MAP

ಹೊಗೆ ಕೊಳವೆಯಲ್ಲಿ ಕಪ್ಪು ಹೊಗೆ; ಪೋಪರು ಆಯ್ಕೆಯಾಗಲಿಲ್ಲ

ನಿನ್ನೆ ಸಂಜೆ ಆರಂಭವಾದ ಕಾಂಕ್ಲೇವ್'ನಲ್ಲಿ ಕಾರ್ಡಿನಲ್ಲುಗಳು ಮೊದಲ ಸುತ್ತಿನ ಮತದಾನ ನಡೆಸಿದರು. ಆದರೆ, ಹಲವು ಘಂಟೆಗಳ ನಂತರವೂ ಸಹ ನೂತನ ಪೋಪ್ ಅಯ್ಕೆ ಆಗಲಿಲ್ಲ ಎಂದು ಸಿಸ್ಟೀನ್ ಪ್ರಾರ್ಥನಾಲಯದ ಹೊಗೆ ಕೊಳವೆಯಿಂದ ಹೊರಬಂದ ಕಪ್ಪು ಹೋಗೆ ಸಂಕೇತಿಸಿತು. ನೂತನ ಪೋಪ್ ಆಯ್ಕೆಯ ಇತಿಹಾಸದ ಭಾಗವಾಗಲು ವಿವಿಧ ದೇಶಗಳಿಂದ ಆಗಮಿಸಿದ್ದ ಸುಮಾರು 45,000 ಕ್ಕೂ ಹೆಚ್ಚು ಭಕ್ತಾಧಿಗಳು ಸಂತ ಪೇತ್ರರ ಚೌಕದಲ್ಲಿ ನೆರೆದಿದ್ದರು.

ವರದಿ: ವ್ಯಾಟಿಕನ್ ನ್ಯೂಸ್

ಇಂದು ಬೆಳಿಗ್ಗೆ (ರೋಮ್ ಕಾಲಮಾನ) ಮತ್ತೆ ಕಾರ್ಡಿನಲ್ಲುಗಳು ಸಿಸ್ಟೀನ್ ಪ್ರಾರ್ಥನಾಲಯದಲ್ಲಿ ಸಭೆ ಸೇರಲಿದ್ದು, ಮತದಾನ ಪ್ರಕ್ರಿಯೆಯನ್ನು ಮುಂದುವರೆಸಲಿದ್ದಾರೆ. ಬೆಳಿಗ್ಗೆ ಎರಡು ಸುತ್ತಿನ ಮತದಾನ ನಡೆಯಲಿದ್ದು, ನಂತರ ಕಾರ್ಡಿನಲ್ಲುಗಳು ಭೋಜನಾ ವಿರಾಮಕ್ಕೆ ಕಾಸ ಸಾಂತ ಮಾರ್ಥ ನಿವಾಸಕ್ಕೆ ತೆರಳುತ್ತಾರೆ. ತಂದನಂತರ, ಮಧ್ಯಾಹ್ನ ಅವರು ಸಿಸ್ಟೀನ್ ಪ್ರಾರ್ಥನಾಲಯಕ್ಕೆ ಹಿಂತಿರುಗಲಿದ್ದು, ಸಂಜೆವರೆಗೂ ಮತ್ತೆ ಎರಡು ಸುತ್ತಿನ ಮತದಾನವನ್ನು ನಡೆಸಲಿದ್ದಾರೆ ಎಂದು ಮಾಧ್ಯಮ ಪೀಠದ ನಿರ್ದೇಶಕ ಮತ್ತಿಯೋ ಬ್ರೂನಿ ಅವರು ಹೇಳಿದ್ದಾರೆ.

08 ಮೇ 2025, 05:29