MAP

ಚೆಂತಿಸಿಮುಸ್ ಆನ್ನುಸ್ ಪ್ರತಿಷ್ಟಾನಕ್ಕೆ ಪೋಪ್: ಬಡವರಿಗೆ ದನಿ ನೀಡಿರಿ

ಪೋಪ್ ಹದಿನಾಲ್ಕನೇ ಲಿಯೋ ಅವರು ಚೆಂತಿಸಿಮುಸ್ ಆನ್ನುಸ್ ಪ್ರತಿಷ್ಟಾನಕ್ಕೆ “ಇಂದಿನ ಬಹುದೊಡ್ಡ ಸಾಮಾಜಿಕ ಸ್ಥಿತ್ಯಂತರದಲ್ಲಿ ಆಲಿಸುವ ಹಾಗೂ ಮುಕ್ತ ಸಂವಾದದ ಮೂಲಕ ದೈವಜನರೊಂದಿಗೆ ಧರ್ಮಸಭೆಯ ಸಾಮಾಜಿಕ ಸಿದ್ಧಾಂತವನ್ನು ರೂಪಿಸಿರಿ” ಎಂದು ಕಿವಿಮಾತನ್ನು ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಮೇ 15-17 ರವರೆಗೆ ಚೆಂತಿಸಿಮುಸ್ ಆನ್ನುಸ್ ಪ್ರೋ ಪೊಂತಿಫೀಚೆ ತನ್ನ 2025 ರ ಸಾರ್ವತ್ರಿಕ ಸಭೆ ಹಾಗೂ ಅಂತರಾಷ್ಟ್ರೀಯ ಸಮಾವೇಶವನ್ನು ರೋಮ್ ನಗರದಲ್ಲಿ ಹಮ್ಮಿಕೊಂಡಿತ್ತು. ಕೊನೆಯ ದಿನ ಪೋಪ್ ಹದಿನಾಲ್ಕನೇ ಲಿಯೋ ಅವರು ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ದೃವೀಕರಣವನ್ನು ಮೆಟ್ಟಿಲ್ಲುವುದು ಮತ್ತು ಜಾಗತಿಕ ಆಡಳಿತವನ್ನು ಮರುನಿರ್ಮಿಸುವುದು: ನೈತಿಕ ತಳಹದಿಗಳು” ಎಂಬುದು ಈ ಸಮಾವೇಶದ ಶೀರ್ಷಿಕೆಯಾಗಿತ್ತು. ಪೋಪ್ ಹದಿನಾಲ್ಕನೇ ಲಿಯೋ ಅವರು ಈ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಧರ್ಮಸಭೆಯ ಸಾಮಾಜಿಕ ಸಿದ್ಧಾಂತದ ಹೃದಯದ ಉಲ್ಲೇಖವನ್ನು ಮಾಡಿದರು.

“ಸಂವಾದದ ಮೂಲಕ ಸೇತುವೆಗಳನ್ನು ನಿರ್ಮಿಸಿರಿ. ವಿವಿಧ ಜನತೆಯನ್ನು ಭೇಟಿ ಮಾಡುವಾಗ ಅವರನ್ನು ಒಗ್ಗೂಡಿಸಿರಿ. ಶಾಂತಿಯಿಂದ ಒಗ್ಗೂಡಿಸಿರಿ” ಎಂದು ಪೋಪ್ ಹದಿನಾಲ್ಕನೇ ಲಿಯೋ ಅವರು ಈ ಪ್ರತಿಷ್ಟಾನದ ಸದಸ್ಯರಿಗೆ ಹೇಳಿದ್ದಾರೆ. ಹೀಗೆ ವರ್ತಿಸಲು ನಮ್ಮಿಂದ ಸಾಧಾರಣವಾಗಿ, ಸಾಮಾನ್ಯವಾಗಿ ಆಗುವುದಿಲ್ಲ. ಬದಲಿಗೆ ಇದರು ದೇವರ ಕೃಪೆ ಹಾಗೂ ಸ್ವಾತಂತ್ರ್ಯದಿಂದಲೇ ಸಾಧ್ಯವಾಗುವಂತದ್ಧು ಎಂದು ಹೇಳಿದ್ದಾರೆ.

ಇದೇ ವೇಳೆ ಪೋಪ್ ಹದಿನಾಲ್ಕನೇ ಲಿಯೋ ಅವರು ತಮ್ಮ ಪೂರ್ವಾಧಿಕಾರಿ ಪೋಪ್ ಹದಿಮೂರನೇ ಲಿಯೋ ಅವರ ಮಾತುಗಳನ್ನು ಇಲ್ಲಿ ನೆನಪಿಸಿಕೊಳ್ಳುತ್ತಾ, “ಪೋಪ್ ಹದಿಮೂರನೇ ಲಿಯೋ ಅವರು ಇತಿಹಾಸದಲ್ಲಿ ತಮ್ಮ ಕಾಲಘಟ್ಟದ ಸಂಕಷ್ಟಗಳ ನಡುವೆಯೂ ಸಹ ಸಾಮಾಜಿಕ ಸಂವಾದವನ್ನು ಉತ್ತೇಜಿಸುವುದರ ಮೂಲಕ ಶಾಂತಿಗೆ ಕೊಡುಗೆಯನ್ನು ನೀಡಲು ಶ್ರಮಿಸಿದರು” ಎಂದು ಹೇಳಿದರು.

“ನಾವು ಜೀವಿಸುತ್ತಿರುವ ಕಾಲಘಟ್ಟವೂ ಸಹ ಇದಕ್ಕೆ ಹೊರತಲ್ಲ. ಇದನ್ನೇ ಪೋಪ್ ಫ್ರಾನ್ಸಿಸ್ ಅವರು ‘ಪೋಲಿಕ್ರೈಸಿಸ್’ ಅಂದರೆ ಧೃವೀಕರಣ ಸಂಘರ್ಷ ಎಂದು ಕರೆದರು. ಇದು ಯುದ್ಧ, ಹವಾಮಾನ ವೈಪರಿತ್ಯ, ಹೆಚ್ಚುತ್ತಿರುವ ಅಸಮಾನತೆ, ಬಲವಂತದ ವಲಸೆ, ಬಡತನ ಹಾಗೂ ಹಕ್ಕುಗಳ ಮೊಟಕುಗೊಳಿಸುವಿಕೆಯನ್ನು ಒಳಗೊಂಡಿದೆ” ಎಂದು ಪೋಪ್ ಹದಿನಾಲ್ಕನೇ ಲಿಯೋ ಅವರು ಈ ಸಭೆಯಲ್ಲಿ ಹೇಳಿದರು.

ಮುಂದುವರೆದು ಮಾತನಾಡಿದ ಅವರು “ಬಡವರಿಗೆ ಧ್ವನಿಯನ್ನು ನೀಡಿರಿ” ಎಂದು ಹೇಳಿದರು. ಪೋಪ್ ಹದಿನಾಲ್ಕನೇ ಲಿಯೋ ಅವರು ಚೆಂತಿಸಿಮುಸ್ ಆನ್ನುಸ್ ಪ್ರತಿಷ್ಟಾನಕ್ಕೆ “ಇಂದಿನ ಬಹುದೊಡ್ಡ ಸಾಮಾಜಿಕ ಸ್ಥಿತ್ಯಂತರದಲ್ಲಿ ಆಲಿಸುವ ಹಾಗೂ ಮುಕ್ತ ಸಂವಾದದ ಮೂಲಕ ದೈವಜನರೊಂದಿಗೆ ಧರ್ಮಸಭೆಯ ಸಾಮಾಜಿಕ ಸಿದ್ಧಾಂತವನ್ನು ರೂಪಿಸಿರಿ” ಎಂದು ಕಿವಿಮಾತನ್ನು ಹೇಳಿದ್ದಾರೆ.

17 ಮೇ 2025, 16:08