MAP

ಪೋಪ್: ವಿಶ್ವಾಸ ಮತ್ತು ಪ್ರಾರ್ಥನೆ ರುಚಿ ನೀಡುವ ಉಪ್ಪಿನಂತೆ

ಪೋಪ್ ಹದಿನಾಲ್ಕನೇ ಲಿಯೋ ಅವರು ವ್ಯಾಟಿಕನ್ ಸಿಬ್ಬಂಧಿಗಳು ಹಾಗೂ ಅವರ ಕುಟುಂಬಸ್ಥರನ್ನು ವ್ಯಾಟಿಕನ್ನಿಗೆ ಬರಮಾಡಿಕೊಂಡು, ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ವಿಶ್ವಾಸ ಮತ್ತು ಪ್ರಾರ್ಥನೆ ರುಚಿ ನೀಡುವ ಉಪ್ಪಿನಂತೆ ಎಂದು ಹೇಳಿರುವ ಅವರು ಇವುಗಳು ಉತ್ತಮವಾದ ಜೀವನವನ್ನು ನಡೆಸಲು ನಮಗೆ ಸಹಾಯಕವಾಗುತ್ತವೆ ಎಂದು ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಆಗಿ ಆಯ್ಕೆಯಾದ ನಂತರ ಇದೇ ಮೊದ; ಬಾರಿಗೆ ಪೋಪ್ ಹದಿನಾಲ್ಕನೇ ಸಿಂಹನಾಥರು ವ್ಯಾಟಿಕನ್ನಿನ ಕೂರಿಯಾ ಅಧಿಕಾರಿಗಳು ಹಾಗೂ ವ್ಯಾಟಿಕನ್ ಸಿಟಿ ಸ್ಟೇಟ್, ಪವಿತ್ರ ಪೀಠ, ಮತ್ತು ಇನ್ನಿತರ ಸಿಬ್ಬಂಧಿ ವರ್ಗದವರು ಹಾಗೂ ಅವರ ಕುಟುಂಬಗಳ ಸದಸ್ಯರನ್ನು ಇಂದು ಭೇಟಿ ಮಾಡಿ, ಅವರೊಂದಿಗೆ ಮಾತನಾಡಿದರು.

ಇಲ್ಲಿ ನೆರೆದಿರುವ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸಂತ ಪೇತ್ರರ ಉತ್ತರಾಧಿಕಾರಿಗೆ ನೆರವಾಗುವ ಮೂಲಕ ತಮ್ಮ ಕಾರ್ಯವನ್ನು ಮಾಡುತ್ತಾರೆ ಎಂದು ಹೇಳಿದ ಪೋಪ್ ಲಿಯೋ ಅವರು ಎಲ್ಲರನ್ನು ಪ್ರೀತಿ ಹಾಗೂ ಆತ್ಮೀಯತೆಯಿಂದ ಮಾತನಾಡಿದರು.

ನಮ್ಮ ಈ ಮೊದಲ ಸಭೆಯು "ಖಂಡಿತವಾಗಿಯೂ ಕಾರ್ಯಕ್ರಮಬದ್ಧ ಭಾಷಣಗಳಿಗೆ ಸಂದರ್ಭವಲ್ಲ", ಬದಲಾಗಿ "ನೀವು ಮಾಡುತ್ತಿರುವ ಸೇವೆಗೆ ಮತ್ತು ನನ್ನ ಪೂರ್ವವರ್ತಿಗಳಿಂದ ನಾನು 'ಆನುವಂಶಿಕವಾಗಿ ಪಡೆದ' ಈ ಸೇವೆಗೆ ಧನ್ಯವಾದ ಹೇಳಲು ನನಗೆ ಒಂದು ಅವಕಾಶ" ಎಂದು ಪೋಪ್ ಲಿಯೋ XIV ಗಮನಿಸಿದರು.

"ಹಲವಾರು ಪೋಪ್'ಗಳು ಬರುತ್ತಾರೆ - ಹೋಗುತ್ತಾರೆ ಆದರೆ ಇಲ್ಲಿ ಬದ್ಧತೆಯಿಂದ ಕೆಲಸ ಮಾಡುವವರು ಮಾತ್ರ ಉಳಿಯುತ್ತಾರೆ ಎಂದು ಹೇಳಿದ ಪೋಪ್ ಲಿಯೋ ಅವರು ಪವಿತ್ರ ಪೀಠಕ್ಕೆ ಸೇವೆಯನ್ನು ಮಾಡುವುದೆಂದರೆ, ಧರ್ಮಸಭೆಯ ಪಾಲನಾ ಕಾರ್ಯದಲ್ಲಿ ಭಾಗಿಯಾಗುವುದು ಎಂದರ್ಥ" ಎಂದು ಹೇಳಿದ್ದಾರೆ.

ನಾವು ನಮ್ಮ ಕಾರ್ಯಗಳನ್ನು ಸೇವಾ ಮನೋಭಾವದಿಂದ ಹಾಗೂ ಹೆಚ್ಚಿನ ಸಾಮರ್ಥ್ಯ ಹಾಗೂ ಬದ್ಧತೆಯಿಂದ ಮುಂದುವರೆಸಲು ನಾವೆಲ್ಲರೂ ದೇವರ ಅನುಗ್ರಹದಲ್ಲಿ ಜೀವಿಸಬೇಕು ಎಂದು ಪೋಪ್ ಲಿಯೋ ಅವರು ಹೇಳಿದರು. ಅಂತಿಮವಾಗಿ ಅವರು ಎಲ್ಲರ ಮೇಲೆ ಮಾತೆ ಮರಿಯಮ್ಮನವರ ಮಧ್ಯಸ್ಥಿಕೆಯನ್ನು ಕೋರಿದರು.

24 ಮೇ 2025, 17:31