ಜೂನ್ ತಿಂಗಳಲ್ಲಿ ಪ್ರತಿ ಭಾನುವಾರ ಬಲಿಪೂಜೆಯನ್ನು ಅರ್ಪಿಸಲಿರುವ ಪೋಪ್ ಲಿಯೋ
ವರದಿ: ವ್ಯಾಟಿಕನ್ ನ್ಯೂಸ್
ವ್ಯಾಟಿಕನ್ನಿನ ಪೂಜಾ ವಿಧಿ ಆಯೋಗದ ಪ್ರಕಾರ ವಿಶ್ವಗುರು ಲಿಯೋ ಅವರು ಜೂನ್ ತಿಂಗಳಲ್ಲಿ ಪ್ರತಿ ಭಾನುವಾರ ವಿವಿಧ ಕಾರ್ಯಕ್ರಮಗಳಿಗಾಗಿ ಬಲಿ ಪೂಜೆಯನ್ನು ಅರ್ಪಿಸಲಿದ್ದಾರೆ. ಈ ತಿಂಗಳಲ್ಲಿ ಅವರು ಕಾರ್ಡಿನಲ್ಲೂಗಳ ಸಾಮಾನ್ಯ ಸಭೆಯನ್ನು ಹಮ್ಮಿಕೊಳ್ಳಲಿದ್ದು, ಸಂತರ ಪದವಿಗೆರಿಸುವಿಕೆ ಕುರಿತು ಮತದಾನವನ್ನು ಹಮ್ಮಿಕೊಳ್ಳಲಿದ್ದಾರೆ.
ಜೂನ್ 1ರಂದು ಭಾನುವಾರ ಬೆಳಿಗ್ಗೆ 10:30ಕ್ಕೆ ವಿಶ್ವಗುರು ಲಿಯೋ ಅವರು ಸಂತ ಪೇತ್ರರ ಚೌಕದಲ್ಲಿ ಕುಟುಂಬಗಳು, ಮಕ್ಕಳು, ಅಜ್ಜ ಅಜ್ಜಿಯರು ಹಾಗೂ ವೃದ್ಧರ ಜುಬಿಲಿ ಬಲಿಪೂಜೆಯನ್ನು ಅರ್ಪಿಸಲಿದ್ದಾರೆ.
ಜೂನ್ 8ರಂದು ಪಂಚಶತಮ ಹಬ್ಬದ ಹಿನ್ನೆಲೆ ವಿಶ್ವಗುರು ಲಿಯೋ ಅವರು ಸಂತ ಪೇತ್ರದ ಚೌಕದಲ್ಲಿ ಧಾರ್ಮಿಕ ಸಮುದಾಯಗಳ ಜುಬಿಲಿ ಬಲಿಪೂಜೆಯನ್ನು ಅರ್ಪಿಸಲಿದ್ದಾರೆ.
ಇದರ ನಂತರ ಸೋಮವಾರ ವಿಶ್ವಗುರು ಲಿಯೋ ಅವರು ಧರ್ಮಸಭೆಯ ಮಾತೆ ಮರಿಯಮ್ಮನವರ ಹಬ್ಬದ ಕಾರಣ ಸಂತ ಪೇತ್ರರ ಮಹಾದೇವಾಲಯದಲ್ಲಿ ಬೆಳಿಗ್ಗೆ 11:30ಕ್ಕೆ ಪವಿತ್ರ ಪೀಠದ ಜುಬಿಲಿ ಬಲಿಪೂಜೆಯನ್ನು ಅರ್ಪಿಸಲಿದ್ದಾರೆ.
ಜೂನ್ 15ರಂದು ಭಾನುವಾರ ವಿಶ್ವಗುರು ಲಿಯೋ ಅವರು ಕ್ರೀಡಾ ಜುಬಿಲಿಯ ಹಿನ್ನೆಲೆ ಬಲಿಪೂಜೆಯನ್ನು ಅರ್ಪಿಸಲಿದ್ದಾರೆ.
ಜೂನ್ 22ರಂದು ಭಾನುವಾರ ಕ್ರಿಸ್ತರ ಪೂಜ್ಯ ಶರೀರ ಹಾಗೂ ರಕ್ತದ ಹಬ್ಬದ ಹಿನ್ನೆಲೆ ವಿಶ್ವಗುರು ಲಿಯೋ ಅವರು, ಸಂತ ಜಾನ್ ಲ್ಯಾಟರನ್ ಮಹಾದೇವಾಲಯದಲ್ಲಿ ಸಂಜೆ 5:00 ಗಂಟೆಗೆ ಬಲಿಪೂಜೆಯನ್ನು ಅರ್ಪಿಸಲಿದ್ದು, ಅಲ್ಲಿಂದ ಪರಮ ಪ್ರಸಾದದ ಮೆರವಣಿಗೆಯಲ್ಲಿ ಸಂತ ಮೇರಿ ಮೇಜರ್ ಮಹಾದೇವಾಲಯಕ್ಕೆ ಹೊರಡುತ್ತಾರೆ.
ಜೂನ್ 27ರಂದು ವಿಶ್ವಗುರುಗಳು ಯೇಸುವಿನ ಪವಿತ್ರ ಹೃದಯದ ಹಬ್ಬದ ಹಿನ್ನೆಲೆ, ಬೆಳಿಗ್ಗೆ 9:00ಗೆ ಸಂತ ಪೇತ್ರದ ಚೌಕದಲ್ಲಿ ಬಲಿಪೂಜೆಯನ್ನು ಅರ್ಪಿಸಲಿದ್ದಾರೆ.
ಇದಾದ ಎರಡು ದಿನಗಳ ನಂತರ ಸಂತರುಗಳಾದ ಪೇತ್ರ ಮತ್ತು ಪೌಲರ ಹಬ್ಬದ ಹಿನ್ನೆಲೆ, ಸಂತ ಪೇತ್ರರ ಮಹಾದೇವಾಲಯದಲ್ಲಿ ಬಲಿಪೂಜೆಯನ್ನು ಅರ್ಪಿಸಲಿದ್ದಾರೆ.