MAP

“ಪೋಪ್ ಲಿಯೋ – ಸೇವಾನಿಯೋಗದ ಮೇಷಪಾಲಕ” ಎಂಬ ಕುರಿತು ಕಾರ್ಡಿನಲ್ ತಾಗ್ಲೆ ಚಿಂತನೆ

ಸುವಾರ್ತಾ ಪ್ರಸಾರ ವಿಭಾಗ ಪ್ರೋ-ಪ್ರೀಫೆಕ್ಟ್ ಆಗಿರುವ ಕಾರ್ಡಿನಲ್ ಲೂಯಿಸ್ ಅಂತೋನಿಯೋ ತಾಗ್ಲೆ ಅವರು ವ್ಯಾಟಿಕನ್ ನ್ಯೂಸ್ ಜೊತೆಗೆ ಮಾತನಾಡಿದ್ದು, ಕಾಂಕ್ಲೇವ್ ಕುರಿತ ತಮ್ಮ ಆಧ್ಯಾತ್ಮಿಕ ಅನುಭವವನ್ನು ಹಂಚಿಕೊಂಡಿದ್ದಾರೆ, ಹಾಗೂ ಪೋಪ್ ಫ್ರಾನ್ಸಿಸ್ ಅವರ ಪರಂಪರೆಯ ಕುರಿತು ಚಿಂತನೆಯನ್ನು ನಡೆಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಕಾಂಕ್ಲೇವ್ ಸಂದರ್ಭದಲ್ಲಿ ಕಾರ್ಡಿನಲ್ ತಾಗ್ಲೆ ಮತ್ತು ಕಾರ್ಡಿನಲ್ ರಾಬರ್ಟ್ ಫ್ರಾನ್ಸಿಸ್ ಪ್ರೆವೋಸ್ಟ್ (ಪೋಪ್ ಲಿಯೋ XIV) ಇಬ್ಬರೂ ಅಕ್ಕಪಕ್ಕದಲ್ಲಿ ಕುಳಿತಿದ್ದರು. ಇಂದು ಪೋಪರ ಖಾಸಗಿ ಭೇಟಿಯಲ್ಲಿ, ಇಂದು, ನೂತನ ಪೋಪ್ ಆಯ್ಕೆಯಾಗಿ ಒಂದು ವಾರದ ನಂತರ, ಇವರಿಬ್ಬರು ಇಂದು ಭೇಟಿಯಾಗಿದ್ದಾರೆ.

ಕಾರ್ಡಿನಲ್ ತಾಗ್ಲೆ ಮತ್ತು ಪೋಪ್ ಲಿಯೋ ಅವರಿಬ್ಬರಿಗೆ ಪರಸ್ಪರ ಹಲವಾರು ವರ್ಷಗಳ ಸಂಪರ್ಕವಿದೆ. ಕಳೆದ ಒಂದೆರಡು ವರ್ಷಗಳಲ್ಲಿ ಇವರು ತಮ್ಮ ಪರಸ್ಪರ ವಿಭಾಗಗಳ ಕಾರ್ಯನಿಮಿತ್ತ ಒಡನಾಡಿ, ಚರ್ಚಿಸಿದ್ದಾರೆ. ವ್ಯಾಟಿಕನ್ ನ್ಯೂಸ್ ಜೊತೆಗೆ ಮಾತನಾಡುತ್ತಾ ಕಾರ್ಡಿನಲ್ ತಾಗ್ಲೆ ಅವರು ನೂತನ ಪೋಪರ ಕುರಿತು ಹೊಸ ಒಳನೋಟಗಳನ್ನು ಹಂಚಿಕೊಂಡಿದ್ದಾರೆ. ಅದೇ ರೀತಿ, ಕಾಂಕ್ಲೇವ್ ಕುರಿತ ತಮ್ಮ ಆಧ್ಯಾತ್ಮಿಕ ಅನುಭವವನ್ನು ಹಂಚಿಕೊಂಡಿದ್ದಾರೆ, ಹಾಗೂ ಪೋಪ್ ಫ್ರಾನ್ಸಿಸ್ ಅವರ ಪರಂಪರೆಯ ಕುರಿತು ಚಿಂತನೆಯನ್ನು ನಡೆಸಿದ್ದಾರೆ.

ಕಾರ್ಡಿನಲ್ ತಾಗ್ಲೆ ಅವರೇ, ಕಾಂಕ್ಲೇವ್ ನಂತರ ಪೋಪ್ ಲಿಯೋ ಅವರು ಪ್ರೇಷಿತಾಧಿಕಾರವನ್ನು ಆರಂಭಿಸಿದ್ದಾರೆ. ನೂತನ ಪೋಪ್ ಕುರಿತು ನಿಮ್ಮ ಅಭಿಪ್ರಾಯವೇನು?

ನಾನು ಮೊದಲ ಬಾರಿಗೆ ಪೋಪ್ ಹದಿನಾಲ್ಕನೇ ಲಿಯೋ ಅವರನ್ನು ಮನಿಲಾದಲ್ಲಿ ಹಾಗೂ ರೋಮ್ ನಗರದಲ್ಲಿ ಸಂಧಿಸಿದೆ. 2023 ರಿಂದ ಜೊತೆಯಾಗಿ ನಾವು ರೋಮನ್ ಕೂರಿಯಾದಲ್ಲಿ ಕಾರ್ಯನಿರ್ವಹಿಸಿದ್ದೇವೆ. ಅವರಿಗೆ ಬಹಳಷ್ಟು ತಾಳ್ಮೆ ಇದ್ದು, ಅಧ್ಯಯನದಲ್ಲಿ ತೊಡಗಿಸಿಕೊಂಡು, ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಚಿಂತನೆಯನ್ನು ನಡೆಸುತ್ತಾರೆ. ತಮ್ಮ ಅಭಿಲಾಷೆ ಹಾಗೂ ಆಕಾಂಕ್ಷೆಗಳನ್ನು ಅವರು ಮತ್ತೊಬ್ಬರ ಮೇಲೆ ಹೇರದೆ ವ್ಯಕ್ತಪಡಿಸುತ್ತಾರೆ. ಬೌದ್ಧಿಕವಾಗಿ ಅವರು ಸದಾ ಎಚ್ಚರಿಕೆಯಿಂದ ಇರುತ್ತಾರೆ; ಅಷ್ಟೇ ಸರಳತೆಯಿಂದ ಹಾಗೂ ದೀನತೆಯಿಂದ ಇರುತ್ತಾರೆ.  ಪ್ರಾರ್ಥನೆ ಹಾಗೂ ಸೇವಾನಿಯೋಗದ ಅನುಭವದಿಂದ ಅವರು ಜನರಿಗೆ ಬೆಚ್ಚನೆಯ ಭಾವವನ್ನು ತರುತ್ತಾರೆ.

ಕಾಂಕ್ಲೇವ್ ಮುಂಚಿತವಾಗಿ ಹಲವಾರು ಜನರು ಧರ್ಮಸಭೆಯಲ್ಲಿ ವಿಭಜನೆ, ನೂತನ ಪೋಪರ ಆಯ್ಕೆಯಲ್ಲಿ ಕಾರ್ಡಿನಲ್ಲುಗಳ ಗೊಂದಲ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು. ಆದರೂ, ಕಾಂಕ್ಲೇವ್ ಎರಡನೇ ದಿನಕ್ಕೆ ಮುಕ್ತಾಯವಾಯಿತು. ಇದರಲ್ಲಿನ ನಿಮ್ಮ ಅನುಭವ ಹೇಗಿತ್ತು? ಇದು ನಿಮ್ಮ ಎರಡನೇ ಕಾಂಕ್ಲೇವ್!

ಯಾವುದೇ ಒಂದು ದೊಡ್ಡ ಘಟನೆ ಅಥವಾ ಬದಲಾವಣೆ ಸಂಭವಿಸುವುದಕ್ಕೂ ಮುಂಚೆ ಚರ್ಚೆಗಳಾಗುವುದು, ಅಭಿಪ್ರಾಯ ವ್ಯಕ್ತಪಡಿಸುವುದು ಸಹಜ. ಅದೇ ರೀತಿ ಕಾಂಕ್ಲೇವ್ ಸಹ. ನಾನು ಮೊದಲ ಬಾರಿಗೆ ಭಾಗವಹಿಸಿದ ಕಾಂಕ್ಲೇವ್ ಸಂದರ್ಭದಲ್ಲಿ ಪೋಪ್ ಹದಿನಾರನೇ ಬೆನೆಡಿಕ್ಟರು ಇನ್ನೂ ಜೀವಂತವಾಗಿದ್ದರು. ಆದರೆ, ಮೊನ್ನೆ ನಡೆದ ಕಾಂಕ್ಲೇವ್ ಸಂದರ್ಭದಲ್ಲಿ ಪೋಪ್ ಫ್ರಾನ್ಸಿಸ್ ಮರಣಿಸಿದ್ದರು. ಅಂದರೆ, ಎರಡೂ ಸನ್ನಿವೇಷಗಳು ವಿಭಿನ್ನವಾಗಿವೆ. 2013 ರಲ್ಲಿ ಯಾಕೆ ಕಾರ್ಡಿನಲ್ಲುಗಳು ಕೆಂಪಗಿನ ಬಹಳ ಅಲಂಕೃತವಾಗಿ ಕಾಣುವಾ ಕಾರ್ಡಿನಲ್ ಉಡುಪನ್ನು ಧರಿಸಬೇಕು ಎಂಬುದು ನನ್ನ ಆಲೋಚನೆಯಾಗಿತ್ತು. ಆದರೆ, ಕಾಂಕ್ಲೇವ್ ಎಂಬುದು ಆರಾಧನಾವಿಧಿಯ ಕ್ರಿಯೆ ಎಂಬುದಾಗಿದ್ದು, ಅಲ್ಲಿ ಪವಿತ್ರಾತ್ಮರು ಚಲಿಸುತ್ತಾರೆ. ಈ ಸಂದರ್ಭದಲ್ಲಿ ನಾವು ಯಾರೆಂಬುದು ನಮ್ಮ ಅರಿವಿಗೆ ಬರಬೇಕು ಎಂಬುದು ನನಗೆ ತಿಳಿಯಿತು. ಪೋಪ್ ಫ್ರಾನ್ಸಿಸ್ ಮತ್ತು ಪೋಪ್ ಹದಿನಾಲ್ಕನೇ ಲಿಯೋ ಇಬ್ಬರೂ ಸಹ ಎರಡನೇ ದಿನಕ್ಕೆ ಆಯ್ಕೆಯಾದರು. ಕಾಂಕ್ಲೇವ್ ನಾವೆಲ್ಲ ಕುಟುಂಬ, ಧರ್ಮಕೇಂದ್ರ, ಧರ್ಮಕ್ಷೇತ್ರ ಹಾಗೂ ರಾಷ್ಟ್ರಗಳು ಸೇರಿದಂತೆ ಹೇಗೆ ಒಂದೇ ಸಹಭಾಗಿತ್ವವನ್ನು ಹೊಂದಬಹುದು ಎಂದು ನಮಗೆ ಕಲಿಸುತ್ತದೆ.

ಸಿಸ್ಟೈನ್ ಚಾಪೆಲ್’ನಲ್ಲಿ ನೀವು ಕಾರ್ಡಿನಲ್ ಪ್ರೆವೋಸ್ಟ್ ಅವರ ಪಕ್ಕದಲ್ಲಿ ಕುಳಿತಿದ್ದಿರಿ. ಮುರನೇ ಎರಡರಷ್ಟು ಬಹುಮತ ಸಿಕ್ಕಾಗ ಅವರ ಪ್ರತಿಕ್ರಿಯೆ ಹೇಗಿತ್ತು?

ಅವರ ಪ್ರತಿಕ್ರಿಯೆ ಕಿರುನಗೆ ಮತ್ತು ಅವರು ಆಳವಾಗಿ ಉಸಿರಾಡುತ್ತಿದ್ದರು. ಪವಿತ್ರ ಭೀತಿ ಎಂಬುದು ಅವರಲ್ಲಿ ಕಾಣುತ್ತಿತ್ತು. ನಾನು ಅವರಿಗಾಗಿ ಮೌನದಲ್ಲಿ ಪ್ರಾರ್ಥಿಸಿದೆ. ಮೂರನೇ ಒಂದರಷ್ಟು ಬಹುಮತ ಸಿಕ್ಕಾಗ ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿದರು. ಎಲ್ಲಾ ಕಾರ್ಡಿನಲ್ಲುಗಳು ತಮ್ಮ ಸಹೋದರನಿಗಾಗಿ ಸಂತೋಷ ಮತ್ತು ಪ್ರಾರ್ಥನೆಗಳನ್ನು ವ್ಯಕ್ತಪಡಿಸಿದರು. ಕ್ರಿಸ್ತ ಮತ್ತು ಅವರ ನಡುವಿನ ಆ ಸಮಯಕ್ಕೆ ಯಾರೂ ಅಡ್ಡಿಯಾಗಲಿಲ್ಲ.

ಸಂತ ಇಗ್ನಾಸಿಯವರ ಪುತ್ರನ ನಂತರ ಇದೀಗ ಸಂತ ಅಗಸ್ಟೀನರ ಪುತ್ರ! ಒಂದರ ನಂತರ ಮತ್ತೊಂದು ಎಂಬಂತೆ ಧರ್ಮಸಭೆಗೆ ಪ್ರಮುಖ ಧಾರ್ಮಿಕ ಸಭೆಗಳಿಂದ ಪೋಪರು ಆಯ್ಕೆಯಾಗಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯವೇನು?

ಸಂತ ಅಗಸ್ಟೀನ್ ಮತ್ತು ಸಂತ ಇಗ್ನಾಸಿಯವರ ಬದುಕಿನ ನಡುವೆ ಹಲವು ಸಾಮ್ಯತೆಗಳಿವೆ. ಇವರಿಬ್ಬರೂ ಸಹ ಲೌಕಿಕ ಬದುಕನ್ನು ತ್ಯಜಿಸಿ ಬಂದವರು. ಎರಡೂ ಸಭೆಗಳು ಹೃದಯಗಳನ್ನು ಬಿಡುಗಡೆ ಮಾಡಿ, ಬೆಸೆದು, ದೇವರ ಅನಂತ ಕರುಣೆಯಿಂದ ತುಂಬುವ ಸೇವಾನಿಯೋಗಕ್ಕೆ ಅರ್ಪಿತಗೊಂಡಿವೆ. ಈ ಎರಡೂ ಸಂತರುಗಳು ಎಲ್ಲಾ ಸಂತರಂತೆ ಧರ್ಮಸಭೆಯ ಆಸ್ತಿಯಾಗಿದ್ದಾರೆ. ಈ ಎರಡೂ ಸಭೆಗಳ ಧ್ಯೇಯಗಳು ಧರ್ಮಸಭೆಯನ್ನು ಬೆಳಗಲಿವೆ.

ಹಲವು ಜನ ನಿಮಗೆ “ಬೆಂಬಲವನ್ನು” ನೀಡುತ್ತಿದ್ದರು. ಅಂದರೆ ನೀವು ಪೋಪ್ ಆಗುತ್ತೀರಿ ಎಂದು. ಈ ಕುರಿತು ನಿಮ್ಮ ಅನುಭವ ಏನು? ಇಟಾಲಿಯನ್ ಭಾಷೆಯಲ್ಲಿ ಹೇಳುವಂತೆ ನೀವು ಸಹ ಮುಂದಿನ ಪೋಪ್ ಅಭ್ಯರ್ಥಿ ಎಂದು ನಿಮಗೆ ಗೊತ್ತಿತ್ತೇ?

ಮೊದಲಿಗೆ ನನಗೆ ಪ್ರಸಿದ್ಧಿಯಲ್ಲಿರುವುದು ಇಷ್ಟವಿಲ್ಲ. ನನಗೆ ಈ ವಿದ್ಯಾಮಾನಗಳು ಬಹಳ ಮುಜುಗರ ಎನಿಸಿತ್ತು. ಇದರಿಂದ ಪ್ರಭಾವಿತನಾಗಬಾರದು ಎಂದು ನಾನು ನನ್ನೆಲ್ಲಾ ದೈಹಿಕ ಹಾಗೂ ಆಧ್ಯಾತ್ಮಿಕ ಶಕ್ತಿಯಿಂದ ಪ್ರಯತ್ನಿಸುತ್ತಿದ್ದೆ. ಕೇವಲ ಧರ್ಮಸಭೆಯ ಒಳಿತನ್ನು ಮಾತ್ರ ಬಯಸಬೇಕು ಎಂಬುದು ನನ್ನ ಮನದಲ್ಲಿತ್ತು.

ಮುಂದುವರೆದು ಕಾರ್ಡಿನಲ್ ತಾಗ್ಲೆ ಪೋಪ್ ಹದಿನಾಲ್ಕನೇ ಲಿಯೋ ಅವರ ಸುವಾರ್ತಾ ಪ್ರಸಾರ ಮನೋಭಾವ ಹಾಗೂ ಪೋಪ್ ಫ್ರಾನ್ಸಿಸ್ ಅವರ ಪರಂಪರೆಯ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.

16 ಮೇ 2025, 17:52