MAP

Conclave, fumata nera Conclave, fumata nera  (ANSA)

ಕಪ್ಪು ಹೊಗೆ: ಮೊದಲ ಪೂರ್ಣ ದಿನದ ಬೆಳಿಗ್ಗೆಯ ಕಾನ್ಕ್ಲೇವ್‌ ಸಮಾವೇಶದ ನಂತರ ಯಾವುದೇ ಪೋಪ್ ಆಯ್ಕೆಯಾಗಲಿಲ್ಲ

267 ನೇ ಪೋಪ್ ಅವರನ್ನು ಆಯ್ಕೆ ಮಾಡಲು ಮೊದಲ ಪೂರ್ಣ ದಿನದ ಕಾನ್ಕ್ಲೇವ್‌ ಸಮಾವೇಶದ ಮೂರನೇ ಸುತ್ತಿನ ಮತದಾನದ ನಂತರ ಯಾವುದೇ ಪೋಪ್ ಆಯ್ಕೆಯಾಗಲಿಲ್ಲ.

ಗುರುವಾರ ಮಧ್ಯಾಹ್ನ 11:50 ಕ್ಕೆ ಸಿಸ್ಟೀನ್ ಚಾಪೆಲ್ ಮೇಲಿನ ಚಿಮಣಿಯಿಂದ ಕಪ್ಪು ಹೊಗೆ ಏರಿತು, ಇದು ಸಮಾವೇಶದ ಮೊದಲ ಪೂರ್ಣ ದಿನದ ಎರಡನೇ ಮತದಾನವನ್ನು ಸೂಚಿಸುತ್ತದೆ - ಮತ್ತು ಒಟ್ಟಾರೆಯಾಗಿ ಮೂರನೇ ಮತದಾನವು ಅನಿಶ್ಚಿತವಾಗಿತ್ತು.

ಕಾರ್ಡಿನಲ್ಸ್ ಊಟಕ್ಕೆ ವಿರಾಮ ತೆಗೆದುಕೊಳ್ಳುತ್ತಿದ್ದಂತೆ, ಚೌಕದಲ್ಲಿರುವ ಜನರು ನಿರೀಕ್ಷೆಯಲ್ಲಿ ಚಿಮಣಿಯತ್ತ ನೋಡುತ್ತಲೇ ಇದ್ದಾರೆ. ಮತದಾನವು ಸುಮಾರು 16:00 ಗಂಟೆಗೆ ಪುನರಾರಂಭವಾಗುವ ನಿರೀಕ್ಷೆಯಿದೆ.

ನೂತನ ಜಗದ್ಗುರುಗಳ ಘೋಷಣೆಗಾಗಿ ಕಾಯಲು ಸಂತ ಪೇತ್ರರ ಚೌಕದಲ್ಲಿ ಸುಮಾರು 15,000 ಜನರು ಜಮಾಯಿಸಿದ್ದರು.

08 ಮೇ 2025, 12:24