MAP

ಪೋಪ್ ಲಿಯೋ XIV: ಮಾಧ್ಯಮಗಳು ಶಾಂತಿಯನ್ನು ಉತ್ತೇಜಿಸಿ ಮಾತುಗಳೆಂಬ ಆಯುಧವನ್ನು ತ್ಯಜಿಸಬೇಕು

ಪೋಪ್ ಆಯ್ಕೆ ಪ್ರಕ್ರಿಯೆಯನ್ನು ವರದಿ ಮಾಡಲು ರೋಮ್ ಬಂದಿದ್ದ ಪತ್ರಕರ್ತರುಗಳನ್ನು ವಿಶ್ವಗುರು ಲಿಯೋ ಅವರು ಇಂದು ಭೇಟಿ ಮಾಡಿದ್ದಾರೆ. ಸತ್ಯಕ್ಕೆ ಮಾತ್ರ ಸೇವೆ ಸಲ್ಲಿಸಿ, ಶಾಂತಿಯನ್ನು ಉತ್ತೇಜಿಸಿ, ಶಾಂತಿಯುತ ಸಮಾಜಕ್ಕೆ ನೆರವಾಗಬೇಕು ಎಂದು ಅವರಿಗೆ ಕರೆ ನೀಡಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಆಯ್ಕೆ ಪ್ರಕ್ರಿಯೆಯನ್ನು ವರದಿ ಮಾಡಲು ರೋಮ್ ಬಂದಿದ್ದ ಪತ್ರಕರ್ತರುಗಳನ್ನು ವಿಶ್ವಗುರು ಲಿಯೋ ಅವರು ಇಂದು ಭೇಟಿ ಮಾಡಿದ್ದಾರೆ. ಸತ್ಯಕ್ಕೆ ಮಾತ್ರ ಸೇವೆ ಸಲ್ಲಿಸಿ, ಶಾಂತಿಯನ್ನು ಉತ್ತೇಜಿಸಿ, ಶಾಂತಿಯುತ ಸಮಾಜಕ್ಕೆ ನೆರವಾಗಬೇಕು ಎಂದು ಅವರಿಗೆ ಕರೆ ನೀಡಿದ್ದಾರೆ.

ವಿಶ್ವಗುರುವಾಗಿ ಆಯ್ಕೆಯಾಗಿ ಕೇವಲ ನಾಲ್ಕು ದಿನಗಳಷ್ಟೇ ಆಗಿದೆ. ಆದರೂ ವಿಶ್ವಗುರು ಲಿಯೋ ಅವರು ಇಂದು ಸ್ಥಳೀಯ ಹಾಗೂ ಅಂತರಾಷ್ಟ್ರೀಯ ಪತ್ರಕರ್ತರ ಗಳನ್ನು ಭೇಟಿ ಮಾಡಿದ್ದಾರೆ. ಈ ಪತ್ರಕರ್ತರು ವಿಶ್ವಗುರು ಫ್ರಾನ್ಸಿಸ್ ಅವರ ನಿಧನ, ಪೋಪ್ ಆಯ್ಕೆ ಪ್ರಕ್ರಿಯೆಯನ್ನು ಹಾಗೂ ನಂತರದ ಕೆಲವು ದಿನಗಳನ್ನು ವರದಿ ಮಾಡಲು ಇಲ್ಲಿಗೆ ಆಗಮಿಸಿದ್ದರು.

ವ್ಯಾಟಿಕನ್ನಿನ ಆರನೇ ಪೌಲರ ಸಭಾಂಗಣದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು ಹಾಗೂ ಅವರ ಸೇವ ಕಾರ್ಯಕ್ಕೆ ಇಟಾಲಿಯನ್ ಭಾಷೆಯಲ್ಲಿ ಧನ್ಯವಾದಗಳನ್ನು ತಿಳಿಸಿದರು.

"ಸಂವಹನ ಎಂಬುದು ಶಾಂತಿಯನ್ನು ಉತ್ತೇಜಿಸುವಂತಿರಬೇಕು. ಸಂವಹನ ಎಂಬುದು ಮೂಡುವಾಗ ಅಲ್ಲಿ ಕಠಿಣ ಪದಗಳು ಇರಬಾರದು ಹಾಗೂ ಯಾವುದೇ ಕಾರಣಕ್ಕೂ ಸಂವಹನ ಎಂಬುದು ಎಲ್ಲಾ ಸಂದರ್ಭಗಳಲ್ಲಿಯೂ ಒಪ್ಪಿಗೆಯನ್ನು ಹುಡುಕಬಾರದು" ಎಂದು ಹೇಳಿದ ಪೋಪ್ ಲಿಯೋ ಅವರು, " ಸಂವಹನ ಎಂಬುದು ಸ್ಪರ್ಧೆಯ ಸಂಸ್ಕೃತಿಯನ್ನು ಹಿಂಬಾಲಿಸಬಾರದು ಹಾಗೂ ಸಂವಹನವು ಸತ್ಯವನ್ನು ಬೇರ್ಪಡಿಸಬಾರದು" ಎಂದು ಹೇಳಿದ್ದಾರೆ.

" ನಾವು ಹೇಗೆ ಸಂಭವಿಸುತ್ತೇವೆ ಎಂಬುದು ಮೂಲಭೂತ ಪ್ರಾಮುಖ್ಯತೆಯನ್ನು ಹೊಂದಿದೆ. ಚಿತ್ರಗಳ ಹಾಗೂ ಮಾತುಗಳ ಯುದ್ಧಕ್ಕೆ ನಾವು ಬೇಡ ಎನ್ನಬೇಕು ಹಾಗೂ ಯುದ್ಧದ ಮನೋಭಾವವನ್ನು ನಾವು ನಿರಾಕರಿಸಬೇಕು" ಎಂದು ಹೇಳಿದರು.

ಇದೇ ವೇಳೆ ಸತ್ಯಕ್ಕಾಗಿ ಹುಡುಕಾಟವನ್ನು ನಡೆಸುತ್ತಾ, ಬಂಧನದಲ್ಲಿ ಇರುವ ಪತ್ರಕರ್ತರೊಂದಿಗೆ ಅವರು ಧರ್ಮ ಸಭೆಯ ಐಕ್ಯತೆಯನ್ನು ವ್ಯಕ್ತಪಡಿಸಿದರು ಹಾಗೂ ಈ ಕೂಡಲೇ ಬಂಧಿಸಲಾಗಿರುವ ಪತ್ರಕರ್ತರುಗಳನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಮುಂದುವರೆದು ಮಾತನಾಡಿದ ಅವರು ಎಲ್ಲಾ ಪತ್ರಕರ್ತರುಗಳಿಗೆ ಅವರ ಸೇವೆಗಾಗಿ ಧನ್ಯವಾದಗಳು ತಿಳಿಸಿದರು. "ನಾವು ವಿಷಮ ಕಾಲಘಟ್ಟದಲ್ಲಿ ಜೀವಿಸುತ್ತಿದ್ದೇವೆ. ಕಾಲವು ನೀಡುವ ಸವಾಲುಗಳನ್ನು ಧರ್ಮಸಭೆ ಎಂದಿಗೂ ಎದುರಿಸಬೇಕು. ಇದೇ ರೀತಿಯಲ್ಲಿ ಸಂವಹನ ಹಾಗೂ ಪತ್ರಿಕೋದ್ಯಮ ಎಂಬುದು ಕಾಲ ಮತ್ತು ಇತಿಹಾಸದಿಂದ ಆಚೆ ಉಳಿದಿಲ್ಲ. ಸಂತ ಅಗಸ್ಟೀನರು ಹೇಳುವಂತೆ ನಾವು ಒಳ್ಳೆಯ ರೀತಿಯಲ್ಲಿ ಜೀವಿಸಿದರೆ ಕಾಲವೂ ಸಹ ಒಳ್ಳೆಯದಾಗಿರುತ್ತದೆ. ಏಕೆಂದರೆ ನಾವೇ ಆ ಕಾಲವಾಗಿದ್ದೇವೆ." ಎಂದು ಹೇಳಿದರು.

12 ಮೇ 2025, 15:01