ರಾಜತಾಂತ್ರಿಕ ಸಿಬ್ಬಂಧಿಗೆ ಪೋಪ್: ನ್ಯಾಯದಿಂದ ಶಾಂತಿ, ಸತ್ಯ ಮತ್ತು ಭರವಸೆಯನ್ನು ನಿರ್ಮಿಸಿ
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಹದಿನಾಲ್ಕನೇ ಲಿಯೋ ಅವರು ಶುಕ್ರವಾರ ಬೆಳಿಗ್ಗೆ ಪವಿತ್ರ ಪೀಠಕ್ಕೆ ಸಂಯೋಜಿತಗೊಂಡಿರುವ ರಾಜತಾಂತ್ರಿಕ ಮಂಡಳಿಯ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ.
ರಾಜತಾಂತ್ರಿಕ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಪೋಪ್ ಹದಿನಾಲ್ಕನೇ ಲಿಯೋ ಅವರು ರಾಜತಾಂತ್ರಿಕ ಅಧಿಕಾರಿಗಳ ಮಂಡಳಿಯ ನಿರ್ಗಮಿತ ಡೀನ್ ಆಗಿರುವ ರಾಯಭಾರಿ ಜಾರ್ಜ್ ಪೌಲಿಡೆಸ್ ಅವರ ಕುರಿತು ಮಾತನಾಡಿದರು. ಅವರ ಬದ್ಧತೆ, ಶಕ್ತಿ ಹಾಗೂ ಕಾರುಣ್ಯತೆಯನ್ನು ಪೋಪ್ ಲಿಯೋ ಅವರು ಶ್ಲಾಘಿಸಿದರು ಹಾಗೂ ವರ್ಷಗಳ ಸೇವೆಯನ್ನು ಕೃತಜ್ಞತೆಯಿಂದ ನೆನೆದರು.
ಮುಂದುವರೆದು ಮಾತನಾಡಿದ ಅವರು ಇಡೀ ಮಾನವಕುಲಕ್ಕೆ ಧರ್ಮಸಭೆಯ ಸೇವಾ ಬದ್ಧತೆಯ ಕುರಿತು ಮಾತನಾಡಿದರು. ರಾಜತಾಂತ್ರಿಕ ಕುಟುಂಬ ಎಂಬುದು ಸಂತೋಷ ಹಾಗೂ ದುಃಖವನ್ನು ಹಂಚಿಕೊಳ್ಳುವ ಸಂಸ್ಥೆಯಾಗಿದೆ ಮಾತ್ರವಲ್ಲದೆ ಇದು ಮಾನವೀಯ ಹಾಗೂ ಆಧ್ಯಾತ್ಮಿಕ ಮೌಲ್ಯಗಳಲ್ಲಿ ಅಡಕವಾಗಿದೆ ಎಂದು ಹೇಳಿದರು.
ತದನಂತರ ಅವರು ಧರ್ಮಸಭೆಯ ಈ ಕುಟುಂಬವು ತನಗಾಗಿ ಸವಲತ್ತುಗಳನ್ನು ಬಯಸುವುದಿಲ್ಲ; ಬದಲಿಗೆ ಸೇತುವೆಗಳನ್ನು ನಿರ್ಮಿಸಲು, ವಿಶೇಷವಾಗಿ ಪಾಲನಾ ಕಾಳಜಿಯಲ್ಲಿ ವ್ಯಕ್ತಗೊಂಡ ರಾಜತಾಂತ್ರಿಕತೆಯ ಮೂಲಕ, ಸೇತುವೆಗಳನ್ನು ನಿರ್ಮಿಸಲು ನೆರವಾಗುತ್ತದೆ ಎಂದು ಹೇಳಿದರು.
ಈ ಸೇವಾಕಾರ್ಯ ಪೋಪ್ ಫ್ರಾನ್ಸಿಸ್ ಅವರ ಪರಂಪರೆಯನ್ನು ನೆನಪಿಸುತ್ತದೆ ಎಂದು ಹೇಳಿದ ಪೋಪ್ ಹದಿನಾಲ್ಕನೇ ಲಿಯೋ ಅವರು, ಪೋಪ್ ಫ್ರಾನ್ಸಿಸ್ ಅವರು ಬಡವರು ಸೇರಿದಂತೆ ದೇವರ ಸೃಷ್ಟಿಯೆಡೆಗೆ ವಹಿಸುತ್ತಿದ್ದ ಕಾಳಜಿಯನ್ನು ಈ ಸೇವಾಕಾರ್ಯವು ಒಳಗೊಂಡಿದೆ ಎಂದು ಹೇಳಿದರು. ಧರ್ಮಸಭೆಯ ಆಧಾರಸ್ಥಂಭ ಹಾಗೂ ಪವಿತ್ರ ಪೀಠದ ರಾಜತಾಂತ್ರಿಕತೆಯ ಬುನಾದಿಯಾಗಿರುವು್ಉ ಶಾಂತಿ, ನ್ಯಾಯ ಹಾಗೂ ಸತ್ಯವಾಗಿದೆ ಎಂದು ಹೇಳಿದರು.
ಅಂತಿಮವಾಗಿ, ಪೋಪ್ ಹದಿನಾಲ್ಕನೇ ಲಿಯೋ ಅವರು ಜ್ಯೂಬಿಲಿ ವರ್ಷದ ಕುರಿತು ಮಾತನಾಡುವ ಮೂಲಕ ತಮ್ಮ ಮಾತನ್ನು ಮುಗಿಸಿದರು. ಎಲ್ಲರೂ ಶಾಂತಿ ಹಾಗೂ ಘನತೆಯಿಂದ ಬದುಕುವ ನಿಟ್ಟಿನಲ್ಲಿ ಎಂದಿಗೂ ಪವಿತ್ರ ಪೀಠವು ಎಲ್ಲಾ ದೇಶಗಳ ಜೊತೆ ಪಯಣಿಸುವ ಬದ್ಧತೆಯನ್ನು ಹೊಂದಿದೆ ಎಂದು ಹೇಳಿದರು.