ರೆಜೀನಾ ಶೇಲಿ ಪ್ರಾರ್ಥನೆಯಲ್ಲಿ ಪೋಪ್ ಲಿಯೋ XIV: ದೈವಕರೆಗಳಿಗಾಗಿ ಪ್ರಾರ್ಥಿಸೋಣ
ವರದಿ: ವ್ಯಾಟಿಕನ್ ನ್ಯೂಸ್
ಇಂದು ಉತ್ತಮ ಕುರಿಗಾಹಿಯ ಭಾನುವಾರದಂದು ಪೋಪ್ ಹದಿನಾಲ್ಕನೇ ಲಿಯೋ ಅವರು ಸಂತ ಪೇತ್ರರ ಮಹಾದೇವಾಲಯದಲ್ಲಿ ರೆಜೀನಾ ಶೇಲಿ ಪ್ರಾರ್ಥನೆಯನ್ನು ಮುನ್ನಡೆಸಿದ್ದಾರೆ. ಪ್ರಾರ್ಥನೆಗೂ ಮುಂಚಿತವಾಗಿ ಸಂತ ಪೇತ್ರರ ಚೌಕದಲ್ಲಿ ನೆರೆದಿದ್ದ ಅಪಾರ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಅವರು "ನಾವೆಲ್ಲರೂ ದೈವಕರೆಗಳಿಗಾಗಿ ಪ್ರಾರ್ಥಿಸಿ, ಪರಸ್ಪರ ಸೇವೆಯಲ್ಲಿ ಜೀವಿಸೋಣ" ಎಂದು ಹೇಳಿದರು.
ಉತ್ತಮ ಕುರಿಗಾಹಿಯ ಭಾನುವಾದ ಹಿನ್ನೆಲೆಯಲ್ಲಿ ಮಾತನಾಡಿದ ಅವರು ಇದು ದೇವರು ನೀಡಿದ ವರದಾನ. ಏಕೆಂದರೆ ರೋಮಿನ ಧರ್ಮಾಧ್ಯಕ್ಷನಾಗಿ ನಾನು ನಿಮ್ಮೆಲ್ಲರನ್ನು ಮುನ್ನಡೆಸಲು ಪ್ರಭುವಿನಂತೆ ಉತ್ತಮ ಕುರಿಗಾಹಿಯಾಗಿರಬೇಕು. ಇಂದಿನ ಶುಭ ಸಂದೇಶದಲ್ಲಿ ಯೇಸು ನಾನೇ ಉತ್ತಮ ಕುರಿಗಾಹಿ ಎನ್ನುತ್ತಾರೆ. ಅವರಿಂದ ಸ್ಪೂರ್ತಿ ಪಡೆದು ನಾವೆಲ್ಲರೂ ಮುಂದೆ ನಡೆಯಬೇಕು ಎಂದು ಹೇಳಿದರು.
ಇಂದು ದೈವಕರೆಗಳ ಭಾನುವಾರವೂ ಸಹ ಆದ ಕಾರಣ ಅವರು ಜಗತ್ತಿನಲ್ಲಿ ದೈವಕರೆಗಳಿಗಾಗಿ ಪ್ರಾರ್ಥಿಸೋಣ. ಈ ವೇಳೆ ಸಂತ ಪೇತ್ರರ ಚೌಕದಲ್ಲಿ ಯುವ ಜನರ ಜ್ಯೂಬಿಲಿಗೆ ಬಂದಿದ್ದ ನೂರಾರು ಯುವ ಜನತೆಯನ್ನು ಕಂಡು, ಇಂದಿನ ವಿಶೇಷವನ್ನು ಆಚರಿಸಲು ಇದು ಸೂಕ್ತ ಸಮಯ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು ನಾವೆಲ್ಲರೂ ಪರಸ್ಪರ ಸೇವೆಯನ್ನು ಮಾಡಬೇಕು. ಪರಸ್ಪರ ನೆರವಿಗೆ ಧಾವಿಸಬೇಕು ಎಂದು ಹೇಳಿದರು. ನಮ್ಮ ಸಮುದಾಯಗಳಲ್ಲಿ ದೇವರ ಧ್ವನಿಯನ್ನು ಗುರುತಿಸುತ್ತಾ, ಸಂತೋಷದಿಂದ ಮುಂದುವರೆಯಬೇಕು ಎಂದು ಹೇಳಿದರು. ಇದೇ ವೇಳೆ ಪೋಪ್ ಫ್ರಾನ್ಸಿಸ್ ಅವರನ್ನು ನೆನಪಿಸಿಕೊಂಡ ಅವರು "ಯುವ ಜನತೆಯನ್ನು ಸ್ವಾಗತಿಸಿ, ನಾವೆಲ್ಲರೂ ಅವರ ಜೊತೆ ನಡೆಯಬೇಕು" ಎಂದು ಹೇಳಿದರು.