ಮೆಕ್ಸಿಕನ್ ಯುವ ಜನತೆಗೆ ಕ್ರಿಸ್ತರ ಮೇಲೆ ದೃಷ್ಠಿ ಬೀರುವಂತೆ ಕರೆ ನೀಡಿದ್ದ ದಿವಂಗತ ಪೋಪ್ ಫ್ರಾನ್ಸಿಸ್
ವರದಿ: ವ್ಯಾಟಿಕನ್ ನ್ಯೂಸ್
2024 ರ ಮಧ್ಯಭಾಗದಲ್ಲಿ ಮೆಕ್ಸಿಕನ್ ಜನತೆ ಪ್ರಖ್ಯಾತ ವೀಟೆ ಹಬ್ಬವನ್ನು ಆಚರಿಸಲು ಒಗ್ಗೂಡಿದ ಸಮಯದಲ್ಲಿ ಅಂದು ಪೋಪ್ ಫ್ರಾನ್ಸಿಸ್ ಅವರು ಮೆಕ್ಸಿಕನ್ ಯುವ ಜನತೆಯನ್ನು ಉದ್ದೇಶಿಸಿ, ವಿಡಿಯೋ ಮೂಲಕ ಮಾತನಾಡಿದ್ದರು. ತಮ್ಮ ಆ ಸಂದೇಶದಲ್ಲಿ ಅವರು ಸದಾ ಕ್ರಿಸ್ತರ ಮೇಲೆ ದೃಷ್ಟಿಯನ್ನು ಹಾಯಿಸಬೇಕೆಂದು ಅವರಿಗೆ ಪ್ರೋತ್ಸಾಹಿಸಿದ್ದರು.
ಲ್ಯಾಟಿನ್ ಅಮೇರಿಕನ್ ರಾಷ್ಟ್ರದ ಅತ್ಯಂತ ಸಾಂಪ್ರದಾಯಿಕ ಚೌಕವಾದ ಮೆಕ್ಸಿಕೋ ನಗರದ ಝೋಕಾಲೊ ಚೌಕದಲ್ಲಿ ಜೀವನವನ್ನು ಆಚರಿಸಲು ಮತ್ತು ಪ್ರಪಂಚದಾದ್ಯಂತದ ಜನರಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಉತ್ತೇಜಿಸಲು ತಮ್ಮನ್ನು ತಾವು ತೊಡಗಿಸಿಕೊಳ್ಳಲು ಭಾನುವಾರ 100,000 ಕ್ಕೂ ಹೆಚ್ಚು ಯುವಕರು ಒಟ್ಟುಗೂಡಿದರು.
ವಿಟೇ ಉತ್ಸವವನ್ನು ವಿಟೇ ಗ್ಲೋಬಲ್ ಫೌಂಡೇಶನ್ ಆಯೋಜಿಸಿತ್ತು ಮತ್ತು ಇದು ಒಂದು ಆಕರ್ಷಕ ಕಲಾತ್ಮಕ ಪ್ರದರ್ಶನವನ್ನು ಒಳಗೊಂಡಿತ್ತು.
2024 ರ ಮಧ್ಯದಲ್ಲಿ ವಿಶೇಷವಾಗಿ ವಿಟೇ ಫೆಸ್ಟ್‌ಗಾಗಿ ವೀಡಿಯೊವನ್ನು ರೆಕಾರ್ಡ್ ಮಾಡಿದ್ದ ದಿವಂಗತ ಪೋಪ್ ಫ್ರಾನ್ಸಿಸ್ ಅವರ ಸಂದೇಶ ಬಂದ ಕೂಡಲೇ ಮೆಕ್ಸಿಕನ್ನರು ಸಂತಸವನ್ನೂ ಹಾಗೂ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದರು.
"ನೀವು ಝೋಕಾಲೊದಲ್ಲಿ ಒಟ್ಟುಗೂಡಿದ್ದೀರಿ ಎಂದು ನನಗೆ ತಿಳಿದಿದೆ" ಎಂದು ಹೇಳಿದ್ದ ಪೋಪ್, " ನೀವು ಸ್ವೀಕರಿಸಲು ಮತ್ತು ನೀಡಲು ಒಟ್ಟುಗೂಡಿದ್ದೀರಿ." ಎಂದಿದ್ದರು.
ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಲು ಕ್ರಮ ಕೈಗೊಳ್ಳುವ ಬಯಕೆಗಾಗಿ ಅವರು ಯುವಜನರಿಗೆ ಧನ್ಯವಾದ ಅರ್ಪಿಸಿದರು.
"ನೀವು ಮೌನವಾಗಿರಲು ಒಟ್ಟುಗೂಡಿಲ್ಲ, ಬದಲಿಗೆ ವಿಷಯಗಳನ್ನು ಪ್ರಚೋದಿಸಲು, ಕೆಲವು ಚಲನೆಯನ್ನು ಸೃಷ್ಟಿಸಲು, ಸಂತೋಷದಿಂದ, ಸಂದೇಶವನ್ನು ಸ್ವೀಕರಿಸಲು ಮತ್ತು ಸಂದೇಶವನ್ನು ಹಂಚಿಕೊಳ್ಳಲು ಒಟ್ಟುಗೂಡಿದ್ದೀರಿ" ಎಂದು ದಿವಂಗತ ಪೋಪ್ ಹೇಳಿದ್ದರು. "ಜಗತ್ತಿನಲ್ಲಿ ಅನೇಕ ನಕಾರಾತ್ಮಕ ವಿಷಯಗಳಿವೆ, ಮತ್ತು ನಾವು ಅವುಗಳನ್ನು ಸರಿಪಡಿಸಬೇಕು." ಎಂದು ಪೋಪ್ ಅವರಿಗೆ ಕರೆ ನೀಡಿದ್ದರು. ಇದೇ ವೇಳೆ "ನಿಮ್ಮೆಲ್ಲಾ ಕಾರ್ಯಗಳಲ್ಲಿ ನಿಮ್ಮ ದೃಷ್ಟಿಯನ್ನು ಯೇಸು ಕ್ರಿಸ್ತರೆಡೆಗೆ ಬೀರಬೇಕು" ಎಂದೂ ಸಹ ಅವರನ್ನು ಪ್ರೋತ್ಸಾಹಿಸಿದ್ದರು.