MAP

ಟೆನ್ನಿಸ್ ಚಾಂಪಿಯನ್ ಜೆನ್ನಿಕ್ ಸಿನ್ನರ್ ಭೇಟಿ ಮಾಡಿದ ಪೋಪ್ ಲಿಯೋ XIV

2025 ರ ಇಟಾಲಿಯನ್ ಓಪನ್ ಇನ್ನೇನು ಆರಂಭವಾಗುತ್ತಿರುವ ಹಿನ್ನೆಲೆ, ಟೆನ್ನಿಸ್ ಚಾಂಪಿಯನ್ ಜೆನ್ನಿಕ್ ಸಿನ್ನರ್ ಅವರು ಇಂದು ವ್ಯಾಟಿಕನ್ನಿನಲ್ಲಿ ಪೋಪ್ ಹದಿನಾಲ್ಕನೇ ಲಿಯೋ ಅವರನ್ನು ಭೇಟಿ ಮಾಡಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

2025 ರ ಇಟಾಲಿಯನ್ ಓಪನ್ ಇನ್ನೇನು ಆರಂಭವಾಗುತ್ತಿರುವ ಹಿನ್ನೆಲೆ, ಟೆನ್ನಿಸ್ ಚಾಂಪಿಯನ್ ಜೆನ್ನಿಕ್ ಸಿನ್ನರ್ ಅವರು ಇಂದು ವ್ಯಾಟಿಕನ್ನಿನಲ್ಲಿ ಪೋಪ್ ಹದಿನಾಲ್ಕನೇ ಲಿಯೋ ಅವರನ್ನು ಭೇಟಿ ಮಾಡಿದ್ದಾರೆ. 

ವ್ಯಾಟಿಕನ್ನಿನ ಮಾಧ್ಯಮ ಕಚೇರಿಯ ಪ್ರಕಾರ ಟೆನ್ನಿಸ್ ತಾರೆ ಜೆನ್ನಿಕ್ ಸಿನ್ನರ್ ಅವರು ತಮ್ಮ ಕುಟುಂಬಸ್ಥರೊಂದಿಗೆ ಹಾಗೂ ಇಟಾಲಿಯನ್ ಟೆನ್ನಿಸ್ ಫೆಡರೇಶನ್ ಅಧ್ಯಕ್ಷ ಅಲ್ಬೆರ್ತೊ ಬಿನಾಗಿ ಅವರೊಂದಿಗೆ ಪೋಪ್ ಹದಿನಾಲ್ಕನೇ ಲಿಯೋ ಅವರನ್ನು ಇಂದು ಭೇಟಿ ಮಾಡಿದರು.

ವ್ಯಾಟಿಕನ್ನಿನ ಸಂತ ಆರನೇ ಪೌಲರ ಸಭಾಂಗಣದ ಪಕ್ಕದಲ್ಲಿನ ಕೋಣೆಯಲ್ಲಿ ಈ ಭೇಟಿಯು ನಡೆಯಿತು.

ಪೋಪ್ ಲಿಯೋ ಅವರು ಟೆನ್ನಿಸ್ ಆಟವನ್ನು ಇಷ್ಟ ಪಡುತ್ತಾರೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಟೆನ್ನಿಸ್ ಚಾಂಪಿಯನ್ ಜೆನ್ನಿಕ್ ಸಿನ್ನರ್ ಅವರು ಪೋಪರಿಗೆ ಟೆನ್ನಿಸ್ ರ್ಯಾಕೆಟ್ ಅನ್ನು ನೀಡುತ್ತಾ, ಆಡುತ್ತೀರಾ ಎಂದು ಕೇಳಿದರು. ಅದಕ್ಕೆ ಪೋಪರು ಇಲ್ಲ, ಈ ಕೊಠಡಿಯ ಕಿಟಕಿ ಅಥವಾ ಲೈಟುಗಳು ಮುರಿದರೆ ಕಷ್ಟ ಎಂದು ಹೇಳುತ್ತಾ ನಗೆ ಚಟಾಕಿಯನ್ನು ಹಾರಿಸಿದರು.

2025 ರ ಇಟಾಲಿಯನ್ ಓಪನ್ ಇನ್ನೇನು ಸದ್ಯದಲ್ಲೇ ಆರಂಭವಾಗಲಿದೆ. ಇಟಾಲಿಯನ್ ಸೇರಿದಂತೆ ಅಂತರಾಷ್ಟ್ರೀಯ ಆಟಗಾರರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

 

14 ಮೇ 2025, 17:14