MAP

ಮೊನ್ಸಿಜ್ಞೊರ್ ರೆಂಜೋ ಪೆಗೊರಾರೋ ಪೊಂಟಿಫಿಕಲ್ ಅಕಾಡಮಿ ಫಾರ್ ಲೈಫ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ನೇಮಕ

ಮೆಡಿಸಿನ್ ಮತ್ತು. ಬಯೋ-ಎಥಿಕ್ಸ್ ವಿಭಾಗದಲ್ಲಿ ತಜ್ಞರಾಗಿರುವ ಮೊನ್ಸಿಜ್ಞೊರ್ ರೆಂಜೋ ಪೆಗೊರಾರೋ ಅವರನ್ನು ಪೋಪ್ ಹದಿನಾಲ್ಕನೇ ಲಿಯೋ ಅವರು ಪೊಂಟಿಫಿಕಲ್ ಅಕಾಡಮಿ ಫಾರ್ ಲೈಫ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ. ನಿರ್ಗಮಿತ ಅಧ್ಯಕ್ಷ ಆರ್ಚ್'ಬಿಷಪ್ ವಿನ್ಸೆಂಝೋ ಪಾಲಿಯ ಅವರ ಸೇವೆಗಾಗಿ ಪೋಪ್ ಅವರಿಗೆ ಕೃತಜ್ಞತೆಗಳನ್ನು ತಿಳಿಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಮೊನ್ಸಿಜ್ಞೊರ್ ರೆಂಜೋ ಪೆಗೊರಾರೋ ಅವರು ಇದೇ ಸಂಸ್ಥೆಯ ಚಾನ್ಸಲರ್ ಆಗಿ 2011 ರಿಂದ ಕಾರ್ಯನಿರ್ವಹಿಸಿದ್ದಾರೆ.

ಏಪ್ರಿಲ್ 21 ರಂದು ಆರ್ಚ್'ಬಿಷಪ್ ವಿನ್ಸೆಂಝೋ ಪಾಲಿಯ ಅವರು 80 ವರ್ಷಗಳನ್ನು ಪೂರೈಸಿದ ಹಿನ್ನೆಲೆ, ಅವರ ಸ್ಥಾನವು ಸ್ವಯಂಚಾಲಿತವಾಗಿ ರದ್ದಾಗುತ್ತದೆ. ಈ ಕಾರಣ ಪೋಪ್ ಹದಿನಾಲ್ಕನೇ ಲಿಯೋ ಅವರು ಮೊನ್ಸಿಜ್ಞೊರ್ ರೆಂಜೋ ಪೆಗೊರಾರೋ ಅವರನ್ನು ಸಂಸ್ಥೆಯ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ.

"ಪೋಪ್ ಫ್ರಾನ್ಸಿಸ್ ಅವರ ಮಾರ್ಗದರ್ಶನದಲ್ಲಿ ನಾನು ಕಳೆದ ಅನೇಕ ವರ್ಷಗಳಲ್ಲಿ ಆರ್ಚ್'ಬಿಷಪ್ ವಿನ್ಸೆಂಝೋ ಪಾಲಿಯ ಹಾಗೂ ಅದಕ್ಕೂ ಮುಂಚಿತವಾಗಿ ಇದರ ಅಧ್ಯಕ್ಷರಾಗಿದ್ದ ಬಿಷಪ್ ಇಗ್ನಾಸಿಯೋ ಕರಾಸ್ಕೋ ದೆ ಪೌಲಾ ಅವರ ಜೊತೆ ಕಾರ್ಯನಿರ್ವಹಿಸಿದ್ದೇನೆ. ಈ ಅನುಭವ ನನಗೆ ಅನೇಕ ಕಲಿಕಾ ಅವಕಾಶಗಳನ್ನು ನೀಡಿದ್ದು, ಬಹಳ ಕಾಲ ನೆನಪಿನಲ್ಲಿಟ್ಟುಕೊಳ್ಳುವ ಅನುಭವವಾಗಿದೆ" ಎಂದು ಇಟಲಿ-ಸಂಜಾತ ಗುರು ಮೊನ್ಸಿಜ್ಞೊರ್ ರೆಂಜೋ ಪೆಗೊರಾರೋ ಹೇಳುತ್ತಾರೆ.

ಇಟಲಿಯ ಪಾದುವಾ ಪ್ರಾಂತ್ಯದಲ್ಲಿ ಜನಿಸಿದ ಇವರು 1989 ರಂದು ಯಾಜಕದೀಕ್ಷೆಯನ್ನು ಪಡೆದರು. ಪಾದುವ ವಿಶ್ವವಿದ್ಯಾನಿಲಯದಿಂದ ವೈದ್ಯಕೀಯ ಪದವಿಯನ್ನು ಪಡೆದಿರುವ ಇವರು, ಬಯೋ-ಎಥಿಕ್ಸ್ ವಿಭಾಗದಲ್ಲಿ ತಜ್ಞರಾಗಿದ್ದಾರೆ.

ಪೋಪ್ ಹದಿನಾಲ್ಕನೇ ಲಿಯೋ ಅವರು ಇದೇ ಸಂದರ್ಭದಲ್ಲಿ ನಿರ್ಗಮಿತ ಅಧ್ಯಕ್ಷ ಆರ್ಚ್'ಬಿಷಪ್ ವಿನ್ಸೆಂಝೋ ಪಾಲಿಯ ಅವರ ಸೇವೆಗಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ.

27 ಮೇ 2025, 17:20