ಮೇ 18 ಕ್ಕೆ ಪೋಪ್ ಹದಿನಾಲ್ಕನೇ ಲಿಯೋ ಅವರ ಪ್ರೇಷಿತಾಧಿಕಾರದ ಉದ್ಘಾಟನಾ ಬಲಿಪೂಜೆ
ವರದಿ: ವ್ಯಾಟಿಕನ್ ನ್ಯೂಸ್
ಪವಿತ್ರ ಪೀಠವು ನೂತನ ಪೋಪ್ ಹದಿನಾಲ್ಕನೇ ಲಿಯೋ ಅವರ ಪ್ರೇಷಿತಾಧಿಕಾರದ ಉದ್ಘಾಟನಾ ಬಲಿಪೂಜೆ ಸೇರಿದಂತೆ, ವಿವಿಧ ಕಾರ್ಯಕ್ರಮಗಳ ಕುರಿತು ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಮೇ 10 ರಂದು ಶನಿವಾರ ಪೋಪ್ ಹದಿನಾಲ್ಕನೇ ಲಿಯೋ ಅವರು ಕಾರ್ಡಿನಾಲರೊಂದಿಗೆ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮೇ 11 ರಂದು ಸಂತ ಪೇತ್ರರ ಮಹಾದೇವಾಲಯದ ಉಪ್ಪರಿಗೆಯಿಂದ ಪ್ರಪ್ರಥಮ ಬಾರಿಗೆ ರೆಜೀನಾ ಶೇಲಿ ಪ್ರಾರ್ಥನೆಯನ್ನು ಮುನ್ನಡೆಸಲಿದ್ದಾರೆ.
ಪೋಪ್ ಹದಿನಾಲ್ಕನೇ ಲಿಯೋ ಅವರ ವೇಳಾಪಟ್ಟಿ ಹೀಗಿದೆ:
- ಮೇ 12, ಸೋಮವಾರ - ಅಂತರಾಷ್ಟ್ರೀಯ ಪತ್ರಕರ್ತರೊಂದಿಗೆ ಸುದ್ದಿಗೋಷ್ಠಿ
- ಮೇ 16, ಶುಕ್ರವಾರ - ರಾಜತಾಂತ್ರಿಕ ಅಧಿಕಾರಿಗಳೊಂದಿಗೆ (ಮಿಷನ್ ಮುಖ್ಯಸ್ಥರುಗಳು) ಭೇಟಿ
- ಮೇ 18, ಭಾನುವಾರ - ಬೆಳಿಗ್ಗೆ 10:00 ಗಂಟೆಗೆ ಪ್ರೇಷಿತಾಧಿಕಾರದ ಆರಂಭವನ್ನು ಸೂಚಿಸುವ ಬಲಿಪೂಜೆ - ಸಂತ ಪೇತ್ರರ ಮಹಾದೇವಾಲಯ.
- ಮೇ 20 - ಮಂಗಳವಾರ - ಸೇಂಟ್ ಪೌಲ್ ಔಟ್'ಸೈಡ್ ದ ವಾಲ್ಸ್ ಮಹಾದೇವಾಲಯದ ಅಧಿಕಾರವನ್ನು ವಹಿಸಿಕೊಳ್ಳುವುದು
- ಮೇ 21 - ಪ್ರಥಮ ಸಾರ್ವಜನಿಕ ಭೇಟಿ
- ಮೇ 24 - ಶನಿವಾರ - ರೋಮನ್ ಕೂರಿಯಾ ಮತ್ತು ವ್ಯಾಟಿಕನ್ ಸಿಟಿ ಸ್ಟೇಟ್ ಉದ್ಯೋಗಿಗಳೊಂದಿಗೆ ಸಭೆ
- ಮೇ 25 - ರೆಜೀನಾ ಶೇಲಿ, ಸಂತ ಜಾನ್ ಲ್ಯಾಟರನ್ ಮತ್ತು ಸಂತ ಮೇರಿ ಮೇಜರ್ ಮಹಾದೇವಾಲಯಗಳ ಅಧಿಕಾರವನ್ನು ವಹಿಸಿಕೊಳ್ಳುವುದು.
ಮಾಧ್ಯಮ ಕಚೇರಿಯ ಮತ್ತೊಂದು ಹೇಳಿಕೆಯ ಪ್ರಕಾರ ರೋಮನ್ ಕೂರಿಯಾದ ವಿವಿಧ ಸಂಸ್ಥೆಗಳ ಮುಖ್ಯಸ್ಥರು, ವ್ಯಾಟಿಕನ್ ಸಿಟಿ ಸ್ಟೇಟ್'ನ ವಿವಿಧ ಪೊಂಟಿಫಿಕಲ್ ಆಯೋಗಗಳ ಮುಖ್ಯಸ್ಥರು ಮುಂದಿನ ಆದೇಶದವರೆಗೂ ತಮ್ಮ ಹುದ್ದೆಗಳಲ್ಲಿ ತಾತ್ಕಾಲಿಕವಾಗಿ ಮುಂದುವರೆಯಬಹುದು ಎಂದು ಪೋಪ್ ಹದಿನಾಲ್ಕನೇ ಲಿಯೋ ಅವರು ಅಪೇಕ್ಷಿಸಿದ್ದಾರೆ.
ಯಾವುದೇ ಹೊಸ ನೇಮಕಾತಿ ಅಥವಾ ನೇಮಕಾತಿಯ ದೃಢೀಕರಣವನ್ನು ಮಾಡುವುದಕ್ಕೂ ಮುಂಚಿತವಾಗಿ ಪ್ರಾರ್ಥನೆ, ಚಿಂತನೆ ಹಾಗೂ ಸಂವಾದಕ್ಕಾಗಿ ಸಮಯವನ್ನು ತೆಗೆದುಕೊಳ್ಳುವ ಹಕ್ಕು ವಿಶ್ವಗುರು ಹದಿನಾಲ್ಕನೇ ಲೊಯೋ ಅವರಿಗೆ ಇದೆ ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ಹೇಳಿದೆ.