ಪೋಪ್ ಲಿಯೋ ಅವರ ಮೇ ತಿಂಗಳ ಪೂಜಾವಿಧಿ ಆಚರಣೆಗಳನ್ನು ಬಿಡುಗಡೆ ಮಾಡಿದ ವ್ಯಾಟಿಕನ್
ವರದಿ: ವ್ಯಾಟಿಕನ್ ನ್ಯೂಸ್
ವ್ಯಾಟಿಕನ್ನಿನ ಮಾಧ್ಯಮ ಕಚೇರಿಯು ಮೇ ತಿಂಗಳ ಪೋಪ್ ಹದಿನಾಲ್ಕನೇ ಲಿಯೋ ಅವರ ಪೂಜಾವಿಧಿ ಆಚರಣೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೇ 18 ರಂದು ಸಂತ ಪೇತ್ರರ ಚೌಕದಲ್ಲಿ ನೂತನ ವಿಶ್ವಗುರುಗಳ ಪ್ರೇಷಿತಾಧಿಕಾರದ ಆರಂಭದ ಬಲಿಪೂಜೆಯನ್ನೂ ಸಹ ಇದು ಒಳಗೊಂಡಿದೆ.
ಮಾತೆ ಮರಿಯಮ್ಮನವರಿಗೆ ಸಮರ್ಪಿತವಾಗಿರುವ ಈ ತಿಂಗಳಲ್ಲಿ ವಿಶ್ವಗುರುಗಳು ವಿವಿಧ ಪೂಜಾವಿಧಿಗಳಲ್ಲಿ ಭಾಗವಹಿಸುತ್ತಾರೆ ಹಾಗೂ ಮಹಾದೇವಾಲಯಗಳಿಗೆ ಹಲವು ಭೇಟಿಗಳನ್ನು ನೀಡಲಿದ್ದಾರೆ ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ಹೇಳಿದೆ.
ಮೇ 18 ರಂದು, ಅಂದರೆ ಪಾಸ್ಖ ಕಾಲದ ಐದನೇ ಭಾನುವಾರ ಪೋಪ್ ಹದಿನಾಲ್ಕನೇ ಲಿಯೋ ಅವರು ಸಂತ ಪೇತ್ರರ ಚೌಕದಲ್ಲಿ ಬೆಳಿಗ್ಗೆ 10 ಗಂಟೆಗೆ ತಮ್ಮ ಪ್ರೇಷಿತಾಧಿಕಾರದ ಉದ್ಘಾಟನಾ ಬಲಿಪೂಜೆಯನ್ನು ಅರ್ಪಿಸಲಿದ್ದಾರೆ.
ಮಂಗಳವಾರ ಮೇ 30 ರಂದು ರೋಮ್ ನಗರದ ಸೆಂಟ್ ಪೌಲ್ ಔಟ್ಸೈಟ್ ದಿ ವಾಲ್ಸ್ ಮಹಾದೇವಾಲಯಕ್ಕೆ ಭೇಟಿ ನೀಡಿ, ಮಹಾದೇವಾಲಯದ ಅಧಿಕಾರವನ್ನು ವಹಿಸಿಕೊಂಡು, ನಂತರ ಸಂತ ಪೇತ್ರರ ಸಮಾಧಿಗೆ ಭೇಟಿ ನೀಡಲಿದ್ದಾರೆ.
ಭಾನುವಾರ, ಮೇ 25 ರಂದು ಪೋಪ್ ಲಿಯೋ ಅವರು ಸಂತ ಜಾನ್ ಲ್ಯಾಟರನ್ ಮಹಾದೇವಾಲಯಕ್ಕೆ ಭೇಟಿ ನೀಡಿ, ಅಧಿಕಾರವನ್ನು ವಹಿಸಿಕೊಂಡು, ಬಲಿಪೂಜೆಯನ್ನು ಅರ್ಪಿಸಲಿದ್ದಾರೆ. ಈ ಬಲಿಪೂಜೆಯಲ್ಲಿ ಅಧಿಕೃತವಾಗಿ ಪೋಪ್ ಹದಿನಾಲ್ಕನೇ ಲಿಯೋ ಅವರು ರೋಮಿನ ಧರ್ಮಾಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ.
ಅಂದು ಸಂಜೆ ಅವರು ಸೆಂಟ್ ಮೇರಿ ಮೇಜರ್ ಮಹಾದೇವಾಲಯಕ್ಕೆ ಭೇಟಿ ನೀಡಿ, ಸಾಲುಸ್ ಪಾಪುಲಿ ರೊಮಾನಿ ಭಾವಚಿತ್ರದ ಬಳಿ ಪ್ರಾರ್ಥಿಸಲಿದ್ದಾರೆ.
ಅಂತಿಮವಾಗಿ, ಶನಿವಾರ ಮೇ 31 ರಂದು ಮಾತೆ ಮರಿಯಮ್ಮನವರು ಎಲಿಜಬೇಥಳನ್ನು ಸಂಧಿಸಿದ ಹಬ್ಬದ ಹಿನ್ನೆಲೆ, ಸಂತ ಪೇತ್ರರ ಮಹಾದೇವಾಲಯದಲ್ಲಿ ಯಾಜಕದೀಕ್ಷೆಯ ಬಲಿಪೂಜೆಯಲ್ಲಿ ಭಾಗವಹಿಸಲಿದ್ದಾರೆ.