MAP

ಉಕ್ರೇನ್ ಅಧ್ಯಕ್ಷರಿಗೆ ಕರೆ ಮಾಡಿ ಮಾತನಾಡಿದ ಪೋಪ್ ಲಿಯೋ XIV

ಉಕ್ರೇನ್ ದೇಶದಲ್ಲಿ ಶಾಂತಿಯನ್ನು ಸ್ಥಾಪಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು ಹಾಗೂ ಮಕ್ಕಳನ್ನು ತಮ್ಮ ಕುಟುಂಬಗಳಿಗೆ ಹಿಂತಿರುಗಿಸಬೇಕು ಎಂಬ ಪೋಪ್ ಹದಿನಾಲ್ಕನೇ ಲಿಯೋ ಅವರ ಮಾತುಗಳ ಹಿನ್ನೆಲೆ, ಇಂದು ಪೋಪ್ ಲಿಯೋ ಮತ್ತು ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿ ಅವರು ಫೋನ್ ಮೂಲಕ ಮಾತನಾಡಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಉಕ್ರೇನ್ ದೇಶದಲ್ಲಿ ಶಾಂತಿಯನ್ನು ಸ್ಥಾಪಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು ಹಾಗೂ ಮಕ್ಕಳನ್ನು ತಮ್ಮ ಕುಟುಂಬಗಳಿಗೆ ಹಿಂತಿರುಗಿಸಬೇಕು ಎಂಬ ಪೋಪ್ ಹದಿನಾಲ್ಕನೇ ಲಿಯೋ ಅವರ ಮಾತುಗಳ ಹಿನ್ನೆಲೆ, ಇಂದು ಪೋಪ್ ಲಿಯೋ ಮತ್ತು ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿ ಅವರು ಫೋನ್ ಮೂಲಕ ಮಾತನಾಡಿದ್ದಾರೆ.

ವ್ಯಾಟಿಕನ್ನಿನ ಮಾಧ್ಯಮ ಕಚೇರಿಯ ನಿರ್ದೇಶಕರಾ ಮತ್ತಿಯೋ ಬ್ರೂನಿ ಅವರು ಮಾಧ್ಯಮ ಹೇಳಿಕೆಯನ್ನು ಈ ವಿದ್ಯಮಾನವನ್ನು ದೃಢಪಡಿಸಿದ್ದಾರೆ. 

ಯುದ್ಧ ಬೇಡ ಎಂಬ ಮನವಿ

"ಮೂರನೇ ವಿಶ್ವಯುದ್ಧವು ಕೊಂಚ ಕೊಂಚವೇ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಜಗತ್ತಿನಲ್ಲಿ ಶಕ್ತಿಶಾಲಿ ಎನಿಸಿಕೊಂಡವರಿಗೆ ನಾನು ಮನವಿ ಮಾಡುವುದು ಒಂದೇ: ಅದು "ಎಂದಿಗೂ ಯುದ್ಧ ಬೇಡ" ಎಂದು ಪೋಪ್ ಹದಿನಾಲ್ಕನೇ ಲಿಯೋ ಅವರು ನಿನ್ನೆ ನಡೆದ ರೆಜೀನಾ ಶೇಲಿ ಪ್ರಾರ್ಥನೆಯ ನಂತರ ಹೇಳಿದ್ದರು.

ಎಂಬತ್ತು ವರ್ಷಗಳ ಹಿಂದೆ ಎರಡನೇ ವಿಶ್ವಯುದ್ಧವು ಕೊನೆಗೊಂಡಿತು. ಆದರೆ, ಲಕ್ಷಾಂತರ ಜನರನ್ನು ಕೊಂದಿತು ಎಂದು ಹೇಳಿದರು ಅವರು ಮುಂದೆ ಇದು ಎಂದಿಗೂ ಮುಂದುವರೆಯಬಾರದು. "ಯುದ್ಧಖೈದಿಗಳು ಬಿಡುಗಡೆಯಾಗಬೇಕು; ಮಕ್ಕಳು ಮರಳಿ ತಮ್ಮ ಕುಟುಂಬಗಳಿಗೆ ತೆರಳಬೇಕು" ಎಂದು ಹೇಳಿದ್ದರು. ಪೋಪ್ ಲಿಯೋ ಅವರು ಇದೇ ಸಂದರ್ಭದಲ್ಲಿ ಉಕ್ರೇನ್ ಹಾಗೂ ಗಾಝಾ ದೇಶಗಳನ್ನು ನೆನಪಿಸಿಕೊಂಡು, ಅವರಿಗಾಗಿ ಪ್ರಾರ್ಥಿಸುವಂತೆ ಭಕ್ತಾಧಿಗಳಿಗೆ ಮನವಿ ಮಾಡಿದ್ದರು. 

ಝೆಲೆನ್ಸ್ಕಿ ಪ್ರತಿಕ್ರಿಯೆ

ಇದೇ ವೇಳೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರು ಪೋಪ್ ಲಿಯೋ ಅವರ ಜೊತೆಗೆ ಪೋನ್ ಮೂಲಕ ಮಾತನಾಡಿದ ಕುರಿತು ಸಾಮಾಜಿಕ ಜಾಲತಾಣ "ಎಕ್ಸ್"ನಲ್ಲಿ ಹಂಚಿಕೊಂಡಿದ್ದಾರೆ. ಉಕ್ರೇನ್ ದೇಶಕ್ಕಾಗಿ ಪೋಪ್ ಲಿಯೋ ಅವರ ಬೆಂಬಲಕ್ಕಾಗಿ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. 

"ನಮ್ಮ ದೇಶಕ್ಕೆ ನ್ಯಾಯಯುತ ಮತ್ತು ಶಾಶ್ವತವಾದ ಶಾಂತಿಯನ್ನು ಸಾಧಿಸುವ ಅಗತ್ಯತೆ ಮತ್ತು ಕೈದಿಗಳ ಬಿಡುಗಡೆಯ ಬಗ್ಗೆ ಅವರ ಮಾತುಗಳನ್ನು ನಾವು ತುಂಬಾ ಗೌರವಿಸುತ್ತೇವೆ" ಎಂದು ಉಕ್ರೇನ್ ಅಧ್ಯಕ್ಷರು ಹೇಳಿದರು. "ರಷ್ಯಾದಿಂದ ಗಡೀಪಾರು ಮಾಡಲಾದ ಸಾವಿರಾರು ಉಕ್ರೇನಿಯನ್ ಮಕ್ಕಳ ಕುರಿತು ಪೋಪ್ ಚರ್ಚಿಸಿದರು" ಎಂದು ಅವರು ಹೇಳಿದರು.

"ಶಾಂತಿ ಮೂಡಿಸುವಲ್ಲಿ ಯಾವುದೇ ಮಾತುಕತೆಗೆ ಉಕ್ರೇನ್ ಸಿದ್ಧವಿದೆ" ಎಂದು ಅವರು ಹೇಳಿದರು. ಮುಂದುವರೆದು ಮಾತನಾಡಿದ ಅವರು ಉಕ್ರೇನ್ ದೇಶಕ್ಕೆ ನ್ಯಾಯ ದೊರಕಿಸಿಕೊಡುವಲ್ಲಿ ಹಾಗೂ ಮಕ್ಕಳನ್ನು ಕುಟುಂಬಗಳಿಗೆ ತಲುಪಿಸುವಲ್ಲಿ ನಾವು ವ್ಯಾಟಿಕನ್ ಸಹಾಯವನ್ನು ಭರವಸೆಯಿಂದ ನಂಬುತ್ತೇವೆ" ಎಂದು ಹೇಳಿದರು.

ಇದೇ ವೇಳೆ, ಅಧ್ಯಕ್ಷ ಝೆಲೆನ್ಸ್ಕಿ ಉಕ್ರೇನ್ ದೇಶಕ್ಕೆ ಪ್ರೇಷಿತ ಪ್ರಯಾಣವನ್ನು ಕೈಗೊಳ್ಳುವಂತೆ ಪೋಪ್ ಹದಿನಾಲ್ಕನೇ ಲಿಯೋ ಅವರಿಗೆ ನಾನು ಆಹ್ವಾನಿಸಿದ್ದೇನೆ" ಎಂದು ಅವರು ಹೇಳಿದರು.

12 ಮೇ 2025, 16:07