MAP

ಕಾಸ್ಟೆಲ್ ಗಂಡೋಲ್ಫೋದಲ್ಲಿ ಬೊರ್ಜೋ ಲೌದಾತೋ ಸೀಗೆ ಭೇಟಿ ನೀಡಿದ ಪೋಪ್ ಲಿಯೋ

ಪೋಪ್ ಹದಿನಾಲ್ಕನೇ ಲಿಯೋ ಅವರು ರೋಮ್ ನಗರದಲ್ಲಿನ ಕಾಸ್ಟೆಲ್ ಗಂಡೋಲ್ಫೋದಲ್ಲಿನ ಬೋರ್ಜೊ ಲೌದಾತೋ ಸೀ ಪ್ರದೇಶಕ್ಕೆ ಭೇಟಿಯನ್ನು ನೀಡಿದ್ದಾರೆ. ಈ ಪ್ರದೇಶವು ಮೊದಲು ಪೋಪರ ವಾಸಸ್ಥಳದ ಭಾಗವಾಗಿತ್ತು. ಆದರೆ, ಅದನ್ನು ಪೋಪ್ ಫ್ರಾನ್ಸಿಸ್ ಅವರು ಸೆಮಿನರಿಯನ್ನಾಗಿ ಪರಿವರ್ತಿಸಿ, ಅಲ್ಲಿ ನಮ್ಮ ಸಾಮಾನ್ಯ ಮನೆ ಪರಿಸರದ ಕುರಿತು ಕಾಳಜಿಯನ್ನು ಉತ್ತೇಜಿಸುವ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸುವ ಕೇಂದ್ರವನ್ನಾಗಿಸಿದ್ದರು.

ವರದಿ: ವ್ಯಾಟಿಕನ್ ನ್ಯೂಸ್

ಬೋರ್ಜೊ ಲೌದಾತೋ ಸೀ (ಲೌದಾತೋ ಸೀ ಹಳ್ಳಿ)ಯು ಪೋಪರ ನಿವಾಸದ ಭಾಗವಾಗಿದ್ದು, ಇದನ್ನು ಪರಿಸರದ ಕುರಿತು ಕಾಳಜಿ ಮೂಡಿಸಲು ಪೋಪ್ ಫ್ರಾನ್ಸಿಸ್ ಅವರು ತರಭೇತಿ ಕೇಂದ್ರವನ್ನಾಗಿ ರೂಪಿಸಿದ್ದರು. ಇಲ್ಲಿಗೇ ಭೇಟಿ ನೀಡುವುದರ ಜೊತೆಗೆ ಪೋಪ್ ಹದಿನಾಲ್ಕನೇ ಲಿಯೋ ಅವರು ಪ್ರೇಷಿತ ಅರಮನೆಗೂ ಸಹ ಭೇಟಿ ನೀಡಿದ್ದರು. ಪೋಪ್ ಫ್ರಾನ್ಸಿಸ್ ಅವರು ಈ ಪ್ರೇಷಿತ ಅರಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಿದ್ದರು.

ಹತ್ತು ವರ್ಷಗಳ ಹಿಂದೆ ಪೋಪ್ ಫ್ರಾನ್ಸಿಸ್ ಅವರು ಪರಿಸರದ ಕುರಿತು ತಮ್ಮ ಪ್ರೇಷಿತ ದಾಖಲೆ "ಲೌದಾತೋ ಸೀ" (ಸ್ತುತಿ ಸ್ತೋತ್ರ ನಿಮಗೆ ಪ್ರಭೂ) ಅನ್ನು ಪ್ರಕಟಿಸುವ ಮೂಲಕ ನಮ್ಮ ಸಾಮಾನ್ಯ ಮನೆಯಾದ ಈ ಭೂಮಿಯ ಕುರಿತು ಅಂದರೆ ದೇವರ ಸೃಷ್ಟಿಯ ಕುರಿತು ಕಾಳಜಿಯನ್ನು ವಹಿಸಬೇಕು. ಬದಲಾಗುತ್ತಿರುವ ಕಾಲಘಟ್ಟದಲ್ಲಿ ನಮ್ಮ ಸಾಮಾನ್ಯ ಭೂಮಿಯು ಹವಾಮಾನ ವೈಪರಿತ್ಯಕ್ಕೆ ಒಳಪಡುತ್ತಿದೆ. ಗಣಿಗಾರಿಕೆ, ಕಾಡು ನಾಶ, ನೀರಿನ ಮೂಲಗಳ ನಾಶ ಸೇರಿದಂತೆ ಮನುಷ್ಯರು ಮಾಡುತ್ತಿರುವ ವಿನಾಶದಿಂದ ದೇವರ ಸೃಷ್ಟಿ ಬರಿದಾಗುತ್ತಿದೆ. ಆದುದರಿಂದ ದೇವರ ಸೃಷ್ಟಿ ನಮ್ಮೆಲ್ಲರ ಸ್ವತ್ತಾಗಿದ್ದು, ಅದನ್ನು ನಾವೆಲ್ಲರೂ ಕಾಪಾಡಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಅರಿವನ್ನು ಮೂಡಿಸಲು ಪೋಪ್ ಫ್ರಾನ್ಸಿಸ್ ಅವರು ಲೌದಾತೋ ಸೀ ಅನ್ನು ಪ್ರಕಟಿಸಿದ್ದರು.

ಲೌದಾತೋ ಸೀ ಪ್ರದೇಶವು ಉದ್ಯಮಿಗಳು ಮತ್ತು ತಜ್ಞರು, ಶಾಲಾ ಮಕ್ಕಳು ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಮಾತ್ರವಲ್ಲದೆ, ವಲಸಿಗರು, ಹಿಂಸಾಚಾರಕ್ಕೆ ಬಲಿಯಾದ ಮಹಿಳೆಯರು, ಅಂಗವಿಕಲರು, ಮಾಜಿ ಕೈದಿಗಳು, ಮಾಜಿ ಮಾದಕ ವ್ಯಸನಿಗಳು ಮತ್ತು ಶೈಕ್ಷಣಿಕ ಅವಕಾಶಗಳಿಂದ ವಂಚಿತರಾದ ಅನೇಕರು ಸೇರಿದಂತೆ ಪೋಪ್ ಫ್ರಾನ್ಸಿಸ್ ವಿಶೇಷ ಪ್ರೀತಿಯನ್ನು ಹೊಂದಿದ್ದ ಅಂಚಿನಲ್ಲಿರುವವರನ್ನು ಸಹ ಸ್ವಾಗತಿಸುತ್ತದೆ.

29 ಮೇ 2025, 15:51