MAP

ನೂತನ ಪೋಪ್ ಹದಿನಾಲ್ಕನೇ ಲಿಯೋ ನೂತನ ಪೋಪ್ ಹದಿನಾಲ್ಕನೇ ಲಿಯೋ 

ನೂತನ ಪೋಪ್ ಹದಿನಾಲ್ಕನೇ ಲಿಯೋ

ಅಮೇರಿಕಾದ ಕಾರ್ಡಿನಲ್ ರಾಬರ್ಟ್ ಫ್ರಾನ್ಸಿಸ್ ಪ್ರಿವೋಸ್ಟ್, ಓ.ಎಸ್.ಎ., ಅವರನ್ನು ಕಾಂಕ್ಲೇವ್ ನೂತನ ವಿಶ್ವಗುರುವಾಗಿ ಚುನಾಯಿಸಿದೆ. ಅವರು ಪೋಪ್ ಹದಿನಾಲ್ಕನೇ ಲಿಯೋ ಎಂದು ನಾಮಾಂಕಿತರಾಗಿದ್ದಾರೆ. ಇವರು ಅಮೇರಿಕಾದ ಮೊಟ್ಟ ಮೊದಲ ಪೋಪ್ ಆಗಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಅಮೇರಿಕಾದ ಕಾರ್ಡಿನಲ್ ರಾಬರ್ಟ್ ಫ್ರಾನ್ಸಿಸ್ ಪ್ರಿವೋಸ್ಟ್, ಓ.ಎಸ್.ಎ., ಅವರನ್ನು ಕಾಂಕ್ಲೇವ್ ನೂತನ ವಿಶ್ವಗುರುವಾಗಿ ಚುನಾಯಿಸಿದೆ. ಅವರು ಪೋಪ್ ಹದಿನಾಲ್ಕನೇ ಲಿಯೋ ಎಂದು ನಾಮಾಂಕಿತರಾಗಿದ್ದಾರೆ. ಇವರು ಅಮೇರಿಕಾದ ಮೊಟ್ಟ ಮೊದಲ ಪೋಪ್ ಆಗಿದ್ದಾರೆ.

ಇಂದು ನಡೆದ ಕಾಂಕ್ಲೇವ್ ಕಾರ್ಡಿನಲ್ ರಾಬರ್ಟ್ ಫ್ರಾನ್ಸಿಸ್ ಪ್ರಿವೋಸ್ಟ್ ಅವರನ್ನು ರೋಮ್ ಧರ್ಮಕ್ಷೇತ್ರದ 267ನೇ ಧರ್ಮಾಧ್ಯಕ್ಷರನ್ನಾಗಿ ಚುನಾಯಿಸಿದೆ. ಕಾರ್ಡಿನಲ್ ಪ್ರೋಟೋ-ಡೀಕನ್ ಡೊಮಿನೀಕ್ ಮಾಂಬೆರ್ತಿ ಅವರು ಜನತೆಗೆ ಈ ಸುದ್ದಿಯನ್ನು ಘೋಷಿಸಿದರು.

"ಅನ್ನುನ್ಸಿಯೋ ವೋಬಿಸ್ ಗೌದಿಯುಂ ಮಾನ್ಯುಂ... ಹಬೇಮಸ್ ಪಾಪಮ್" (ನಿಮಗೆಲ್ಲರಿಗೂ ನಾನು ಸಂತೋಷದ ಸುದ್ದಿಯನ್ನು ಪ್ರಕಟಿಸುತ್ತೇನೆ: ನಮಗೆ ವಿಶ್ವಗುರುಗಳಿದ್ದಾರೆ) ಎಂಬ ಬಹು ನಿರೀಕ್ಷಿತ ಐತಿಹಾಸಿಕ ಸಾಲುಗಳು ಸಂತ ಪೇತ್ರರ ಮಹಾದೇವಾಲಯದ ಮುಖ್ಯ ಕಿಟಕಿಯಿಂದ ಮೊಳಗಿವೆ. ಕಾರ್ಡಿನಲ್ ಪ್ರೋಟೋ-ಡೀಕನ್ ಡೊಮಿನಿಕ್ ಮಾಂಬೆರ್ತಿ ಅವರು ಸಂತ ಪೇತ್ರರ ನೂತನ ಉತ್ತರಾಧಿಕಾರಿಯ ಪ್ರಕಟಣೆಯನ್ನು ರೋಮ್ ನಗರಕ್ಕೆ ಹಾಗೂ ಇಡೀ ವಿಶ್ವಕ್ಕೆ ಈ ಪ್ರಖ್ಯಾತ ಲ್ಯಾಟಿನ್ ಸಾಲುಗಳ ಮೂಲಕ ಘೋಷಿಸಿದ್ದಾರೆ.

ಕಾರ್ಡಿನಲ್ ಡೊಮಿನಿಕ್ ಮಾಂಬೆರ್ತಿ ಘೋಷಿಸಿದ ಲ್ಯಾಟಿನ್ ಸಾಲುಗಳು:

"ಎಮಿನಿಂತಿಸ್ಸಿಮುಂ ಅಕ್ ರೆವೆರೆಂದಿಸ್ಸಿಮುಂ ದೋಮಿನುಂ, ದೊಮಿನುಂ ರೊಬೆರ್ತುಸ್ ಫ್ರಾನ್ಸಿಸ್ಕುಸ್,
ಸಾಂಕ್ತೆ ರೊಮಾನೆ ಎಕ್ಲೀಸಿಯೇ ಕರ್ದಿನಾಲೆಂ ಪ್ರಿವೋಸ್ಟ್, ಕ್ವಿ ಸಿಬಿ ನೋಮೆನ್ ಇಂಪೊಸುಯಿತ್ ಲಿಯೋ XIV

ಈ ಲ್ಯಾಟಿನ್ ಸಾಲುಗಳ ಕನ್ನಡ ಭಾವಾನುವಾದ ಹೀಗಿದೆ:

ಪವಿತ್ರ ರೋಮನ್ ಧರ್ಮಸಭೆಯ ಘನತೆವೆತ್ತ ಹಾಗೂ ಅತಿ ವಂದನೀಯ ಕಾರ್ಡಿನಲ್ ರಾಬರ್ಟ್ ಫ್ರಾನ್ಸಿಸ್ ಪ್ರಿವೋಸ್ಟ್. ಇವರು ತಮಗೆ ಹದಿನಾಲ್ಕನೇ ಲಿಯೋ ಎಂಬ ಹೆಸರನ್ನು ಆರಿಸಿಕೊಂಡಿದ್ದಾರೆ.

ಪೋಪ್ ಹದಿನಾಲ್ಕನೇ ಲಿಯೋ ಅವರು ಸಂತ ಅಗಸ್ಟೀನರ ಸಭೆಗೆ ಸೇರಿದ ಯಾಜಕರಾಗಿದ್ದು, ಎರಡು ಅವಧಿಗೆ ಸಂತ ಅಗಸ್ಟೀನರ ಸಭೆಯ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

08 ಮೇ 2025, 19:43