ಪೋಪ್ ಲಿಯೋ XIV: ಕ್ರಿಸ್ತರೇ ನಮ್ಮ ರಕ್ಷಕರು; ನಾವೆಲ್ಲರೂ ಅವರಲ್ಲಿ ಒಂದೇ ಕುಟುಂಬವಾಗಿದ್ದೇವೆ
ವರದಿ: ವ್ಯಾಟಿಕನ್ ನ್ಯೂಸ್
ಪೊಂಟಿಫಿಕಲ್ ಮಿಷನ್ ಸೊಸೈಟಿ ಮಾಡುತ್ತಿರುವ ಮುಖ್ಯವಾದ ಜಾಗತಿಕ ಕಾರ್ಯಗಳನ್ನು ಪೋಪ್ ಲಿಯೋ ಅವರು ಪ್ರಶಂಸಿಸಿದ್ದಾರೆ. ಈ ಕಾರ್ಯಗಳು ದೀಕ್ಷಾಸ್ನಾನವನ್ನು ಪಡೆದ ಎಲ್ಲರ ಸೇವಾಕಾರ್ಯದ ಜವಾಬ್ದಾರಿಯನ್ನು ಬಡಿದೆಚ್ಚರಿಸುವುದನ್ನು ಇವುಗಳು ಮಾಡುತ್ತಿವೆ ಎಂದು ಹೇಳಿದ್ದಾರೆ. ಇದೇ ವೇಳೆ ಧರ್ಮಸಭೆಯು ಇನ್ನೂ ಶೇಷಾವಸ್ಥೆಯಲ್ಲಿರುವ ಪ್ರದೇಶಗಳಲ್ಲಿ ಇವುಗಳ ನೆರವು ಅಗತ್ಯ ಎಂದು ಹೇಳಿದ್ದಾರೆ.
"ಪವಿತ್ರಾತ್ಮರ ಆಗಮನದ ಕಾಲದಿಂದ ಈವರೆಗೂ ಧರ್ಮಸಭೆಯು ಅವರ ಮಾರ್ಗದರ್ಶನದ ಮೂಲಕ, ಐತಿಹಾಸಿಕವಾಗಿ ಧರ್ಮಸಭೆಯು ಪಯಣಿಸುತ್ತಾ ಬಂದಿದೆ. ಧೈರ್ಯ ಹಾಗೂ ವಿಶ್ವಾಸದಿಂದ ಮುನ್ನುಗ್ಗುತ್ತಾ, ಯೇಸುಕ್ರಿಸ್ತರ ಶುಭಸಂದೇಶವನ್ನು ಸಾರುತ್ತಾ ಬಂದಿದೆ. ಈ ಪ್ರಯತ್ನದಲ್ಲಿ ಪೊಂಟಿಫಿಕಲ್ ಮಿಷನ್ ಸೊಸೈಟಿ ಸಂಸ್ಥೆಯು ಅಮೂಲಾಗ್ರ ಭಾಗವಾಗಿದೆ" ಎಂದು ವಿಶ್ವಗುರು ಫ್ರಾನ್ಸಿಸ್ ಅವರು ಹೇಳಿದ್ದಾರೆ.
"ಸೇವಾಕಾರ್ಯಗಳನ್ನು ಮಾಡುವಾಗ ಹಾಗೂ ಅದರ ಚಟುವಟಿಕೆಗಳನ್ನು ಮುನ್ನಡೆಸುವಾಗ, ರಾಷ್ಟ್ರೀಯ ನಿರ್ದೇಶಕರುಗಳು ಧರ್ಮಕ್ಷೇತ್ರಗಳಿಗೆ ಭೇಟಿ ನೀಡುವುದನ್ನು ನಾನು ಬಯಸುತ್ತೇನೆ ಹಾಗೂ ಪ್ರೋತ್ಸಾಹಿಸುತ್ತೇನೆ. ಇದು ನಮ್ಮ ಸಹೋದರ ಸಹೋದರಿಯರು ವಿಶ್ವಾಸದಲ್ಲಿ ಪರಿಣಾಮಕಾರಿಯಾಗಿ ಬೆಳೆಯಲು ಸಾಧ್ಯವಾಗುತ್ತದೆ" ಎಂದು ವಿಶ್ವಗುರು ಲಿಯೋ ಅವರು ಹೇಳಿದರು.
ಪೋಪ್ ಲಿಯೋ ಅವರು ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುತ್ತಾ, ಮಿಷನರಿಯಾಗಿ ಸೇವೆ ಸಲ್ಲಿಸಿದ ತಮ್ಮದೇ ಉದಾಹರಣೆಯನ್ನು ನೆನಪಿಸಿಕೊಂಡರು ಹಾಗೂ ಆ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು. ಪೊಂಟಿಫಿಕಲ್ ಮಿಷನ್ ಸೊಸೈಟಿ ಮಾಡುತ್ತಿರುವ ಮುಖ್ಯವಾದ ಜಾಗತಿಕ ಕಾರ್ಯಗಳನ್ನು ಪೋಪ್ ಲಿಯೋ ಅವರು ಪ್ರಶಂಸಿಸಿದ್ದಾರೆ. ಈ ಕಾರ್ಯಗಳು ದೀಕ್ಷಾಸ್ನಾನವನ್ನು ಪಡೆದ ಎಲ್ಲರ ಸೇವಾಕಾರ್ಯದ ಜವಾಬ್ದಾರಿಯನ್ನು ಬಡಿದೆಚ್ಚರಿಸುವುದನ್ನು ಇವುಗಳು ಮಾಡುತ್ತಿವೆ" ಎಂದು ಪೋಪ್ ಹದಿನಾಲ್ಕನೇ ಲಿಯೋ ನುಡಿದರು.
ಮುಂದುವರೆದು ಮಾತನಾಡಿದ ಅವರು ಯೇಸುಕ್ರಿಸ್ತರಲ್ಲಿ ನಾವೆಲ್ಲರೂ ಒಂದೇ ಕುಟುಂಬವಾಗಿದ್ದೇವೆ. ಏಕೆಂದರೆ ಅವರೇ ನಮ್ಮ ರಕ್ಷಕರು ಹಾಗೂ ಪ್ರಭುವಾಗಿದ್ದಾರೆ ಎಂದು ಪೋಪ್ ಹದಿನಾಲ್ಕನೇ ಲಿಯೋ ಅವರು ಪೊಂಟಿಫಿಕಲ್ ಮಿಷನ್ ಸೊಸೈಟೀಸ್ ಸಂಸ್ಥೆಯ ಸದಸ್ಯರಿಗೆ ಕರೆ ನೀಡಿದರು.