MAP

2025.05.10 foto e stemma di Papa Leone XIV 2025.05.10 foto e stemma di Papa Leone XIV 

ಪೋಪ್ ಲಿಯೋ XIV ರವರ ಲಾಂಛನವು ಮಾತೆ ಮರಿಯ ಮತ್ತು ಸಂತ ಅಗಸ್ಟೀನ್ ರವರನ್ನು ಪ್ರತಿನಿಧಿಸುತ್ತದೆ

ಪೋಪ್ ಲಿಯೋ XIV ರವರ ಲಾಂಛನವು ಪೂಜ್ಯ ಮಾತೆ ಮರಿಯಮ್ಮನವರ ಮೇಲಿನ ಭಕ್ತಿ ಮತ್ತು ಸಂತ ಅಗಸ್ಟೀನ್ ಅವರಿಂದ ಪಡೆದ ಸ್ಫೂರ್ತಿಯನ್ನು ವ್ಯಕ್ತಪಡಿಸುತ್ತದೆ.

ಪೋಪ್ ಲಿಯೋ XIV ರವರ ಲಾಂಛನವು ಸಂತ ಅಗಸ್ಟೀನ್ ಅವರ ಮಾತುಗಳನ್ನು ಪ್ರತಿಬಿಂಬಿಸುತ್ತದೆ, "ನಾವು ಕ್ರೈಸ್ತರು ಸಂಖ್ಯೆಯಲ್ಲಿ ಅನೇಕರಾಗಿದ್ದರೂ, ನಾವೆಲ್ಲರೂ ಕ್ರಿಸ್ತರಲ್ಲಿ ಒಬ್ಬರಾಗಿದ್ದೇವೆ."

ಪೋಪ್ ಲಿಯೋ XIV ಅವರ ಲಾಂಛನವು ಮಾತೆ ಮರಿಯಮ್ಮನವರ ಮೇಲಿನ ಭಕ್ತಿ ಮತ್ತು ಸಂತ ಆಗಸ್ಟೀನ್ ಅವರಿಂದ ಪಡೆದ ಸ್ಫೂರ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದು ವ್ಯಾಟಿಕನ್‌ನ ಸಂವಹನ ಇಲಾಖೆ ಘೋಷಿಸಿತು.

ಪೋಪ್‌ಗಳೆಲ್ಲರ ಲಾಂಛನವು ಸಾಮಾನ್ಯವಾಗಿ ಪೋಪ್ ಧರಿಸುವ ಕಿರೀಟದಂತಹ ಪಾಂಟಿಫಿಕಲ್ ಟೋಪಿಯನ್ನು ಮತ್ತು ಎರಡು ಕೀಲಿಗಳನ್ನು ಪರಸ್ಪರ ದಾಟಿ ಹೋಗಿರುವುದನ್ನು ಒಳಗೊಂಡಿರುತ್ತದೆ. ಇದರ ಜೊತೆಗೆ, ಮೇಲಿನ ಎಡಭಾಗವು ತಿಳಿ ನೀಲಿ ಹಿನ್ನೆಲೆಯಲ್ಲಿ ಬೆಳ್ಳಿ ಲಿಲ್ಲಿ ಚಿಹ್ನೆಯನ್ನು ಹೊಂದಿದೆ ಮತ್ತು ಕೆಳಗಿನ ಬಲಭಾಗವು ತಿಳಿ ಹಳದಿ ಚಿಹ್ನೆಯನ್ನು ಹೊಂದಿದೆ. ಹಿಂಭಾಗದಲ್ಲಿ ಬಾಣದಿಂದ ಚುಚ್ಚಿದ ಕೆಂಪು ಹೃದಯವಿರುವ ಕೆಂಪು ಪುಸ್ತಕವಿದ್ದು, ಅದರ ಮೇಲ್ಭಾಗದಲ್ಲಿ ಜ್ವಾಲೆಯನ್ನು ಹಿಡಿದಿದೆ.

ಲಾಂಛನದ ಕೆಳಭಾಗದಲ್ಲಿ ಪೋಪ್ ಲಿಯೋ XIV ರ ಧ್ಯೇಯವಾಕ್ಯವಿದೆ, IN ILLO UNO UNUM  "ಒಬ್ಬರೇ ಆಗಿರುವ ಆತನಲ್ಲಿ, ನಾವೆಲ್ಲರೂ ಒಂದೇ." ಪೋಪ್ ಅವರ ಲಾಂಛನವು ಸಂತ ಅಗಸ್ಟೀನ್ ಅವರ ಕೀರ್ತನೆ 127 ರ ಧರ್ಮಸಾರವಾಗಿದೆ,  "ನಾವು ಕ್ರೈಸ್ತರು ಅನೇಕರಾಗಿದ್ದರೂ, ನಾವೆಲ್ಲರೂ ಒಬ್ಬ ಕ್ರಿಸ್ತನಲ್ಲಿ ಒಬ್ಬರಾಗಿದ್ದೇವೆ" ಎಂಬ ಮಾತುಗಳನ್ನು ಪ್ರತಿಬಿಂಬಿಸುತ್ತದೆ.

ನೀಲಿ ಬಣ್ಣ ಮತ್ತು ಲಿಲ್ಲಿ ಹೂವು ಮಾತೆ ಮೇರಿಯನ್ನು ಪ್ರತಿನಿಧಿಸುತ್ತದೆ ಮತ್ತು ಬಾಣದಿಂದ ಚುಚ್ಚಿದ ಹೃದಯವು ಸಂತ ಅಗಸ್ಟೀನ್ ಸಭೆಯ ಸಂಕೇತವಾಗಿದೆ ಎಂದು ವ್ಯಾಟಿಕನ್‌ನ ಸಂವಹನ ಇಲಾಖೆ ಘೋಷಿಸಿತು.

15 ಮೇ 2025, 10:55