ಪೊಂಟಿಫಿಕಲ್ ಸುರಕ್ಷತಾ ಆಯೋಗವು ಕಾನ್ಕ್ಲೇವ್'ಗಾಗಿ ಪ್ರಾರ್ಥಿಸಿದೆ
ವರದಿ: ವ್ಯಾಟಿಕನ್ ನ್ಯೂಸ್
ಮೇ 7, 2025 ರಂದು ಬುಧವಾರ ಪ್ರಾರಂಭವಾಗುವ ಕಾನ್ಕ್ಲೇವ್‌ಗೆ ಮುಂಚಿತವಾಗಿ, ಅಪ್ರಾಪ್ತ ವಯಸ್ಕರ ರಕ್ಷಣೆಗಾಗಿ ಇರುವ ಪಾಂಟಿಫಿಕಲ್ ಆಯೋಗವು ಚರ್ಚ್‌ನೊಂದಿಗೆ ಪ್ರಾರ್ಥನೆಯಲ್ಲಿ ಐಕ್ಯಮತ್ಯವನ್ನು ಸಾಧಿಸಿದೆ.
ರೋಮ್‌ನ ಮುಂದಿನ ಬಿಷಪ್ ಅನ್ನು ಆಯ್ಕೆ ಮಾಡಲು ಮುಂಬರುವ ಕಾನ್ಕ್ಲೇವ್‌ಗೆ ಸಿದ್ಧತೆಗಾಗಿ ಕಾರ್ಡಿನಲ್ಸ್ ಕಾಲೇಜಿನ ಸದಸ್ಯರು ರೋಮ್‌ನಲ್ಲಿ ಒಟ್ಟುಗೂಡುತ್ತಿರುವಾಗ, ಅಪ್ರಾಪ್ತ ವಯಸ್ಕರ ರಕ್ಷಣೆಗಾಗಿ ಪಾಂಟಿಫಿಕಲ್ ಆಯೋಗವು ಸಾರ್ವಜನಿಕ ಹೇಳಿಕೆ ಮತ್ತು ಪ್ರಾರ್ಥನೆಯ ಮೂಲಕ ಕಾರ್ಡಿನಲ್ ಮತದಾರರಿಗೆ ತನ್ನ ಆಧ್ಯಾತ್ಮಿಕ ನಿಕಟತೆ ಮತ್ತು ಬೆಂಬಲವನ್ನು ವ್ಯಕ್ತಪಡಿಸಿದೆ.
ಧರ್ಮಸಭೆಯಾದ್ಯಂತ ರಕ್ಷಣೆಯ ಸಂಸ್ಕೃತಿಯನ್ನು ಉತ್ತೇಜಿಸುವ ಜವಾಬ್ದಾರಿಯನ್ನು ಹೊಂದಿರುವ ಆಯೋಗವು, ಈ ಕ್ಷಣದ ಗಂಭೀರತೆಯನ್ನು ಗಮನಿಸಿತು ಮತ್ತು ಪವಿತ್ರಾತ್ಮದ ನೇತೃತ್ವದ ವಿವೇಚನೆಗಾಗಿ ಪ್ರಾರ್ಥಿಸುವಲ್ಲಿ ಸಾರ್ವತ್ರಿಕ ಧರ್ಮಸಭೆಯೊಂದಿಗೆ ಒಟ್ಟಾಗಿ ನಿಲ್ಲುತ್ತದೆ ಎಂದು ಹೇಳಿದೆ.
"ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟ ಮತ್ತು ಧರ್ಮಸಭೆಯೊಳಗಿನ ನಿಂದನೆಯಿಂದ ಹಾನಿಗೊಳಗಾದವರ ಕೂಗಿನಿಂದ ರೂಪುಗೊಂಡ ವಿವೇಚನೆಗಾಗಿ ನಾವು ನಮ್ಮ ಧ್ವನಿಯನ್ನು ದೇವರ ಜನರೊಂದಿಗೆ ಒಗ್ಗೂಡಿಸುತ್ತೇವೆ" ಎಂದು ಹೇಳಿಕೆ ತಿಳಿಸಿದೆ.
ಕಾರ್ಡಿನಲ್ಸ್ ಕಾಲೇಜಿನ ಮುಂದಿರುವ ಆಳವಾದ ಜವಾಬ್ದಾರಿಯನ್ನು ಅಂಗೀಕರಿಸಿದ ಆಯೋಗವು, ಚರ್ಚ್ ಜೀವನದಲ್ಲಿ ದುರ್ಬಲರನ್ನು ರಕ್ಷಿಸುವ ಮಹತ್ವವನ್ನು ಎತ್ತಿ ತೋರಿಸಿತು.
"ಪೇತ್ರರ ಮುಂದಿನ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಗಂಭೀರ ಜವಾಬ್ದಾರಿಯನ್ನು ಹೊತ್ತಿರುವ ಕಾರ್ಡಿನಲ್‌ಗಳಿಗಾಗಿ ನಾವು ಪ್ರಾರ್ಥಿಸುತ್ತೇವೆ, ಅವರು ಧೈರ್ಯ, ನಮ್ರತೆ ಮತ್ತು ರಕ್ಷಣೆಗೆ ಬದ್ಧತೆಯಿಂದ ಮಾರ್ಗದರ್ಶನ ಪಡೆಯಲಿ."
ರೋಮ್‌ನಲ್ಲಿ ಕಾರ್ಡಿನಲ್‌ಗಳ ನಡುವೆ ನಡೆದ ಕಾನ್ಕ್ಲೇವ್ ಪೂರ್ವ ಚರ್ಚೆಗಳಲ್ಲಿ ನೊಂದವರ ರಕ್ಷಣೆಯು ಆದ್ಯತೆಯಾಗಿದೆ ಎಂದು ಆಯೋಗವು ಪ್ರೋತ್ಸಾಹದೊಂದಿಗೆ ಗಮನಿಸಿತು. ಧರ್ಮಸಭೆಯ ವಿಶ್ವಾಸಾರ್ಹತೆ ಮತ್ತು ನೈತಿಕ ಅಧಿಕಾರವು "ನಿಜವಾದ ಹೊಣೆಗಾರಿಕೆ, ಪಾರದರ್ಶಕತೆ ಮತ್ತು ನ್ಯಾಯದಲ್ಲಿ ಬೇರೂರಿರುವ ಕ್ರಿಯೆಯನ್ನು ಅವಲಂಬಿಸಿದೆ" ಎಂದು ಅದು ದೃಢಪಡಿಸಿತು.