳ ಸಂಭ್ರಮದ ಕುರಿತೂ ಸಹ ಅವರು ಮಾತನಾಡಿದರು. ಇದೇ ವೇಳೆ ಪೋಪರು ಯುದ್ಧದಿಂದ ಬಳಲುತ್ತಿರುವ ಎಲ್ಲರಿಗಾಗಿ ಪ್ರಾರ್ಥಿಸುವಂತೆ ಭಕ್ತಾಧಿಗಳಿಕೆ ಕರೆ ನೀಡಿದರು.
"ನಮಗೆ ಹಾಗೂ ಚೀನಾದ ಕಥೋಲಿಕರಿಗೆ ಸಂತೋಷದಿಂದ ವಿಶ್ವಾಸವನ್ನು ಪ್ರಕಟಿಸಲು, ಮಾತೆ ಮರಿಯಮ್ಮನವರು ನಮಗೆ ಸದಾ ನೆರವಾಗಲಿ" ಎಂದು ಪೋಪ್ ಲಿಯೋ ಅವರು ಹೇಳಿದರು. "ಸಂಕಷ್ಟಗಳ ನಡುವೆಯೂ ಸಹ ನಾವು ಎದೆಗುಂದದೆ, ವಿಶ್ವಾಸವನ್ನು ಪ್ರಕಟಿಸುವಂತಾಗಲಿ" ಎಂದು ಅವರು ಹೇಳಿದರು.
ಪೋಪ್ ಹದಿನಾರನೇ ಬೆನೆಡಿಕ್ಟ್ ಅವರು ಚೀನಾ ದೇಶದಲ್ಲಿರುವ ಕಥೋಲಿಕ ಧರ್ಮಸಭೆಗಾಗಿ ಪ್ರಾರ್ಥಿಸುವ ದಿನವನ್ನು ಆರಂಭಿಸಿದ್ದರು. ಈ ದಿನವನ್ನು - ಅಂದರೆ ಶನಿವಾರವನ್ನು ನೆನಪಿಸಿಕೊಂಡು ಮಾತನಾಡಿದ ಪೊಫ್ ಲಿಯೋ ಅವರು ಚೀನಾದ ಕಥೋಲಿಕರಿಗಾಗಿ ವಿಶ್ವದಾದ್ಯಂತ ಧರ್ಮಸಭೆಯು ಪ್ರಾರ್ಥಿಸುತ್ತಿದೆ ಎಂಬುದನ್ನು ನೆನಪಿಸಿಕೊಂಡರು. ಚೀನಾ ಧರ್ಮಸಭೆಯು ಸಂಪೂರ್ಣವಾಗಿ ವಿಶ್ವ ಧರ್ಮಸಭೆಯೊಂದಿಗೆ ಐಕ್ಯವಾಗಲಿ ಎಂದೂ ಸಹ ಅವರು ಪ್ರಾರ್ಥಿಸಿದರು.
ಶನಿವಾರ ಪುನೀತ ಪದವಿಗೇರಿಸಲಾದ ಸ್ಟ್ಯಾನಿಸ್ಲಾಸ್ ಸ್ಟ್ರೈಕ್ ಅವರನ್ನು ಪೋಪ್ ಲಿಯೋ ಅವರು ನೆನಪಿಸಿಕೊಂಡರು. ಸ್ಟ್ಯಾನಿಸ್ಲಾಸ್ ಸ್ಟ್ರೈಕ್ ಅವರು ಪೊಲೆಂಡ್ ದೇಶದ ಪಾದ್ರಿಯಾಗಿದ್ದು, ಸುವಾರ್ತಾ ಪ್ರಸಾರ ಕಾರ್ಯದಲ್ಲಿ ತೊಡಗಿದ್ದಾಗ ಕಮ್ಯೂನಿಸ್ಟ್ ಆಡಳಿತದಿಂದ ಕೊಲೆಗೀಡಾದರು. ಈ ಕುರಿತು ಮಾತನಾಡಿದ ಅವರು ಹೆಚ್ಚು ಹೆಚ್ಚು ಗುರುಗಳು ಇವರಿಂದ ಪ್ರೇರಿತರಾಗಿ, ಇವರ ಉದಾಹರಣೆಯಿಂದ ಸ್ಪೂರ್ತಿಯನ್ನು ಪಡೆದು ಶುಭ ಸಂದೇಶಕ್ಕೆ ಧೈರ್ಯದ ಸಾಕ್ಷಿಗಳಾಗಲಿ" ಎಂದು ಹೇಳಿದರು.
ಇದೇ ವೇಳೆ 'ಲೌದಾತೋ ಸೀ' ಗೆ ಹತ್ತು ವರ್ಷಗಳ ಸಂಭ್ರಮದ ಕುರಿತೂ ಸಹ ಅವರು ಮಾತನಾಡಿದರು. ಇದರಿಂದ ನೂರಾರು ಉಪಕ್ರಮಗಳು ಜಾರಿಗೆ ಬಂದಿದ್ದು, ಇದು ಮತ್ತಷ್ಟು ಸೇವಾಕಾರ್ಯಗಳನ್ನು ಉತ್ತೇಜಿಸಲಿ ಎಂದು ಹೇಳಿದರು. ಪೋಪ್ ಫ್ರಾನ್ಸಿಸ್ ಅವರು ಈ ವೇಳೆ ರೋಮ್ ನಗರಕ್ಕೆ ಆಗಮಿಸಿರುವ ಯಾತ್ರಿಕರು ಹಾಗೂ ಭಕ್ತಾಧಿಗಳಿಗೆ ಶುಭಾಶಯಗಳನ್ನು ತಿಳಿಸಿದರು. ವಿಶೇಷವಾಗಿ ಪೊಲೆಂಡ್ ದೇಶದಲ್ಲಿ ಮಾತೆ ಮರಿಯಮ್ಮನವರ ಪುಣ್ಯಕ್ಷೇತ್ರಕ್ಕೆ ಯಾತ್ರೆಯನ್ನು ಕೈಗೊಳ್ಳುತ್ತಿರುವ ಎಲ್ಲರಿಗೂ ಶುಭಾಶಯ ಹಾಗೂ ಆಶೀರ್ವಾದವನ್ನು ಕೋರಿದರು.