MAP

ಪೋಪ್ ಲಿಯೋ XIV: ಧರ್ಮಸಭೆ ಡಿಜಿಟಲ್ ಕ್ರಾಂತಿಗೆ ಪ್ರತಿಕ್ರಿಯಿಸಬೇಕು

ಪೋಪ್ ಹದಿನಾಲ್ಕನೇ ಲಿಯೋ ಅವರು ಇಂದು ವ್ಯಾಟಿಕನ್ನಿನಲ್ಲಿ ಕಾರ್ಡಿನಲರುಗಳೊಂದಿಗೆ ಸಭೆಯನ್ನು ನಡೆಸಿದರು. ಈ ವೇಳೆ ಪೋಪ್ ಫ್ರಾನ್ಸಿಸ್ ಹಾಗೂ ಪೋಪ್ ಹದಿಮೂರನೇ ಲಿಯೋ ಅವರ ಪರಂಪರೆಯನ್ನು ನೆನಪಿಸಿಕೊಂಡ ಅವರು ಧರ್ಮಸಭೆ ನವ ಕೈಗಾರಿಕಾ ಕ್ರಾಂತಿ ಹಾಗೂ ಕೃತಕ ಬುದ್ಧಿಮತ್ತೆ ಪ್ರತಿಕ್ರಿಯಿಸಬೇಕಿದೆ ಎಂದು ಹೇಳಿದರು.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಹದಿನಾಲ್ಕನೇ ಲಿಯೋ ಅವರು ಇಂದು ವ್ಯಾಟಿಕನ್ನಿನಲ್ಲಿ ಕಾರ್ಡಿನಲರುಗಳೊಂದಿಗೆ ಸಭೆಯನ್ನು ನಡೆಸಿದರು. ಈ ವೇಳೆ ಪೋಪ್ ಫ್ರಾನ್ಸಿಸ್ ಹಾಗೂ ಪೋಪ್ ಹದಿಮೂರನೇ ಲಿಯೋ ಅವರ ಪರಂಪರೆಯನ್ನು ನೆನಪಿಸಿಕೊಂಡ ಅವರು ಧರ್ಮಸಭೆ ನವ ಕೈಗಾರಿಕಾ ಕ್ರಾಂತಿ ಹಾಗೂ ಕೃತಕ ಬುದ್ಧಿಮತ್ತೆ ಪ್ರತಿಕ್ರಿಯಿಸಬೇಕಿದೆ ಎಂದು ಹೇಳಿದರು.

ಈ ಸಭೆಯಲ್ಲಿ ಪೋಪ್ ತಾವು ಯಾವ ಕಾರಣಕ್ಕಾಗಿ ಲಿಯೋ ಎಂಬ ಹೆಸರನ್ನು ಆರಿಸಿಕೊಂಡರು ಎಂಬುದನ್ನು ತಿಳಿಸಿದರು. "ಪೋಪ್ ಹದಿಮೂರನೇ ಲಿಯೋ ಅವರು ಅಂದಿನ ಕಾಲಘಟ್ಟದಲ್ಲಿ ತಮ್ಮ ಪ್ರೇಷಿತ ದಸ್ತಾವೇಜು "ರೇರುಮ್ ನೊವಾರುಂ" ನಲ್ಲಿ ಹೇಗೆ ಧರ್ಮಸಭೆಯು ಸಾಮಾಜಿಕ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂಬ ಕುರಿತು ಬೆಳಕು ಚೆಲ್ಲಿದರು. ಅಂದಿನ ಕಾಲಘಟ್ಟದಲ್ಲಿ ಆಗುತ್ತಿದ್ದ ಮೊದಲ ಮಹಾ ಕೈಗಾರಿಕ ಕ್ರಾಂತಿಯ ಹಿನ್ನೆಲೆಯಲ್ಲಿ ಧರ್ಮಸಭೆಯ ಬೋಧನೆಗಳು ಹೇಗಿರಬೇಕು ಎಂಬುದಕ್ಕೆ ಅಡಿಪಾಯವನ್ನು ಹಾಕಿದ್ದರು. ಈ ಹೆಸರು ಕೇವಲ ಸಂಪ್ರದಾಯದಲ್ಲಿ ಬೇರೂರಿರುವುದು ಮಾತ್ರವಲ್ಲದೆ, ನಮ್ಮ ಕಾಲದ ಸವಾಲುಗಳನ್ನು ಹಾಗೂ ಪ್ರಶ್ನೆಗಳನ್ನು ಉತ್ತರಿಸಲು ಸ್ಪೂರ್ತಿ ನೀಡುತ್ತದೆ" ಎಂದು ಹೇಳುವ ಮೂಲಕ ತಮ್ಮ ಹೆಸರಿನ ಹಿನ್ನೆಲೆಯ ಕಾರಣವನ್ನು ಕಾರ್ಡಿನಲರುಗಳೊಂದಿಗೆ ಪೋಪ್ ಹದಿನಾಲ್ಕನೇ ಲಿಯೋ ಅವರು ಹಂಚಿಕೊಂಡರು.

ಇದೇ ವೇಳೆ ಎಲ್ಲಾ ಕಾರ್ಡಿನಲ್ಲುಗಳಿಗೆ ಧನ್ಯವಾದಗಳನ್ನು ತಿಳಿಸಿದ ಪೋಪ್, ನೀವೆಲ್ಲರೂ ಪೋಪರ ಸಹಯೋಗಿಗಳು ಎಂದು ಹೇಳಿದರು. ಇದೇ ವೇಳೆ ಅವರು ನನಗೆ ಹೊರಿಸಲಾಗಿರುವ ಭಾರ ನನ್ನ ಕ್ಷಮತೆ, ಸಾಮರ್ಥಕ್ಕಿಂತ ಮಿಗಿಲಾದದ್ದು" ಎಂದು ಹೇಳಿದ್ದಾರೆ.

ಮುಂದುವರೆದು ಅವರು ಪೋಪ್ ಫ್ರಾನ್ಸಿಸ್ ಅವರನ್ನು ನೆನಪಿಸಿಕೊಂಡು ಮಾತನಾಡಿದರು. ಪೋಪ್ ಫ್ರಾನ್ಸಿಸ್ ಅವರು ಸರಳ ಹಾಗೂ ಪವಿತ್ರ ಬದುಕಿನ ಆದರ್ಶಗಳನ್ನು ಹಾಗೂ ಅವರ ಪರಂಪರೆಯನ್ನು ನಾವು ಆಳವಡಿಸಿಕೊಂಡು ಮುನ್ನಡೆಯಬೇಕು ಎಂದು ಅವರು ಹೇಳಿದರು.

ಪೋಪ್ ಹದಿನಾಲ್ಕನೇ ಲಿಯೋ ಅವರು ಸಿನೋಡ್ ಸೇರಿದಂತೆ ಪೋಪ್ ಫ್ರಾನ್ಸಿಸರ ಪ್ರೇಷಿತ ದಸ್ತಾವೇಜು "ಇವ್ಯಾಂಜೆಲಿ ಗೌದಿಯುಂ" ಕುರಿತು ಮಾತನಾಡಿದರು. ಅಂತಿಮವಾಗಿ ಪೋಪ್ ಆರನೇ ಪೌಲರ "ಪ್ರೀತಿ ಹಾಗೂ ವಿಶ್ವಾಸದ ಜ್ವಾಲೆಗಳು" ನಮ್ಮನ್ನು ಆವರಿಸಿಕೊಳ್ಳಲಿ ಎಂದು ಹೇಳುತ್ತಾ ತಮ್ಮ ಮಾತನ್ನು ಮುಕ್ತಾಯಗೊಳಿಸಿದರು.

10 ಮೇ 2025, 19:43